ಸಿನಿಮಾ ನಿರ್ಮಾಣದಲ್ಲಿರುವ ಅನೇಕ ಸವಾಲುಗಳಲ್ಲಿ ಚಿತ್ರೀಕರಣಕ್ಕೆ ಯೋಗ್ಯವಾದ ಸ್ಥಳ ಗುರುತಿಸುವುದೂ ಒಂದು. ಹಲವು ನಿರ್ಮಾಪಕರ ಪ್ರಕಾರ ಇದು ಅತ್ಯಂತ ಕಷ್ಟದ ಕೆಲಸ. ನಿರ್ಮಾಪಕರ ಈ ಕಷ್ಟವನ್ನು ಪರಿಹರಿಸಲು ಬೆಂಗಳೂರು ಮೂಲದ ಉದ್ಯಮಿ ಐವಿ ಮನೋಹರ ಮತ್ತು ಅವರ ಪತಿ ಬೆಂಜಮಿನ್ ಜಾಕೋಬ್ 2018ರಲ್ಲಿ ‘ಫಿಲ್ಮೇಪಿಯಾ’ ಆರಂಭಿಸಿದರು.

‘ಫಿಲ್ಮೇಪಿಯಾ’ ಒಂದು ವಿಶಿಷ್ಟವಾದ ವೇದಿಕೆ. ಈ ವೇದಿಕೆ ಮೂಲಕ, ಜನರೇ ಸೂಚಿಸಿರುವ ಸ್ಥಳಗಳನ್ನು ಹುಡುಕಾಡಿ ತಮಗೆ ಬೇಕಾದ ಸ್ಥಳವನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಳ್ಳುವ ಅವಕಾಶ ಚಿತ್ರೋದ್ಯಮಿಗಳಿಗೆ ಇದೆ. ಈ ಸ್ಥಳಗಳು ಜನಸಾಮಾನ್ಯರ ಒಡೆತನದಲ್ಲೇ ಇರುತ್ತವೆ. ಚಿತ್ರೋದ್ಯಮಿಗಳು ಸ್ಥಳಗಳನ್ನು ನೇರವಾಗಿ ಬುಕ್ ಮಾಡಬಹುದು. ಇದರಿಂದ ಆ ಸ್ಥಳದ ಮಾಲೀಕರಿಗೂ ಒಂದಿಷ್ಟು ಆದಾಯ ಸಿಗುತ್ತದೆ.

‘ಸಿನಿಮಾ ಮತ್ತು ಪ್ರವಾಸಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ನಾವು ಹವ್ಯಾಸಿ ವೆಬ್‌ಸೈಟ್ ಒಂದನ್ನು 2008ರಲ್ಲಿ ಆರಂಭಿಸಿ, ಅದರಲ್ಲಿ ಯಾವ ಸಿನಿಮಾದ ಚಿತ್ರೀಕರಣ ಯಾವ ಸ್ಥಳದಲ್ಲಿ ಆಯಿತು ಎಂಬ ವಿವರ ನೀಡುತ್ತಿದ್ದೆವು. ವೆಬ್‌ಸೈಟ್ ಬಹಳ ಜನಪ್ರಿಯವಾಯಿತು. ಕ್ರಮೇಣ ಚಿತ್ರೋದ್ಯಮಿಗಳು ಸ್ಥಳ ಹುಡುಕಿಕೊಡುವಂತೆ, ಸಲಹೆ ನೀಡುವಂತೆ ನಮ್ಮನ್ನು ಸಂಪರ್ಕಿಸಲಾರಂಭಿಸಿದರು’ ಎಂದು ಐವಿ ನೆನಪಿಸಿಕೊಳ್ಳುತ್ತಾರೆ.

2008ರಿಂದ 2018ರ ನಡುವೆ ಐವಿ ಮತ್ತು ಅವರ ಪತಿ ಇದರಲ್ಲಿರುವ ಅವಕಾಶಗಳ ಕುರಿತು ಅಧ್ಯಯನ ನಡೆಸಿದರು. ಚಿತ್ರೀಕರಣದ ಸ್ಥಳಗಳನ್ನು ಹೇಗೆ ಗುರುತಿಸಲಾಗುತ್ತದೆ ಮತ್ತು ಆ ಸ್ಥಳಗಳನ್ನು ಚಿತ್ರೋದ್ಯಮಿಗಳಿಗೆ ಹೇಗೆ ತಿಳಿಸಲಾಗುತ್ತದೆ, ಈ ಪ್ರಕ್ರಿಯೆಯಲ್ಲಿ ಇರುವ ನ್ಯೂನತೆಗಳು ಏನು ಎಂಬುದನ್ನು ಗಮನಿಸಿದರು. ಅದುವರೆಗೂ ಐ.ಟಿ. ಕಂಪನಿಯೊಂದರಲ್ಲಿ ಉದ್ಯೋಗಿಗಳಾಗಿದ್ದ ಇಬ್ಬರೂ, ಅರೆಕಾಲಿಕ ಕೆಲಸದ ರೂಪದಲ್ಲಿ ಸಿನಿಮಾ ಯೋಜನೆಗಳನ್ನೂ ಕೈಗೆತ್ತಿಕೊಳ್ಳಲಾರಂಭಿಸಿದರು. 2018ರಲ್ಲಿ ಐ.ಟಿ. ಕೆಲಸ ತೊರೆದು ‘ಫಿಲ್ಮೇಪಿಯಾ’ ಆರಂಭಿಸಿದರು. ಸಾವಧಾನದಿಂದ ಅವರು ಕಟ್ಟಿದ ಉದ್ಯಮದಿಂದಾಗಿ ಚಿತ್ರೋದ್ಯಮಿಗಳು ತಮ್ಮ ಸಿನಿಮಾ, ಜಾಹೀರಾತು ಚಿತ್ರೀಕರಣ, ಒಟಿಟಿಗಾಗಿನ ಕಾರ್ಯಕ್ರಮಗಳು, ಮ್ಯೂಸಿಕ್ ವಿಡಿಯೊ ಇತ್ಯಾದಿಗಳಿಗೆ ಇವರನ್ನು ಸಂಪರ್ಕಿಸುತ್ತಿದ್ದಾರೆ.

ಐವಿ ಮತ್ತು ಅವರ ಪತಿ ಈ ಉದ್ಯಮಕ್ಕೆ ಬಂದಿದ್ದು ಆಕಸ್ಮಿಕವೇ. ಆದರೆ ಇಲ್ಲಿರುವ ಅವಕಾಶಗಳನ್ನು ಬಹಳ ಬೇಗನೆ ಗುರುತಿಸಿ ಅವುಗಳನ್ನು ತಮ್ಮ ಬೆಳವಣಿಗೆಗೆ ಬಳಸಿಕೊಂಡರು. ಅಲ್ಲಿಯವರೆಗೆ ಚಿತ್ರೀಕರಣದ ಸ್ಥಳಗಳನ್ನು ಡಿಜಿಟಲ್ ಆಗಿ ತೋರಿಸುವ, ವಿವರಿಸುವ ವ್ಯವಸ್ಥೆ ಸರಿಯಾಗಿ ಇರಲಿಲ್ಲ. ‘ಫಿಲ್ಮೇಪಿಯಾ’ವು ಚಿತ್ರೋದ್ಯಮಿಗಳಿಗೆ ಕುಳಿತಲ್ಲಿಯೇ ಸ್ಥಳದ ವೈಶಿಷ್ಟ್ಯ ತೋರಿಸುವ ಸಾಧ್ಯತೆ ವಿಸ್ತರಿಸಿತು.

ತಂತ್ರಜ್ಞಾನವನ್ನು ಬಳಸಿಕೊಂಡು ಐವಿ ಅವರು ಅನೇಕ ವಿಶಿಷ್ಟ ಸ್ಥಳಗಳನ್ನು, ವಿವರಗಳನ್ನು ಬೆರಳ ತುದಿಯಲ್ಲಿಯೇ ಉದ್ಯಮಿಗಳಿಗೆ ತೋರಿಸಿದರು. ಈ ಪರಿಕಲ್ಪನೆಗೆ ಆರಂಭದಲ್ಲಿ ಬಹಳ ಮೆಚ್ಚುಗೆ ಸಿಗಲಿಲ್ಲ. ‘ಫಿಲ್ಮೇಪಿಯಾ’ ನೀಡಬಹುದಾದ ಸೇವೆಗಳ ಬಗ್ಗೆ ಹಲವರಲ್ಲಿ ಅನುಮಾನಗಳಿದ್ದವು. ಆದರೆ ಪರಿಸ್ಥಿತಿಯುಕ್ರಮೇಣ ಬದಲಾಯಿತು. ‘ಫಿಲ್ಮೇಪಿಯಾ’ದ ಉದ್ಯಮ ಈಗ ಬೆಳೆದು ನಿಂತಿದೆ. ಆದರೆ ಕೋವಿಡ್–19 ಪರಿಸ್ಥಿತಿಯಿಂದ ಐವಿ ತಮ್ಮ ವಹಿವಾಟನ್ನು ಬದಲಿಸಿಕೊಳ್ಳಬೇಕಾಯಿತು.

‘ನಾವು ಸುಸ್ಥಿರ ಉತ್ಪಾದನಾ ಚಟುವಟಿಕೆಗಳನ್ನು ಅನುಸರಿಸಬೇಕು. ಉದ್ಯಮದ ಸಿಬ್ಬಂದಿ ಮತ್ತ ಉದ್ಯಮ ಎಂಥ ಪರಿಸ್ಥಿತಿಯಲ್ಲಿಯೂ ನಡೆಯುತ್ತಿರುವಂತೆ ಆಗಲು ನಾವು ಮೀಸಲು ಹಣ ಹೊಂದಿರಬೇಕು’ ಎನ್ನುವುದು ಅವರ ಅಭಿಪ್ರಾಯ. ‘ನಾವು ತಪ್ಪುಗಳನ್ನು ಮಾಡುತ್ತಲೇ ಹೊಸ ಪಾಠಗಳನ್ನು ಕಲಿತು ಇಂದು ಬೆಳೆದು ನಿಂತಿದ್ದೇವೆ. ನಾವು ಚಿತ್ರೋದ್ಯಮದ ಹಿನ್ನೆಲೆ ಹೊಂದಿದ್ದವರೇ ಅಲ್ಲ. ಹಾಗಾಗಿ ನಾವು ತಪ್ಪು ಮಾಡುವುದು ಸಹಜವಾಗಿತ್ತು. ಅನೇಕ ಅಡ್ಡಿ–ಆತಂಕಗಳು ಇದ್ದವು. ಆದರೆ ನಾವು ಕಲಿಯುತ್ತಲೇ ಹೋದೆವು. ನಮ್ಮ ಉದ್ಯಮವನ್ನು ಬೆಳೆಸಿದೆವು’ ಎಂದು ಐವಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.