ಜಾನಪದ ಕಲಾತಂಡಗಳಲ್ಲಿ ಪೂಜಾ ಕುಣಿತ ಡೊಳ್ಳು ಕುಣಿತ ವೀರಗಾಸೆ ಕಲಾವಿದರ ಮೆರುಗು
ಪೂಜಾ ಕುಣಿತದಲ್ಲಿ ಪುನೀತಾ ಕೀರ್ತನಾ
ಅರಣ್ಯ ಭವನದಲ್ಲಿ ವಾಸ್ತವ್ಯ
ಗಜಪಯಣದ ಮೊದಲ ತಂಡದಲ್ಲಿದ್ದ ಆನೆಗಳು ವೀರನಹೊಸಹಳ್ಳಿಯ ಆಶ್ರಮ ಶಾಲೆ ಮೈದಾನ ಬಳಿಯಿಂದ ಸಂಜೆ 4ಕ್ಕೆ ಮೈಸೂರಿನತ್ತ ಪಯಣ ಬೆಳೆಸಿದವು. ನಗರದ ಅರಣ್ಯ ಭವನಕ್ಕೆ ಸಂಜೆ 5.30ಕ್ಕೆ ಬಂದು ವಾಸ್ತವ್ಯ ಹೂಡಿದವು. ಆ.23ಕ್ಕೆ ಗಜಪಡೆ ಅರಮನೆ ಪ್ರವೇಶಿಸಲಿದೆ. 2ನೇ ಹಂತದಲ್ಲಿ ಮಹೇಂದ್ರ ಪ್ರಶಾಂತ ಸುಗ್ರೀವ ಲಕ್ಷ್ಮಿ ಹಿರಣ್ಯ ಆನೆಗಳು ಅರಮನೆಗೆ ಪ್ರವೇಶಿಸಲಿದ್ದು ದಿನಾಂಕ ನಿಗದಿಯಾಗಬೇಕಿದೆ. ಗಜಪಡೆ ಮಾವುತರಿಗೆ ವಿಮೆ: ‘ದಸರೆ ಗಜಪಡೆ ಮಾವುತರು ಹಾಗೂ ಕಾವಾಡಿಗಳಿಗೆ ಜಿಲ್ಲಾಡಳಿತ ₹ 2.37 ಕೋಟಿ ವಿಮೆ ಮಾಡಿಸಿದೆ. ಗಂಡಾನೆಗಳಿಗೆ ₹ 5 ಲಕ್ಷ ಹೆಣ್ಣಾನೆಗಳಿಗೆ ₹ 4.5 ಲಕ್ಷ ಮಾವುತ ಕಾವಾಡಿಗಳಿಗೆ ತಲಾ ₹ 2 ಲಕ್ಷ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವಿಮಾ ಸೌಲಭ್ಯ ದೊರೆಯಲಿದೆ’ ಎಂದು ಡಿಸಿಎಫ್ ಐ.ಬಿ.ಪ್ರಭುಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. ‘ಸಾರ್ವಜನಿಕರ ಆಸ್ತಿಪಾಸ್ತಿ ನಾಗರಿಕರಿಗೆ ಪ್ರತ್ಯೇಕ ₹ 50 ಲಕ್ಷ ವಿಮೆ ಸೌಲಭ್ಯ ಕಲ್ಪಿಸಿದೆ. ಅ.15ರವರೆಗೆ ಚಾಲ್ತಿಯಲ್ಲಿರುವಂತೆ ದಿ ನ್ಯೂ ಇಂಡಿಯಾ ಇನ್‌ಶ್ಯೂರೆನ್ಸ್ ಕಂಪನಿಯಲ್ಲಿ ವಿಮೆ ಮಾಡಿಸಿದ್ದು ಅದಕ್ಕೆ ₹ 71 ಸಾವಿರ ಪ್ರೀಮಿಯಂ ಅನ್ನು ಜಿಲ್ಲಾಡಳಿತ ಪಾವತಿಸಿದೆ’ ಎಂದು ಮಾಹಿತಿ ನೀಡಿದರು.
ಮೊದಲ ಬಾರಿ ದಸರೆಯಲ್ಲಿ ಪಾಲ್ಗೊಳ್ಳುತ್ತಿರುವ ‘ಏಕಲವ್ಯ’ ಆನೆ ಮತ್ತವನ ಹಿಂಬಾಗಿದ ಕಿವಿಗಳು –ಪ್ರಜಾವಾಣಿ ಚಿತ್ರ
ಅರ್ಜುನನಿಲ್ಲದ ದಸರೆ
9 ಬಾರಿ ಅಂಬಾರಿ ಹೊತ್ತಿದ್ದ ‘ಅರ್ಜುನ’ ಅನುಪಸ್ಥಿತಿಯು ‘ಗಜಪಯಣ’ದಲ್ಲಿ ಕಾಡಿತ್ತು. ಕಳೆದ ಡಿಸೆಂಬರ್‌ನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಅದು ಮೃತಪಟ್ಟಿತ್ತು. ಪ್ರಹ್ಲಾದರಾವ್ ಮಾತನಾಡಿ ‘ಈ ಬಾರಿ ದಸರೆ ಆರಂಭದ ಕಾರ್ಯ ಚೆನ್ನಾಗಿಯೇ ಆಗುತ್ತಿದ್ದು ತುಂಬಾ ಸಂತೋಷವಾಗುತ್ತಿದೆ. ಆದರೆ ಒಂದು ಕಡೆ ನಮ್ಮ ಅರ್ಜುನ ಇಲ್ಲವಲ್ಲವೆಂದೂ ಬೇಸರವೂ ಆಗುತ್ತಿದೆ’ ಎಂದರು. ‘ಬಹು ಎತ್ತರದ ದೊಡ್ಡ ಆನೆ. ಅದನ್ನು ನೋಡುತ್ತಿದ್ದರೆ ಖುಷಿಯಾಗುತ್ತಿತ್ತು. ಗಜ ಗಾಂಭೀರ್ಯ ಎಂಬುದಕ್ಕೇ ಅರ್ಜುನನೇ ಅನ್ವರ್ಥ. ಈ ದಿನವೂ ಆನೆಗಳ ಹೆಸರಿನಲ್ಲಿ ಪೂಜೆ ಮಾಡುವಾಗ ನನ್ನ ಬಾಯಿಯಲ್ಲಿ ಅರ್ಜುನನ ಹೆಸರೇ ಬಂದುಬಿಡುತ್ತಿತ್ತು. ಅಷ್ಟರ ಮಟ್ಟಿಗೆ ನಮ್ಮ ಮನಸ್ಸನ್ನು ಸೆಳೆದುಕೊಂಡಿದ್ದಾನೆ’ ಎಂದು ಹೇಳಿದರು.