ಬಾಗಲಕೋಟೆ: ದೇಶವನ್ನು ಕಟ್ಟುವಲ್ಲಿ ಸದೃಢ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅದಕ್ಕೆ ವಿದ್ಯಾರ್ಥಿಗಳು ದೇಶವನ್ನು ರೂಪಿಸುವ ರೂವಾರಿಗಳಾಗಿದ್ದಾರೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಎನ್. ಪಾಟೀಲ ಹೇಳಿದರು.

ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಬುದ್ಧ ರೋವರ್ಸ್ ಮತ್ತು ಸೇವಾಭಾರತಿ ರೇಂಜರ್ಸ್ ಘಟಕಗಳು, ರೆಡ್ಕ್ರಾಸ್, ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳಿಗೆ ಸೂಕ್ತವಾದ ತರಬೇತಿ ನೀಡಿ, ದೇಶದ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡಬೇಕು. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ದೇಶ ಕಟ್ಟುವ ಮನೋಭಾವ ಬೆಳೆಸುತ್ತವೆ. ಇದರಿಂದ ದೇಶ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುನ್ನಡೆಯಲು ಸಾಧ್ಯ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಮಾತನಾಡಿ, ‘ವಿದ್ಯಾರ್ಥಿಗಳು ಜೀವನದಲ್ಲಿ ಯೋಗ ಮತ್ತು ಯೋಗ್ಯತೆ ಗಳಿಸಿಕೊಂಡು ಅಂದುಕೊಂಡ ಕಾರ್ಯ ಮಾಡಿದಾಗ ಫಲ ದೊರೆಯುತ್ತದೆ’ ಎಂದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಎಸ್.ಎಸ್. ದಳವಾಯಿ, ಸಾಂಸ್ಕೃತಿಕ ವಿಭಾಗ ಸಂಚಾಲಕ ಜಿ.ಜಿ ಹಿರೇಮಠ, ನೀಲಪ್ಪ ಕುರಿ, ಭಾಸ್ಕರ ಮುಂಡೆವಾಡಿ, ಶಶಿಧರ ಕುಂಬಾರ, ಸುಮಂಗಲಾ ಮೇಟಿ, ಪರಸಪ್ಪ ತಳವಾರ ಇದ್ದರು. 22 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.