ಬಾಗಲಕೋಟೆ: ಹಿಂದುಳಿದ, ದಲಿತರು ಸೇರಿದಂತೆ ವಿವಿಧ ಸಮಾಜಗಳ ಸಾಮಾಜಿಕ ನ್ಯಾಯಕ್ಕಾಗಿ ರಾಯಣ್ಣ ಬ್ರಿಗೇಡ್ ಪುನರ್ ಸಂಘಟನೆ ಮಾಡಲು ಹಲವರು ಸಲಹೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನೊಬ್ಬನೇ ತೀರ್ಮಾನ ತಗೆದುಕೊಳ್ಳುವುದಿಲ್ಲ. ಚುನಾವಣೆ ನಿಲ್ಲುವ ನಿರ್ಧಾರವನ್ನೂ ನಾನೊಬ್ಬನೇ ತೆಗೆದುಕೊಂಡ
ದ್ದಲ್ಲ. ಫಲಿತಾಂಶ ಬಂದ ಮರು ದಿನವೇ ತೀರ್ಮಾನ ಆಗಲ್ಲ. ರಾಜ್ಯದಲ್ಲಿನ ಎಲ್ಲ ಹಿತೈಷಿಗಳನ್ನು ಕರೆದು ಚರ್ಚೆ ಮಾಡುತ್ತೇನೆ. ಅಪ್ಪ, ಮಕ್ಕಳಿಂದ ಬಿಜೆಪಿ ಮುಕ್ತವಾಗಬೇಕು. ಹಿಂದುತ್ವದ ಪಕ್ಷವಾಗಿ ಉಳಿಯಬೇಕು ಎನ್ನುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.