ಜಮಖಂಡಿ: ವಿಜಯಪುರ ಜಿಲ್ಲೆಯ ಹುಣಶ್ಯಾಳದ ಆನಂದ ದೇವರನ್ನು ಓಲೇಮಠದ ನೂತನ ಪೀಠಾಧಿಕಾರಿಯನ್ನಾಗಿ ನೇಮಕ ಮಾಡಲು ಶುಕ್ರವಾರ ಮಠದಲ್ಲಿ ನಡೆದ ವಿವಿಧ ಮಠಾಧೀಶರ ಹಾಗೂ ಪ್ರಮುಖರ ಸಭೆಯಲ್ಲಿ ನಿರ್ಧರಿಸಲಾಯಿತು.

ಓಲೇಮಠ ಅಭಿನವ ಚನ್ನಬಸವ ಸ್ವಾಮೀಜಿ ಲಿಂಗೈಕ್ಯರಾದ ಕಾರಣ ನೂತನ ಉತ್ತರಾಧಿಕಾರಿ ಕುರಿತು ಮಠದಲ್ಲಿ ಸಭೆ ನಡೆಯಿತು.

ಹಂದಿಗುಂದದ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಲಿಂಗೈಕ್ಯ ಅಭಿನವ ಚನ್ನಬಸವ ಸ್ವಾಮೀಜಿ ಅವರು ಅಪಾರ ಪಾಂಡಿತ್ಯ ಸಂಪಾದಿಸಿದ್ದರು. ಎಲ್ಲರೊಂದಿಗೂ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಅವರು ಹಾಕಿಕೊಟ್ಟಂಥ ಓಲೇಮಠದ ಪರಂಪರೆ ಮುನ್ನಡೆಯಬೇಕು. ಆ ದಿಸೆಯಲ್ಲಿ ಮಠಕ್ಕೆ ನ. 19 ರಂದು ನಡೆಯುವ ಪೂಜ್ಯರ ಸ್ಮರಣೋತ್ಸವ-ನುಡಿನಮನ ಕಾರ್ಯಕ್ರಮದಲ್ಲಿ ಉತ್ತರಾಧಿಕಾರಿಯನ್ನು ನೇಮಕ ಮಾಡಿಕೊಳ್ಳಲು ಅಭಿಪ್ರಾಯ ತಿಳಿಸಿ’ ಎಂದು ಸೂಚಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಎನ್.ಎಸ್. ದೇವರವರ, ಬಿ.ಎಸ್. ಸಿಂಧೂರ, ಕಾಡು ಮಾಳಿ, ಕೆ.ಕೆ. ತುಪ್ಪದ, ಸಿ.ಎಸ್. ಬಾಂಗಿ, ಈಶ್ವರ ಕರಬಸನ್ನವರ, ಶಂಕರ ಹನಗಂಡಿ, ಅಶೋಕ ಬರಗುಂಡಿ, ಅಪ್ಪಾಸಾಬ ದೇವರವರ, ಶಿವಾನಂದ ಕೊಣ್ಣೂರ ಮಾತನಾಡಿ ಸ್ಮರಣೋತ್ಸವದಂದೇ ಉತ್ತರಾಧಿಕಾರಿಗಳನ್ನು ನೇಮಿಸಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ‘ನಾಡಿನ ಶ್ರೇಷ್ಠ ಮಠಗಳಲ್ಲಿ ಓಲೇಮಠವೂ ಒಂದು. ಈ ಮಠದ ಪೀಠಾಧಿಪತಿಗಳಿಂದ ಈ ನಾಡು ಬೆಳಗುವಂತಾಗಲಿ’ ಎಂದರು.

ಗದಗ ತೊಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ತೋಂಟದ ಸಿದ್ಧರಾಮ ಶ್ರೀ ಮಾತನಾಡಿ, ‘ಮಠದ ಸ್ವಾಮೀಜಿಗಳ ಮೇಲೆ ಅಷ್ಟೇ ಎಲ್ಲ ಜವಾಬ್ದಾರಿ ಇರುವುದಿಲ್ಲ. ಮಠದ ಜೊತೆ ಎಲ್ಲ ಭಕ್ತರು ಇರಬೇಕು. ಮಠದ ಆಸ್ತಿ ಭಕ್ತರು, ಮಠದ ಮಾಲೀಕರು ಭಕ್ತರೇ ಆಗಿದ್ದಾರೆ. ಎಲ್ಲರ ಅಭಿಪ್ರಾಯದಂತೆ ಆನಂದ ದೇವರು ಬಸವಾನುಯಾಯಿಗಳು, ಲಿಂಗೈಕ್ಯ ಚನ್ನಬಸವ ಸ್ವಾಮಿಜಿ ಅವರ ಸೇವೆಯನ್ನು ಕೆಲಕಾಲ ಮಾಡಿದ್ದಾರೆ. ಅವರು ಈ ಮಠಕ್ಕೆ ಸೂಕ್ತರಾಗುತ್ತಾರೆ. ಅವರನ್ನೇ ಪೂಜ್ಯರ ಸ್ಮರಣೋತ್ಸವ ದಿನದಂದು ಅಧಿಕೃತವಾಗಿ ಘೋಷಣೆಯೊಂದಿಗೆ ಶಿರೋವಸ್ತ್ರ, ರುದ್ರಾಕ್ಷಿಮಾಲೆ ಹಾಕುವುದರೊಂದಿಗೆ ಜವಾಬ್ದಾರಿಯನ್ನು ನೀಡಲಾಗುವುದು’ ಎಂದರು.

ನಾಗನೂರ ರುದ್ರಾಕ್ಷಿಮಠದ ಅಲ್ಲಮಪ್ರಭು ಶ್ರೀ, ಉಗರಗೋಳದ ಮಹಾಂತ ಸ್ವಾಮೀಜಿ, ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಶ್ರೀ, ಮುತ್ತಿನಕಂತಿಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ, ಕೊಣ್ಣೂರಿನ ವಿಶ್ವ ಪ್ರಭುದೇವ ಶಿವಾಚಾರ್ಯ ಶ್ರೀ, ಕಂಕನವಾಡಿ, ಕಡಕೋಳ, ಜಮಖಂಡಿ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

Highlights - 19ರಂದು ಸ್ಮರಣೋತ್ಸವದಲ್ಲಿ ಪೀಠಾಧಿಕಾರಿ ಅಧಿಕೃತ ನೇಮಕ ಓಲೇಮಠದ ಪರಂಪರೆ ಮುಂದುವರಿಸಲು ಸಲಹೆ ಮಠದ ಭಕ್ತರು, ವಿವಿಧ ಮಠಾಧೀಶರ ಅಭಿಮತದೊಂದಿಗೆ ಸ್ವಾಮೀಜಿ ನೇಮಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.