ಬಳ್ಳಾರಿ: ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಮರಕುಂಬಿ ಪ್ರಕರಣದ 98 ಮಂದಿ ಸೇರಿ ಒಟ್ಟು 116 ಅಪರಾಧಿಗಳನ್ನು ಶನಿವಾರ ಒಂದೇ ದಿನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಇಲ್ಲಿನ ಕಾರಾಗೃಹದ ಇತಿಹಾಸದಲ್ಲೇ ಇಷ್ಟು ಸಂಖ್ಯೆಯ ಅಪರಾಧಿಗಳು ಒಂದೇ ದಿನ ಬಿಡುಗಡೆಯಾಗಿದ್ದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮರಕುಂಬಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 98 ಮಂದಿ ಮತ್ತು ರಾಯಚೂರಿನ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 18 ಮಂದಿ ಬಿಡುಗಡೆಯಾದರು’ ಎಂದು ಜೈಲು ಅಧೀಕ್ಷಕಿ ಲತಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮರಕುಂಬಿ ಪ್ರಕರಣದಲ್ಲಿ ವಾಸ್ತವವಾಗಿ 99 ಮಂದಿ ಬಿಡುಗಡೆ ಆಗಬೇಕಿತ್ತು. ಆದರೆ, ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾದ ದಿನವೇ ಮೃತಪಟ್ಟಿದ್ದ ರಾಮಣ್ಣ ಎಂಬುವರ ಹೆಸರು ಮತ್ತು ಜೈಲಿನಲ್ಲಿದ್ದ ಮತ್ತೊಬ್ಬ ಅಪರಾಧಿ ಹೆಸರು ಒಂದೇ ಆಗಿತ್ತು. ಇದರಿಂದ ಉಂಟಾದ ಗೊಂದಲದಿಂದ ರಾಮಣ್ಣ ಎಂಬ ಆಪರಾಧಿಯ ಬಿಡುಗಡೆಯನ್ನು ಮುಂದೂಡಲಾಗಿದೆ. ಅದಕ್ಕೆ ಅಪರಾಧಿಗಳ ಬಿಡುಗಡೆ ಪ್ರಕ್ರಿಯೆಯೂ ವಿಳಂಬವಾಗಿದೆ. ರಾಮಣ್ಣ ಅವರ ಹೆಸರಲ್ಲಿ ಪ್ರತ್ಯೇಕ ಬಿಡುಗಡೆ ಆದೇಶ ಬಂದ ಬಳಿಕ ಬಿಡುಗಡೆ ಮಾಡಲಾಗುವುದು’ ಎಂದು ಅವರು ತಿಳಿಸಿದರು.

ಸದ್ಯ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ 200 ಮಂದಿ ಶಿಕ್ಷಾಬಂಧಿಗಳು, 186 ವಿಚಾರಣಾಧಿನ ಕೈದಿಗಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.