ಬಳ್ಳಾರಿ: ಬಡವರ ಹಸಿವು ನೀಗಿಸಲೆಂದು ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಅನ್ನಭಾಗ್ಯ’ ಯೋಜನೆಯ ಅಕ್ಕಿಯನ್ನು ಜನರಿಂದಲೇ ಅಕ್ರಮವಾಗಿ ಸಂಗ್ರಹಿಸುತ್ತಿರುವ ಖದೀಮರು ಕರ್ನಾಟಕ ಮತ್ತು ಮಹಾರಾಷ್ಟ್ರದ ಮಿಲ್ಗಳಿಗೆ ಸಾಗಿಸುವುದಾಗಿ ಗೊತ್ತಾಗಿದೆ.

ರಾಜ್ಯದ ಬಿಪಿಎಲ್ ಕುಟುಂಬಗಳ ಪ್ರತಿ ಫಲಾನುಭವಿಗೆ ಸದ್ಯ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇನ್ನುಳಿದ 5 ಕೆ.ಜಿ. ಬದಲಿಗೆ ₹34ರಂತೆ ₹170 ಪರಿಹಾರ ನೀಡಲಾಗುತ್ತಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಅಂದಾಜು 2.69 ಲಕ್ಷ (2,69,134) ‘ಅನ್ನಭಾಗ್ಯ’ ಫಲಾನುಭವಿಗಳಿದ್ದಾರೆ. ಅದೇ ಹೊತ್ತಲ್ಲೇ, ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ, ಮಿಲ್ಗಳಿಗೆ ಮಾರಾಟ ಮಾಡುವ 5–10 ಗುಂಪುಗಳೂ ಸಕ್ರಿಯವಾಗಿವೆ.

‘ಪ್ರತಿ ತಾಲ್ಲೂಕಿನಲ್ಲೂ ಏಜೆಂಟರನ್ನು ಹೊಂದಿರುವ ಈ ಗುಂಪುಗಳು ₹10ರಿಂದ ₹12ರ ಪಾವತಿಸಿ ಬಡವರಿಂದ ಅಕ್ಕಿ ಸಂಗ್ರಹಿಸುತ್ತಿವೆ. ಅದನ್ನು ಗಂಗಾವತಿ, ಭದ್ರಾವತಿ, ಚಳ್ಳಕೆರೆ, ತುಮಕೂರು, ಮಸ್ಕಿ ಮತ್ತು ಮಹಾರಾಷ್ಟ್ರದ ಮಿಲ್ಗಳಿಗೆ ಸಾಗಿಸಲಾಗುತ್ತಿದೆ. ಮಿಲ್ಗಳು ಅಕ್ಕಿ ಪಾಲಿಷ್ ಮಾಡಿ, ದುಬಾರಿ ಬೆಲೆಯ ಉತ್ಕೃಷ್ಟ ಗುಣಮಟ್ಟದ ಅಕ್ಕಿಯೊಂದಿಗೆ ಬೆರೆಸಿ ಮಾರಾಟ ಮಾಡುತ್ತಿವೆ’ ಎಂದು ಆಹಾರ ಮತ್ತು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಯಾರಿಗೆಷ್ಟು ಪಾಲು?: ‘ಮಿಲ್ಗಳು ದಂಧೆಕೋರರಿಗೆ ಕೆ.ಜಿ. ಅಕ್ಕಿ ಮೇಲೆ ₹20–₹25 ನೀಡುತ್ತಿವೆ. ಆಹಾರ ಇಲಾಖೆಗೆ 50 ಪೈಸೆ ಸಿಗುತ್ತದೆ. ಪೊಲೀಸ್ ಇಲಾಖೆಗೆ ₹1–₹2 ಸಿಗುತ್ತಿದೆ. ಮಿಲ್ಗಳು ಕೆ.ಜಿಗೆ ₹50–₹60 ಬೆಲೆಯ ಅಕ್ಕಿಯೊಂದಿಗೆ ಈ ಅಕ್ಕಿ ಮಿಶ್ರಣ ಮಾಡಿ ಮಾರುತ್ತಿವೆ. ಬಳ್ಳಾರಿ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ವಿತರಿಸಲಾಗುವ ಶೇ 45–50ರಷ್ಟು ಅಕ್ಕಿ ಈ ದಂಧೆಗೆ ಬಳಕೆಯಾಗುತ್ತಿದೆ ’ ಎಂದು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.

ಗಂಗಾವತಿ ಮತ್ತು ಸಿರುಗುಪ್ಪದಲ್ಲಿ ಬೆಳೆಯಲಾಗುವ ಸೋನಾಮಸೂರಿ ಅಕ್ಕಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಅನ್ನಭಾಗ್ಯದ ಅಕ್ಕಿಯನ್ನು ಸೋನಾಮಸೂರಿಗೂ ಬೆರೆಸಲಾಗುತ್ತಿದೆ ಎನ್ನಲಾಗಿದೆ.

‘ಬಳ್ಳಾರಿ ಜಿಲ್ಲೆಯ ಪ್ರಮುಖ ಬೆಳೆ ಭತ್ತ ಮತ್ತು ಮೆಣಸಿನಕಾಯಿ. ಇಲ್ಲಿ ಅಕ್ಕಿಗೆ ಬರವಿಲ್ಲ. ಈ ಕಾರಣಕ್ಕೆ ಬಡವರು ತಮಗೆ ಸಿಗುವ ಅನ್ನಭಾಗ್ಯದ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದಾರೆ. ನಕಲಿ ಕಾರ್ಡ್ದಾರರ ಅಕ್ಕಿಯಂತೂ ದಂಧೆಗೆ ಮೀಸಲು. ಮೊದಲು ಅಕ್ರಮ ಕಾರ್ಡ್ ತೊಲಗಿಸಬೇಕು. ಜತೆಗೆ ಈ ಜಾಲದಲ್ಲಿ ಆಹಾರ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಅವರಿಗೆ ರಾಜಕಾರಣಿಗಳ ಬೆಂಬಲವಿದೆ. ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜೋಳವನ್ನು ಜನರಿಗೆ ಪ್ರಧಾನವಾಗಿ ವಿತರಿಸಬೇಕು’ ಎನ್ನುತ್ತಾರೆ ನ್ಯಾಯಬೆಲೆ ಅಂಗಡಿಯೊಂದರ ಮಾಲೀಕ.

‘ಜಿಲ್ಲೆಯಲ್ಲಿ ಈವರೆಗೆ 2,813 ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಮಾಡಲಾಗಿದೆ. ಇವರಿಂದ ₹20.35 ಲಕ್ಷ ದಂಡ ವಸೂಲಿ ಮಾಡಲಾಗಿದೆ. 2023–24ನೇ ಸಾಲಿನಲ್ಲಿ ಅಕ್ಕಿ ಅಕ್ರಮ ಸಂಗ್ರಹದ 42 ಪ್ರಕರಣಗಳನ್ನು ಪತ್ತೆ ಮಾಡಿ, 1,307 ಕ್ವಿಂಟಲ್ ವಶಕ್ಕೆ ಪಡೆಯಲಾಗಿದ್ದು, 29 ಮಂದಿಯನ್ನು ಬಂಧಿಸಲಾಗಿದೆ’ ಎಂದು ಆಹಾರ ಇಲಾಖೆ ನೀಡಿದ ಅಂಕಿ ಅಂಶಗಳಿಂದ ಗೊತ್ತಾಗಿದೆ.

ಪ್ರಭಾವಿಗಳು ಫೋನ್ ಮಾಡ್ತಾರೆ...

‘ಬಳ್ಳಾರಿಯಲ್ಲಿ ಬಡವರಿಂದ ಸಂಗ್ರಹಿಸಲಾಗುವ ಅಕ್ಕಿಯನ್ನು, ಮಾನ್ವಿ, ಲಿಂಗಸುಗೂರು ಭಾಗಕ್ಕೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಇದೆ. ಇಲಾಖೆಯಿಂದ ದಾಳಿಯಾಗುತ್ತದೆ, ಪ್ರಕರಣ ದಾಖಲಾಗುತ್ತದೆ. ಆದರೂ ಜಾಲ ಸಕ್ರಿಯವಾಗಿದೆ. ಅಕ್ಕಿಯನ್ನು ಅಕ್ರಮವಾಗಿ ಸಾಗಿಸುವ ವಾಹನಗಳನ್ನು ಹಿಡಿದ ಕೂಡಲೇ ಪ್ರಭಾವಿಗಳು ಕರೆ ಮಾಡುತ್ತಾರೆ. ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದರೂ ಕೆಲವೊಮ್ಮೆ ಪ್ರಯೋಜನ ಆಗುವುದಿಲ್ಲ. ಸ್ಥಳಕ್ಕೆ ಹೋಗುವ ಹೊತ್ತಿಗೆ ಕರೆಗಳು ಬರುತ್ತವೆ’ ಎಂದು ಆಹಾರ ಇಲಾಖೆಯ ಉಪ ನಿರ್ದೇಶಕಿ ಸಕೀನಾ ಹೇಳಿದರು.

ಬಳ್ಳಾರಿಯಲ್ಲಿ ಉತ್ಕೃಷ್ಟ ಅಕ್ಕಿ ಲಭ್ಯ. ಹೀಗಾಗಿ ಅನ್ನಭಾಗ್ಯದ ಅಕ್ಕಿ ಮಾರಿಕೊಳ್ಳುತ್ತಿದ್ದಾರೆ. ಇಲ್ಲಿ ಅಕ್ಕಿ ಬದಲಿಗೆ ಬೇರೆ ಏನಾದರೂ ಕೊಡಬೇಕುಕೆ.
ಇ. ಚಿದಾನಂದಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ, ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.