ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ರೀತಿಯ ಆಸ್ತಿಗಳ ಡಿಜಿಟಲೀಕರಣಕ್ಕೆ ಸರ್ಕಾರ ಜಾರಿಗೆ ತಂದಿರುವ ‘ಆಸ್ತಿ ಕಣಜ’ಕ್ಕೆ ದಾಖಲೆಗಳನ್ನು ಒದಗಿಸಲು ನಾಗರಿಕರು ನಿರಾಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ, ಜನರ ಅನುಕೂಲಕ್ಕೆಂದು ರೂಪುಗೊಂಡ ಕಾರ್ಯಕ್ರಮ ಜನರಿಂದಲೇ ನಿರ್ಲಕ್ಷ್ಯಕ್ಕೊಳಗಾಗಿ ಕುಂಟುತ್ತಾ ಸಾಗಿದೆ.

ಪಾಲಿಕೆ ವ್ಯಾಪ್ತಿಯ ಕಟ್ಟಡ, ಖಾಲಿ ನಿವೇಶನಗಳನ್ನು ಗಣಕೀಕರಣ–ಡಿಜಿಟಲೀಕರಣ ಮಾಡಲು ಪೌರಾಡಳಿತ ನಿರ್ದೇಶನಾಲಯದ ಕೆಎಂಡಿಎಸ್ (ಕರ್ನಾಟಕ ಮುನ್ಸಿಪಲ್ ಡಾಟಾ ಅಒಸೈಟಿ) ಆಸ್ತಿ ಕಣಜ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಪಾಲಿಕೆ, ಸ್ಥಳೀಯ ಸಂಸ್ಥೆಗಳ ಎಲ್ಲ ಆಸ್ತಿಗಳನ್ನು ಆನ್ಲೈನ್ ವ್ಯಾಪ್ತಿಯೊಳಗೆ ತರುವುದು ಸರ್ಕಾರ ಉದ್ದೇಶವಾಗಿದೆ. ಹಾಗಾಗಿ ಆಸ್ತಿ ಕಣಜ ತಂತ್ರಾಂಶದಲ್ಲಿ ಆಸ್ತಿ ದಾಖಲೆಗಳನ್ನು ಕಡ್ಡಾಯವಾಗಿ ನಮೂದಿಸಬೇಕಾಗಿದೆ.

ಪಾಲಿಕೆಯ ವ್ಯಾಪ್ತಿಯಲ್ಲಿ ಈ ವರೆಗೆ 1,25,795 (ವಸತಿ, ವಾಣಿಜ್ಯ, ಕೈಗಾರಿಕೆ, ಖಾಲಿ ನಿವೇಶನಗಳು) ಆಸ್ತಿಗಳಿವೆ ಎಂದು ನಂಬಲಾಗಿತ್ತು. ಆದರೆ, ಬಿಲ್ ಕಲೆಕ್ಟರ್ಗಳ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ‘ಆಸ್ತಿ ಕಣಜ’ ತಂತ್ರಾಂಶಕ್ಕೆ ಡಿಜಿಟಲೀಕರಣ ಮಾಡಿದ ಬಳಿಕ ಬಳ್ಳಾರಿಯ ನಗರದಲ್ಲಿ ಈಗ ಒಟ್ಟು 1,30,457 ಆಸ್ತಿಗಳು ಇರುವುದು ಪತ್ತೆಯಾಗಿದೆ. ಆದರೆ, ಈ ಪೈಕಿ ಕೇವಲ 24 ಸಾವಿರಗಳಷ್ಟು ಆಸ್ತಿಗಳ ದಾಖಲೆಗಳು ಮಾತ್ರವೇ ಪರಿಶೀಲನೆಗೆ ಒಳಪಟ್ಟು, ಅಪ್ಲೋಡ್ ಆಗಿವೆ. ಇನ್ನೂ 1.05 ಲಕ್ಷದಷ್ಟು ಆಸ್ತಿಗಳ ಮಾಲೀಕರು ದಾಖಲೆಗಳನ್ನು ಒದಗಿಸಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉಳಿದ ಆಸ್ತಿಗಳ ದಾಖಲೆಗಳನ್ನು ಸಂಗ್ರಹಿಸುವುದೇ ಪಾಲಿಕೆಗೆ ಸವಾಲಾಗಿ ಪರಿಣಮಿಸಿದೆ. ಕೆಲವರು ತಮ್ಮ ಆಸ್ತಿಗೆ ಏನಾಗುತ್ತದೋ ಎಂದು ಗಾಭರಿಪಟ್ಟಿದ್ದಾರೆ, ಇನ್ನೂ ಕೆಲವರು ತೆರಿಗೆ ಎಲ್ಲಿ ಹೆಚ್ಚಾಗುತ್ತದೋ ಎಂಬ ಆತಂಕದಲ್ಲಿದ್ದಾರೆ. ಇನ್ನೂ ಕೆಲವರೂ ತಮ್ಮ ಆಸ್ತಿಯನ್ನು ಪಾಲಿಕೆಯವರು ಕಸಿದುಕೊಂಡು ಬಿಡುತ್ತಾರೆ ಎಂದು ಅನಗತ್ಯ ಭೀತಿಯಲ್ಲಿದ್ದಾರೆ. ದಾಖಲೆ ಸಂಗ್ರಹಕ್ಕೆಂದು ಬಿಲ್ ಕಲೆಕ್ಟರ್ಗಳು ಜನರ ಬಳಿಗೆ ಹೋದಾಗ ಇಂಥ ಕ್ಷುಲ್ಲಕ ದೂರುಗಳು ಜನರಿಂದ ಕೇಳಿ ಬಂದಿವೆ ಎನ್ನಲಾಗಿದೆ.

‘ಇದು ಆಸ್ತಿಗಳ ಡಿಜಿಟಲೀಕರಣ. ಇದರಿಂದ ಜನರಿಗೆ ಅನುಕೂಲವಾಗಲಿದೆ. ಅವರ ಆಸ್ತಿಯ ದಾಖಲೆಗಳು ಭದ್ರವಾಗಲಿವೆ. ದಾಖಲೆಗಳನ್ನು ಅಕ್ರಮವಾಗಿ ತಿದ್ದುವುದು, ಭೂ ಕಬಳಿಕೆ ಮಾಡುವ ದಂಧೆ ನಿಲ್ಲಲಿದೆ. ಮಾಫಿಯಾ, ಅಕ್ರಮಗಳಿಗೆ ಕಡಿವಾಣ ಬೀಳಿದೆ. ತೆರಿಗೆ ಲೆಕ್ಕಾಚಾರದ ಅಕ್ರಮಗಳಿಗೂ ತಡೆ ಬೀಳಲಿದೆ. ಆಸ್ತಿಗಳಲ್ಲಿ ತೊಂದರೆ ಇದ್ದರೆ ಅವುಗಳನ್ನು ಸರಿಪಡಿಸಲೂ ಸಹಕಾರಿಯಾಗಿದೆ. ಒಂದು ಬಾರಿ ಆಸ್ತಿ ಕಣಜಕ್ಕೆ ಸೇರಿದರೆ ಪಿಎನ್ಆರ್ ಸಂಖ್ಯೆ ಸಿಗಲಿದೆ. ಆ ಪಿಐಡಿ ನಂಬರ್ ಬಳಸಿ ಆಸ್ತಿ ತೆರಿಗೆಯನ್ನು ಪಾವತಿಸಬಹುದು. ದಾಖಲೆಗಳನ್ನೂ ಯಾವಗಬೇಕಾದರೂ ಪಡೆಯಬಹುದು’ ಎಂದು ಪಾಲಿಕೆ ಉಪ ಆಯುಕ್ತ ಬಿ. ಅಬ್ದುಲ್ ರೆಹಮಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರ ‘ಆಸ್ತಿ ಕಣಜ’ವನ್ನು ನೋಂದಣಿ ಇಲಾಖೆಯಲ್ಲಿರುವ ಕಾವೇರಿ ದತ್ತಾಂಶದೊಂದಿಗೆ ಹೊಂದಿಸಿದೆ. ಹೀಗಾಗಿ ಇನ್ನು ಮುಂದೆ ಆಸ್ತಿಕಣಜಕ್ಕೆ ದಾಖಲೆ ಕೊಟ್ಟು ಫಾರಂ–2 ಪಡೆದರಷ್ಟೇ ನೋಂದಣಿ ಸಾಧ್ಯವಾಗಲಿದೆ ಎಂದಿದ್ದಾರೆ.

ಆಸ್ತಿ ತೆರಿಗೆಯಲ್ಲಿ ಪಾರದರ್ಶಕತೆ

ಹಿಂದೆಲ್ಲ ಆಸ್ತಿ ತೆರಿಗೆ ಪರಿಷ್ಕರಣೆ ಅಧಿಕಾರಿಗಳ ಕೈಲಿತ್ತು. ಆದರೆ ಈಗ ನಿಯಮಗಳಲ್ಲಿ ಬಹಳಷ್ಟು ಸುಧಾರಣೆಗೊಂಡಿದೆ. ಜತೆಗೆ ‘ಆಸ್ತಿ ಕಣಜ’ದಂಥ ತಂತ್ರಾಂಶ ವ್ಯವಸ್ಥೆ ಬಂದಿದೆ. ಆಸ್ತಿಯ ಸ್ವರೂಪದ ಆಧಾರದ ಮೇಲೆ ತಂತ್ರಾಂಶವೇ ತೆರಿಗೆ ಮೊತ್ತವನ್ನು ಆಸ್ತಿ ಮಾಲೀಕರಿಗೆ ತಿಳಿಸುತ್ತದೆ. ಮೊಬೈಲ್ ಮತ್ತು ಇ–ಮೇಲ್ ಮೂಲಕ ನಿಮ್ಮ ಆಸ್ತಿ ತೆರಿಗೆಯನ್ನು ಪಾವತಿಸಬೇಕಾದ ದಿನವನ್ನು ತಿಳಿಸಲಾಗುತ್ತದೆ. ಆಸ್ತಿ ತೆರಿಗೆಗೆ ನಾಗಕರು ಈಗ ಕಚೇರಿಗೆ ಅಲೆಯಬೇಕಾದ ಅನಿವಾರ್ಯತೆಯೂ ಇಲ್ಲ. ಆನ್ಲೈನ್ನಲ್ಲೂ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಬಿಬಿಪಿಎಸ್ (ಭಾರತ್ ಬಿಲ್ ಪೇ ಸಿಸ್ಟಮ್) ಬಳಸಿ ಫೋನ್ಪೇ ಪೇಟಿಮ್ ಗೂಗಲ್ ಪೇ ಭೀಮ್ ಪೋಸ್ಟಲ್ ಬ್ಯಾಂಕ್ ಆ್ಯಪ್ ಬಳಸಿ ಪಾವತಿ ಮಾಡಬಹುದು. ಹೀಗಾಗಿ ತೆರಿಗೆ ಲೆಕ್ಕಾಚಾರ ಮತ್ತು ಪಾವತಿಯಲ್ಲಿ ಅಧಿಕಾರಿಗಳು ಮಧ್ಯವರ್ತಿಗಳ ಮಧ್ಯಸ್ಥಿಕೆಯೇ ಇಲ್ಲವಾಗುತ್ತದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಆದಾಯ ವೃದ್ಧಿಯ ನಿರೀಕ್ಷೆ

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 125795 ಆಸ್ತಿಗಳಿವೆ ಎಂದು ಮಾರ್ಚ್ ತಿಂಗಳ ವರೆಗೆ ನಂಬಲಾಗಿತ್ತು. ಆದರೆ ‘ಆಸ್ತಿ ಕಣಜ’ದ ಡಿಜಿಟಲೀಕರಣ ಆರಂಭವಾದ ಬಳಿಕ ಈಗ 130457 ಆಸ್ತಿಗಳು ಇರುವುದು ಗೊತ್ತಾಗಿದೆ. ಇದೆಲ್ಲರಿಂದ ವಾರ್ಷಿಕ ₹45 ಕೋಟಿಯಷ್ಟು ಆಸ್ತಿ ತೆರಿಗೆ ನಿರೀಕ್ಷೆಯನ್ನು ಪಾಲಿಕೆ ಹೊಂದಿದೆ. ಆದರೆ ಇವುಗಳ ಸಂಪೂರ್ಣ ಡಿಜಿಟಲೀಕರಣವಾಗಿ ಕ್ರಮಬದ್ಧಗೊಂಡರೆ ಪಾಲಿಕೆಗೆ ಬರಬೇಕಾದ ಆಸ್ತಿ ತೆರಿಗೆ ಪ್ರಮಾಣ ಹೆಚ್ಚಾಗಲಿದೆ ಎಂದು ನಂಬಲಾಗಿದೆ.

ಆಸ್ತಿ ಕಣಜ ತಂತ್ರಾಂಶದಲ್ಲಿ ಆಸ್ತಿಗಳ ಸಂಪೂರ್ಣ ಡಿಜಿಟಲೀಕರಣ ಸಾಧ್ಯವಾಗಲಿದೆ. ಜನ ಮುಂದೆ ಬಂದು ಈ ಕಾರ್ಯಕ್ರಮಕ್ಕೆ ಸಹಕರಿಸಬೇಕು
–ಜಿ. ಖಲೀಲ್ ಸಾಬ್, ಬಳ್ಳಾರಿ ಪಾಲಿಕೆ ಆಯುಕ್ತ

‘ಕಣಜ’ಕ್ಕೆ ದಾಖಲೆ ನೀಡುವುದರಿಂದ ನಾಗರಿಕರಿಗೆ ಯಾವುದೇ ತೊಂದರೆಯಾಗದು. ಆಸ್ತಿ ಕಣಜ ಕಾವೇರಿ ತಂತ್ರಾಂಶಕ್ಕೆ ಲಿಂಕ್ ಆಗಿದೆ. ಫಾರ್–2 ಪಡೆದರಷ್ಟೆ ನೋಂದಣಿಯೂ ಸಾಧ್ಯವಾಗಲಿದೆ.
–ಬಿ.ಅಬ್ದುಲ್ ರೆಹಮಾನ್, ಬಳ್ಳಾರಿ ಪಾಲಿಕೆ ಉಪ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.