ಬಳ್ಳಾರಿ: ‘ಜಾಮೀನು ಪ್ರತಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸಂಜೆ 6.30ರ ಒಳಗಾಗಿ ತಲುಪಿದರೆ ದರ್ಶನ್ ಅವರನ್ನು ಇಂದೇ ಬಿಡುಗಡೆ ಮಾಡಲಾಗುವುದು’ ಎಂದು ಜೈಲು ಅಧೀಕ್ಷಕಿ ಲತಾ ತಿಳಿಸಿದ್ದಾರೆ.

ರೇಣಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ಗೆ ಆರು ವಾರಗಳ ಮಧ್ಯಂತರ ವೈದ್ಯಕೀಯ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಬುಧವಾರ ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಜೈಲು ಅಧೀಕ್ಷಕರು, ‘ ಸಂಜೆ 6.30ಕ್ಕೆ ಜೈಲನ್ನು ಲಾಕಪ್ ಮಾಡುತ್ತೇವೆ. ಅಷ್ಟರ ಒಳಗಾಗಿ ನಮಗೆ ಜಾಮೀನು ಪ್ರತಿ ತಲುಪಬೇಕು. ಒಂದು ವೇಳೆ ಸಂಜೆ 6.30ರ ನಂತರ ಸಿಕ್ಕರೆ ನಾಳೆಗೆ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದರು.

‘ಒಂದೋ, ನ್ಯಾಯಾಲಯದ ಅಧಿಕೃತ ಇ–ಮೇಲ್ ಐಡಿಯಿಂದ ನಮಗೆ ಜಾಮೀನು ಪ್ರತಿ ಸಿಗಬೇಕು. ಇಲ್ಲವೇ ಕುಟುಂಬಸ್ಥರಾದರೂ ಖುದ್ದಾಗಿ ತಂದು ಹಾಜರುಪಡಿಸಬೇಕು. ಜಾಮೀನು ಪ್ರತಿ ಸಿಕ್ಕ ಕೂಡಲೇ ಅವರನ್ನು ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದರು.

ಗುರುವಾರದಿಂದ ನಾಲ್ಕು ದಿನ ಸರ್ಕಾರಿ ರಜೆ ಇರುವುದರಿಂದ ದರ್ಶನ್ ಬಿಡುಗಡೆ ತಡವಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ವಿಚಾರಣಾಧೀನ ಕೈದಿಗಳನ್ನು ಕೋರ್ಟ್ ಹೇಳಿದ ಕೂಡಲೇ ಬಿಡುಗಡೆ ಮಾಡಬೇಕಾಗುತ್ತದೆ. ಸರ್ಕಾರಿ ರಜೆಗಳು ಇವರಿಗೆ ಅನ್ವಯವಾಗುವುದಿಲ್ಲ’ ಎಂದೂ ಅವರೂ ಸ್ಪಷ್ಪಪಡಿಸಿದರು.

ಜಾಮೀನು ನಂಬದ ದರ್ಶನ್: ಜಾಮೀನು ಮಂಜೂರಾದ ಕೂಡಲೇ ವಿಷಯವನ್ನು ಜೈಲು ಸಿಬ್ಬಂದಿ ದರ್ಶನ್ಗೆ ತಿಳಿಸಿದರು. ಆದರೆ, ಆರಂಭದಲ್ಲಿ ವಿಷಯವನ್ನು ದರ್ಶನ್ ನಂಬಲಿಲ್ಲ ಎನ್ನಲಾಗಿದೆ. ಹಿರಿಯ ಅಧಿಕಾರಿಗಳು ತಿಳಿಸಿದ ಬಳಿಕ ಸಂತೋಷಗೊಂಡರು ಎಂದು ಕೆಲ ಸಿಬ್ಬಂದಿ ಮಾಹಿತಿ ನೀಡಿದರು.

ಭದ್ರತೆ ಹೆಚ್ಚಳ: ದರ್ಶನ್ಗೆ ಜಾಮೀನು ಮಂಜೂರಾಗುತ್ತಲೇ ಇತ್ತ ಬಳ್ಳಾರಿ ಜೈಲು ಬಳಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಸುದ್ದಿ ತಿಳಿದ ಅವರ ಅಭಿಮಾನಿಗಳು ಒಬ್ಬೊಬ್ಬರಾಗಿಯೇ ಜೈಲಿನ ಬಳಿಗೆ ಬರಲಾರಂಭಿಸಿದ್ದಾರೆ.

ಎರಡು ತಿಂಗಳ ಬಳಿಕ ಬಿಡುಗಡೆ: ಕೊಲೆ ಪ್ರಕರಣದಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದ ನಟ ದರ್ಶನ್ ಅಲ್ಲಿ ವಿಶೇಷ ಆತಿಥ್ಯ ಪಡೆದಿದ್ದು ಬಯಲಾಗಿತ್ತು. ಹೀಗಾಗಿ ಅವರನ್ನು ಆ. 29ರಂದು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಸರಿಯಾಗಿ ಎರಡು ತಿಂಗಳ ಬಳಿಕ ಅವರು ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ.

ಇದನ್ನೂ ಓದಿ: ರೇಣುಕಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ಗೆ ಷರತ್ತುಬದ್ಧ ಜಾಮೀನು ಮಂಜೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.