ಹೊಸಪೇಟೆ: ನವೋಲ್ಲಾಸದ ಜೀವನ ನಮ್ಮೆಲ್ಲರದ್ದಾಗಬೇಕು ಮತ್ತು ಹೊಸ ವರ್ಷ ಎಲ್ಲರಿಗೂ ಶುಭ ತರಬೇಕು ಎಂದು ಹಾರೈಸಿ ಭಾನುವಾರ ಬೆಳಿಗ್ಗೆ ನಗರದಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ಸೈಕ್ಲೋಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನ್ಯೂ ಲೈಫ್ ನ್ಯೂ ಡಿಸ್ಟ್ರಿಕ್ ಸೆಲೆಬ್ರೆಷನ್ ಹೆಸರಲ್ಲಿ ನಡೆದ ಸೈಕ್ಲೋಥಾನ್ ಕಾರ್ಯಕ್ರಮವನ್ನು ಸಚಿವ ಆನಂದ್ ಸಿಂಗ್ ಸೈಕಲ್ ತುಳಿದು ಚಾಲನೆ ನೀಡಿದರು.

ಸ್ವತಃ ಸಚಿವರು ಬೈಸಿಕಲ್ ತುಳಿದು ನಗರ ಸುತ್ತಿದರು. ಮುಂದಿನ ಸಾಲಿನಲ್ಲಿ ಅವರಿದ್ದರೆ ಅನೇಕರು ಅವರ ಹಿಂದೆ ಸೈಕಲ್ ತುಳಿದರು. ಬೈಸಿಕಲ್ ಓಡಿಸುವುದರಿಂದ ಆರೋಗ್ಯ ಉತ್ತಮವಾಗುತ್ತದೆ. ಪ್ರತಿಯೊಬ್ಬರು ಯೋಗ ಮತ್ತು ವ್ಯಾಯಾಮದ ಜತೆಗೆ ಕೆಲಕಾಲ ಬೈಸಿಕಲ್ ಓಡಿಸಬೇಕು ಎಂದು ತಿಳಿಸಿದರು.

ಇಂದರ್ ಕುಮಾರ ಜೈನ್, ಹಿತೇಶ್ ಬಾಗರೇಚ್, ಮಹೇಂದ್ರ ಜೈನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.