ಬಳ್ಳಾರಿ: ಸಂಡೂರು ತಾಲ್ಲೂಕಿನ ನಾರಿಹಳ್ಳ ಜಲಾಶಯದ ಬಳಿಯಿರುವ 104 ಎಕರೆ ದಟ್ಟ ಅರಣ್ಯ ಪ್ರದೇಶದಲ್ಲಿ ‘ಜೆಎಸ್ಡಬ್ಲ್ಯು ಎನರ್ಜಿ ಲಿಮಿಟೆಡ್’ ಸಂಸ್ಥೆಯು 300 ಮೆಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಿದೆ.

ಇದರಿಂದ ಒಂದೆಡೆ ಅರಣ್ಯ ನಾಶದ ಆತಂಕವಿದ್ದರೆ, ಇನ್ನೊಂದೆಡೆ ಸರ್ಕಾರಿ ಸಂಸ್ಥೆಗೆ ಸಿಗಬೇಕಿದ್ದ ಯೋಜನೆಯನ್ನು ಹಿಂದಿನ ಸರ್ಕಾರವು ಮುಂದೆ ನಿಂತು ಖಾಸಗಿ ಸಂಸ್ಥೆಗೆ ನೀಡಿದ್ದು ಬಹಿರಂಗವಾಗಿದೆ.

ಸಂಡೂರಿನ ತಾರಾನಗರದ ಬಳಿ ಇರುವ ನಾರಿಹಳ್ಳ ಜಲಾಶಯಕ್ಕೆ ಹೊಂದಿಕೊಂಡಿರುವ 412.41 ಎಕರೆ ಪ್ರದೇಶದಲ್ಲಿ ₹1590 ಕೋಟಿ ವೆಚ್ಚದಲ್ಲಿ ಜಲ ವಿದ್ಯುತ್ ಯೋಜನೆ ಅನುಷ್ಠಾನಗೊಳಿಸಲು ಜೆಎಸ್ಡಬ್ಲ್ಯು ಬಯಸಿದೆ. ಇದಕ್ಕೆ 24.46 ಎಕರೆ ಸರ್ಕಾರಿ ಜಾಗ ಮತ್ತು 104 ಎಕರೆ ದಟ್ಟ ಅರಣ್ಯ ಪ್ರದೇಶ ಬಳಕೆ ಆಗಲಿದೆ. ಈ ಪೈಕಿ 72.89 ಎಕರೆ ಪ್ರದೇಶ ಮುಳುಗಡೆ ಆಗಲಿದೆ ಎಂಬುದು ಯೋಜನೆಯ ಪ್ರಸ್ತಾವದಿಂದ ಗೊತ್ತಾಗಿದೆ.

ಈ ಯೋಜನೆಗೆ 2022ರ ಅಕ್ಟೋಬರ್ 22ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ‘ರಾಜ್ಯ ಉನ್ನತ ಮಟ್ಟಣದ ಅನುಮೋದನಾ ಸಮಿತಿ (ಎಸ್ಎಚ್ಎಲ್ಸಿಸಿ)’ ಸಮ್ಮತಿಯನ್ನೂ ನೀಡಿದೆ. ಸದ್ಯ, ಅರಣ್ಯ ಮತ್ತು ಪರಿಸರ ಅನುಮತಿ ಪಡೆಯಲು ಕೇಂದ್ರದ ‘ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ’ದ ‘ಪರಿಣಾಮ ಮೌಲ್ಯಮಾಪನ(ಐಎ)’ ವಿಭಾಗದಲ್ಲಿ ಪ್ರಕ್ರಿಯೆ ನಡೆದಿವೆ.

ಯೋಜನೆಯ ‘ಪರಿಸರ ಆಘಾತ ಅಧ್ಯಯನ (ಇಐಎ)’ನಡೆಸುವುದಕ್ಕೂ ಮುನ್ನ ಅಗತ್ಯವಿರುವ ‘ವಿಸ್ತೃತ ಯೋಜನಾ ವಿವರಣೆ (ಟಿಒಆರ್)‘ಗೆ ಅನುಮತಿ ನೀಡುವ ಸಂಬಂಧ 2023ರ ಏಪ್ರಿಲ್ 26ರಂದು ನಡೆದ ಕೇಂದ್ರ ಅರಣ್ಯ ಸಚಿವಾಲಯದ ‘ಪರಿಣಾಮ ಅಧ್ಯಯನ (ಐಎ)’ ವಿಭಾಗದ ಸಭೆಯಲ್ಲಿ 'ನದಿ ಕಣಿವೆ ಮತ್ತು ಜಲವಿದ್ಯುತ್ ಯೋಜನೆ’ಗಳ ತಜ್ಞರ ಮೌಲ್ಯಮಾಪನ ಸಮಿತಿ (ಇಎಸಿ)ಯು ಯೋಜನೆ ಕುರಿತು ಆಕ್ಷೇಪಗಳನ್ನು ಎತ್ತಿದೆ.

‘ಯೋಜನೆಗೆ ನಾರಿಹಳ್ಳ ಜಲಾಶಯವನ್ನು ಯಾವ ರೀತಿ ಬಳಸಲಾಗುವುದು ಎಂಬುದನ್ನು ಸಂಸ್ಥೆ ತಿಳಿಸಿಲ್ಲ. ಅಲ್ಲದೆ, ಈ ಯೋಜನೆಯು ಈಗಿರುವ ನೀರಿನ ಬೇಡಿಕೆಗೆ ಅಡ್ಡಿ ಆಗುವುದೇ ಎಂಬುದು ಉಲ್ಲೇಖಿಸಿಲ್ಲ. ಉದ್ದೇಶಿತ ಯೋಜನಾ ಜಾಗ ಅತೀ ಸೂಕ್ಷ್ಮ ಪ್ರದೇಶ. ಯೋಜನೆಗೆ ಪರ್ಯಾಯ ಜಾಗ ಬಳಸುವ ಪ್ರಸ್ತಾವವನ್ನು ಮರು ಪರಿಶೀಲಿಸಲು ಸಮಿತಿ ಸೂಚಿಸುತ್ತಿದೆ. ಅಲ್ಲದೆ, ಪರಿಸರದ ಮತ್ತು ಜಲಾಶಯದ ಸ್ಥಿತಿಗತಿ ಅದ್ಯಯನಕ್ಕೆ ಸಮಿತಿಯ ಸದಸ್ಯರು ಸ್ಥಳಪರಿಶೀಲನೆ ಮಾಡಲು ಸಮಿತಿ ನಿರ್ಧರಿಸಿದೆ’ ಎಂದು ತಿಳಿಸಿತ್ತು.

ಇದೆಲ್ಲವನ್ನು ಗಮನಿಸಿದ ಕೇಂದ್ರ ಅರಣ್ಯ ಇಲಾಖೆ, ಕೆಲವು ಷರತ್ತುಗಳನ್ನು ವಿಧಿಸಿ ಟಿಒಆರ್ಗೆ ಅನುಮೋದನೆ ನೀಡಿದೆ.

‘ಸರ್ಕಾರಿ ಯೋಜನೆ ಖಾಸಗಿಗೆ’

‘2029-30ರ ಬಳಿಕ ರಾಜ್ಯದ ಇಂಧನ ಅವಶ್ಯಕತೆ ಹಾಗೂ ಬೇಡಿಕೆಯನ್ನು ಸರ್ಕಾರ ಗಮನದಲ್ಲಿ ಇಟ್ಟುಕೊಳ್ಳಬೇಕು. ‘ನಾರಿಹಳ್ಳ ಜಲವಿದ್ಯುತ್ ಯೋಜನೆಯನ್ನು ಜೆಎಸ್ಡಬ್ಲ್ಯೂ ಎನರ್ಜಿ ಲಿಮಿಟೆಡ್ ಸ್ಥಾಪಿಸುವ ಬದಲು ರಾಜ್ಯ ಸರ್ಕಾರದ ಕೆಪಿಸಿಎಲ್ ಕೆಆರ್ಡಿಐಎಲ್ ಪಿಸಿಕೆಎಲ್ ಎಸ್ಕಾಂಗಳು ಸ್ಥಾಪಿಸಬೇಕು. ಜಂಟಿ ಸಹಭಾಗಿತ್ವದಲ್ಲಿ ಹೂಡಿಕೆಯೊಂದಿಗೆ ಯೋಜನೆ ಅಭಿವೃದ್ಧಿಪಡಿಸಬಹುದು. ಅಥವಾ ಕೆಪಿಸಿಎಲ್ ಈ ಯೋಜನೆಯನ್ನು ಅನುಷ್ಠಾನಗೊಳಿಸುವುದು ಸೂಕ್ತ’ ಎಂದು ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ 2022ರ ಜುಲೈ 21ರಂದು ಸರ್ಕಾರಕ್ಕೆ ಸಲಹೆ ನೀಡಿದ್ದರು. ಆದರೆ ಸರ್ಕಾರ ಇದನ್ನು ನಿರ್ಲಕ್ಷಿಸಿದೆ. ಜೆಎಸ್ಡಬ್ಲ್ಯು ನೀಡಿದ ಮಾಹಿತಿ ಆಧಾರವಾಗಿ ಇಟ್ಟುಕೊಂಡ ಸರ್ಕಾರ ಯೋಜನೆಗೆ ಅನುಮತಿ ನೀಡಿದೆ. ‘ಕೆಪಿಸಿಎಲ್ ಅಥವಾ ಇನ್ಯಾವುದೇ ಅಭಿವೃದ್ಧಿ ಪ್ರಾಧಿಕಾರ ಯೋಜನೆಗೆ ಈಗ ಗುರುತು ಮಾಡಿರುವ ಜಾಗದ ಮೇಲೆ ನಾವು ಗುರುತು ಮಾಡಿರುವ ಜಾಗ (ಓವರ್ಲ್ಯಾಪ್) ಬರುವುದಿಲ್ಲ’ ಎಂದು ಜೆಎಸ್ಡಬ್ಲ್ಯೂ ಹೇಳಿತ್ತು.

ನಾರಿಹಳ್ಳ ಜೈವವೈವಿಧ್ಯ ತಾಣ

ನಾರಿಹಳ್ಳ ಜಲಾಶಯದಲ್ಲಿ ಅಳಿವಿನ ಅಂಚಿನಲ್ಲಿರುವ (ಪ್ರವರ್ಗ–1) ನೀರು ನಾಯಿಗಳಿವೆ. ಈ ಬಗ್ಗೆ ಈಗಾಗಲೇ ಹಲವು ಬಾರಿ ಮಾಧ್ಯಮ ವರದಿಗಳೂ ಬಂದಿವೆ. ಜಲಾಶಯಕ್ಕೆ ಹೊಂದಿಕೊಂಡಿರುವ ದೋಣಿಮಲೈ ಅರಣ್ಯ ಕರಡಿ ಚಿರತೆ ನವಿಲು ಜಿಂಕೆ ಮುಳ್ಳುಹಂದಿ ಚಿಪ್ಪು ಹಂದಿಗಳು ಇವೆ. ಹಲವು ಅಪರೂಪದ ಸಸ್ಯವರ್ಗವೂ ಇಲ್ಲಿದೆ.

ಯೋಜನೆಯ ಅಧ್ಯಯನ ನಡೆಸಲು ಕೇಂದ್ರದಿಂದ ಸೂಚನೆ ಬಂದಿದೆ. ಅಧ್ಯಯನ ಆರಂಭ ಆಗಬೇಕಿದೆ. ಇದಕ್ಕೂ ಮುನ್ನ ಅರಣ್ಯ ಇಲಾಖೆ ಜತೆಗೆ ಹಲವು ಪ್ರಕ್ರಿಯೆಗಳು ನಡೆಯಬೇಕಿವೆ
-ಸಂದೀಪ್ ಸೂರ್ಯವಂಶಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.