ಬಳ್ಳಾರಿ: ‘ರಾಜ್ಯದ ಅಭಿವೃದ್ಧಿ ಕುಸಿದಿದೆ. ಗ್ಯಾರಂಟಿಗಳು ಕಣ್ಣೊರೆಸುವ ತಂತ್ರಗಳಂತಾಗಿವೆ. ಇಂಥ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಹಭಾಸ್ಗಿರಿ ಹೇಳಬೇಕಿತ್ತಂತೆ. ಮೋದಿ ಅವರ ಪಾದ ದೂಳಿಗೂ ಸಿದ್ದರಾಮಯ್ಯ ಸಮವಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ಸಂಡೂರಿನಲ್ಲಿ ಭಾನುವಾರ ಯುವ ಸಮಾವೇಶದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರೇ ಗ್ಯಾರಂಟಿಗಳ ಬಗ್ಗೆ ಛೀಮಾರಿ ಹಾಕಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ದುಡ್ಡಿಲ್ಲ. ಸರ್ಕಾರ ನಡೆಸುವ ಈ ಚೆಂದಕ್ಕೆ ಮೋದಿ ಶಹಬ್ಬಾಸ್ಗಿರಿ ಕೊಡಬೇಕೆ?’ ಎಂದು ವಿಜಯೇಂದ್ರ ವಾಗ್ದಾಳಿ
ನಡೆಸಿದರು.

‘ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಸಿ.ಎಂಗೆ ನೈತಿಕತೆಯೇ ಇಲ್ಲ. ಅವರ ಇಡೀ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದೆ. ಭ್ರಷ್ಟಾಚಾರದಲ್ಲಿ ಅವರೇ ಆರೋಪಿ ನಂಬರ್ ಒನ್’ ಎಂದು ಟೀಕಿಸಿದರು.

ಜಮೀರ್ ಅಯೋಗ್ಯ ಮಂತ್ರಿ: ‘ಅವನೊಬ್ಬ ಅಯೋಗ್ಯ ಮಂತ್ರಿ ಜಮೀರ್ ರಾಜ್ಯದ ತುಂಬಾ ಓಡಾಡು
ತ್ತಿದ್ದಾನೆ. ಜಮೀನುಗಳಿಗೆ ವಕ್ಫ್ ಎಂದು ಹೇಳಿ ರೈತರಿಗೆ ನೋಟಿಸ್ ಕೊಡಿಸುತ್ತಿರುವ ಆತ ಪುಡಾರಿ’ ಎಂದು ಏಕವಚನದಲ್ಲಿ ಟೀಕಿಸಿದರು.

‘ದೇವಸ್ಥಾನ, ಮಠ ಮಾನ್ಯಗಳಿಗೂ ನೋಟಿಸ್ ಕೊಡಲು ಹೇಳುತ್ತಿದ್ದಾನೆ. ಇಲ್ಲವಾದರೆ ಕ್ರಮ ಕೈಗೊಳ್ಳುತ್ತೇನೆ ಎಂದು ಅಧಿಕಾರಿಗಳಿಗೆ ಬೆದರಿಸುತ್ತಿದ್ದಾನೆ’
ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೈ’ ರಣತಂತ್ರ, ‘ಕಮಲ’ ಸಮಾವೇಶ: ಉಪ ಚುನಾವಣೆಯಲ್ಲಿ ಮುಂದಿನ ಕಾರ್ಯತಂತ್ರವನ್ನು ಚರ್ಚಿಸಲು ಕಾಂಗ್ರೆಸ್ ಭಾನುವಾರ ತನ್ನ ಕ್ಯಾಂಪ್ ಕಚೇರಿಯಲ್ಲಿ ಮುಖಂಡರ ಸಭೆ ನಡೆಸಿತು.

ಸೋಮವಾರದಿಂದ ಯಾವೆಲ್ಲ ನಾಯಕರು ಬರುತ್ತಾರೆ, ಅವರಿಗೆ ಏನು ವ್ಯವಸ್ಥೆ ಆಗಬೇಕು, ಯಾರನ್ನು ಎಲ್ಲಿಗೆ ನಿಯೋಜಿಸಬೇಕು, ಯಾವ ಜವಾಬ್ದಾರಿ ನೀಡಬೇಕು ಎಂಬುದರ ಬಗ್ಗೆ ಕಾಂಗ್ರೆಸ್ ಗಹನ ಚರ್ಚೆ ನಡೆಸಿದೆ. ಇದರ ಮಧ್ಯೆಯೂ ಸಚಿವ ಸಂತೋಷ್ ಲಾಡ್ ಮತ್ತು ಅಭ್ಯರ್ಥಿ ಅನ್ನಪೂರ್ಣ ಪ್ರಚಾರ ಕೈಗೊಂಡರು. ಬಿಜೆಪಿಯು ಚೋರನೂರಿನಲ್ಲಿ ಯುವ ಸಮಾವೇಶ, ಪಟ್ಟಣದಲ್ಲಿ ‘ಪ್ರಬುದ್ಧ’ ಸಮಾವೇಶ ನಡೆಸಿತು. ಅಭ್ಯರ್ಥಿ ಬಂಗಾರು ಹನುಮಂತು ಅವರು ಜನಾರ್ದನ ರೆಡ್ಡಿ ಜತೆ ಪ್ರಚಾರ, ರೋಡ್ಶೋಗಳಲ್ಲಿ ಪಾಲ್ಗೊಂಡರು.

ಸಂತೋಷ್ ಲಾಡ್ಗೆ ಮತದಾರನ ಪ್ರಶ್ನೆ

‘ಬಿಜೆಪಿಯವರು ಐದು ವರ್ಷಗಳಿಗೊಮ್ಮೆ ಸಂಡೂರಿಗೆ ಬರುತ್ತಾರೆ. ಇದೇ ಗಣಿಗಳಲ್ಲಿ ಪಡೆದ ಹಣ ತಂದು ನಿಮಗೆ ಕೊಡುತ್ತಾರೆ’ ಎಂಬ ಸಚಿವ ಸಂತೋಷ್ ಲಾಡ್ ಮಾತಿಗೆ ಆಕ್ಷೇಪವೆತ್ತಿದ ವ್ಯಕ್ತಿಯೊಬ್ಬರು ‘ನೀವು ಬರುವುದೂ ಐದು ವರ್ಷಕ್ಕೊಮ್ಮೆಯೇ’ ಎಂದು ತರಾಟೆಗೆ ತೆಗೆದುಕೊಂಡರು.

ಸಂಡೂರು ಪಟ್ಟಣದಲ್ಲಿ ಭಾನುವಾರ ನಡೆದ ಪ್ರಚಾರದ ವೇಳೆ ಈ ಘಟನೆ ನಡೆಯಿತು. ವ್ಯಕ್ತಿಯ ಪ್ರಶ್ನೆಗೆ ಆಕ್ರೋಶಗೊಂಡ ಸಂತೋಷ್ ಲಾಡ್, ‘ಕುಡಿದಿದ್ದೀಯಾ...ನೀನು ಬರುವುದೂ ಐದು ವರ್ಷಕ್ಕೊಮ್ಮೆ ಮಾತ್ರ’ ಎಂದರು. ಅಷ್ಟರೊಳಗೆ ಪೊಲೀಸರು ವ್ಯಕ್ತಿಯನ್ನು ಸ್ಥಳದಿಂದ ಕರೆದೊಯ್ದರು.

ಶ್ರೀರಾಮುಲು, ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಸಚಿವರಾಗಿ ಸಂಡೂರಿಗೆ ಅವರ ಕೊಡುಗೆ ಏನು? ಈಗ ಬಂದು ನಮ್ಮನ್ನು ಬೈಯುತ್ತಿದ್ದಾರೆ.
–ಸಂತೋಷ್ ಲಾಡ್, ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.