ಸಂಡೂರು: ‘ಇಂದಿರಾಗಾಂಧಿ ಅವರ ಆಡಳಿತದಲ್ಲಿ ಮಾದಿಗ ಸಮುದಾಯಕ್ಕೆ ಹೆಚ್ಚು ಅನುಕೂಲ ಆಗಿದೆ. ಅದಕ್ಕೆ ಪ್ರತಿಯಾಗಿ ಸಮುದಾಯ ಕಾಂಗ್ರೆಸ್ ಪಕ್ಷದ ಸಾಂಪ್ರಾದಾಯಕ ಮತಗಳು ಎಂಬ ಹೆಗ್ಗಳಿಕೆ ಪಡೆದಿವೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಹೇಳಿದರು.

ಸಂಡೂರಿನ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಮಾದಿಗ ಸಮುದಾಯದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಇಂದಿರಾ ಗಾಂಧಿ ಕಾರಣಕ್ಕೆ ಪರಿಶಿಷ್ಟರು ಮನೆ, ಜಮೀನು ಒಡೆತನ ಪಡೆದರು. ಬ್ಯಾಂಕ್ ಪ್ರವೇಶ ಪಡೆದು ಆರ್ಥಿಕವಾಗಿ ಪ್ರಗತಿ ಸಾಧಿಸಿದರು’ ಎಂದು ಹೇಳಿದರು.

‘ಗ್ಯಾರಂಟಿ ಕಾರ್ಯಕ್ರಮಗಳು ಸಮುದಾಯದ ಪ್ರಗತಿಗೆ ಪೂರಕವಾಗಿವೆ. ಎಸ್ಸಿಎಸ್ಪಿ, ಟಿಎಸ್ಪಿ ಕಾಯ್ದೆ ಜಾರಿಗೊಳಿಸುವ ಮೂಲಕ ಪರಿಶಿಷ್ಟ ವರ್ಗದ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಲಾಗಿದೆ. ಒಳಮೀಸಲಾತಿಗೆ ಆಯೋಗ ರಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಅನ್ನಪೂರ್ಣಾ ಅವರ ಗೆಲುವು ಮಾದಿಗ ಸಮುದಾಯದ ಹಿರಿಮೆ ಆಗಲಿದೆ’ ಎಂದು ಹೇಳಿದರು.

ಮಾದಿಗ ದಂಡೋರ ಮುಖಂಡ ಅಂಬಣ್ಣ ಹರ್ವಳೇಕರ್ ಮಾತನಾಡಿ, ‘ಕಾಂಗ್ರೆಸ್ ಎಂದರೇ ಸಾಮಾಜಿಕ ನ್ಯಾಯ. ಆದ್ದರಿಂದ ಸಂಡೂರು ಕ್ಷೇತ್ರದಲ್ಲಿ ಅನ್ನಪೂರ್ಣಾ ಅವರನ್ನು ಗೆಲ್ಲಿಸಲು ನಾವೆಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕು’ ಎಂದರು.

ಸಾಮಾಜಿಕ ನ್ಯಾಯದ ಹೋರಾಟ ಸಮಿತಿ ಮುಖಂಡ ಬಸವರಾಜ್ ಕೌತಳ್ ಮಾತನಾಡಿ, ‘ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ದಾಖಲೆ ಮತಗಳ ಅಂತರದಲ್ಲಿ ಅನ್ನಪೂರ್ಣಾ ಅವರನ್ನು ಗೆಲ್ಲಿಸಲು ಶ್ರಮಿಸಬೇಕು’ ಎಂದು ಹೇಳಿದರು.

ಮಾದಿಗ ಸಮುದಾಯದ ಮುಖಂಡರಾದ ಕರಿಯಪ್ಪ ಗುಡಿಮನೆ, ರಾಮಕೃಷ್ಣಹೆಗಡೆ, ಗೋವರ್ಧನ, ವೆಂಕಟೇಶ್ ಹೆಗಡೆ, ಜ್ಯೋತಿ, ಡಿ.ವಿ.ಸತೀಶ್, ದೇವದಾಸ್ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.