ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಶರಣರ ವಿಚಾರ ಪ್ರಚುರಪಡಿಸಿ’

Published : 8 ಅಕ್ಟೋಬರ್ 2024, 14:54 IST
Last Updated : 8 ಅಕ್ಟೋಬರ್ 2024, 14:54 IST
ಫಾಲೋ ಮಾಡಿ
Comments

ಕಂಪ್ಲಿ: ‘ಸಮ ಸಂಸ್ಕೃತಿಯ ಪರಿಕಲ್ಪನೆ ಕಟ್ಟಿಕೊಟ್ಟ ಬಸವಾದಿ ಶರಣರ ವಿಚಾರಗಳನ್ನು ಎಲ್ಲೆಡೆ ಪ್ರಚುರಪಡಿಸುವ ಅಗತ್ಯವಿದೆ’ ಎಂದು ಎಮ್ಮಿಗನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕ ಸಿ. ಶೇಖಣ್ಣ ತಿಳಿಸಿದರು.

ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಇಲ್ಲಿಯ ವಿಕಾಸ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ 171ನೇ ಮಹಾಮನೆ ಕಾರ್ಯಕ್ರಮದಲ್ಲಿ ‘ಪ್ರಬುದ್ಧ ಶರಣರ ಸಂಸ್ಕೃಯಲ್ಲಿ ವೈಚಾರಿಕ ನಿಲುವು’ ವಿಷಯ ಕುರಿತು ಉಪನ್ಯಾಸ ನೀಡಿದರು.

‘ವಿದ್ಯಾರ್ಥಿಗಳು ಪಠ್ಯದ ಜೊತೆಗೆ ವೈಚಾರಿಕ ಚಿಂತನೆ ಬೆಳೆಸಿಕೊಳ್ಳುವ ಮೂಲಕ ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆ ಮತ್ತು ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಪಣ ತೊಡಬೇಕು’ ಎಂದರು.

ಕಂಪ್ಲಿ ನಗರಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣ ಎಸ್. ಪೋಳ್ ಚಾಲನೆ ನೀಡಿದರು. ಪರಿಷತ್ ಅಧ್ಯಕ್ಷ ಜಿ. ಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಕೇಂದ್ರದ ಪ್ರಾಚಾರ್ಯ ಬಿ. ವೀರೇಶ, ಉಪನ್ಯಾಸಕರಾದ ವೀರಭದ್ರಪ್ಪ, ನಿಖಿಲ್, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪ್ರಮುಖರಾದ ಎಸ್. ರಾಮು, ಅಶೋಕ ಕುಕನೂರು, ಮಾ. ಶ್ರೀನಿವಾಸ, ಹಂಚಿನಾಳ ಪೀರಸಾಬ್, ನಾಗರಾಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT