ಹೂವಿನಹಡಗಲಿ: ‘ಗಂಗಾಪೂರ ವಿಜಯನಗರ ಸಕ್ಕರೆ ಕಾರ್ಖಾನೆಯ ಬೇಡಿಕೆ ಆಧರಿಸಿ ಮುಂಡರಗಿ ಟಿಎಪಿಸಿಎಂಎಸ್‌ನವರು ಕಬ್ಬು ಬೆಳೆಗಾರರಿಗೆ ಪೂರೈಸಿದ ಪೊಟ್ಯಾಷ್ ರಸಗೊಬ್ಬರ ಸಂಪೂರ್ಣ ಕಳಪೆಯಾಗಿದೆ’ ಎಂದು ರೈತರಾದ ಎಸ್. ಯಮನೂರಪ್ಪ, ಎಸ್. ತಿಮ್ಮಣ್ಣ ದೂರಿದ್ದಾರೆ.

‘ಕಬ್ಬು ಬೆಳೆಗೆ ರಸಗೊಬ್ಬರ ಕೊಂಡೊಯ್ಯಲು ಸಕ್ಕರೆ ಕಾರ್ಖಾನೆಯವರು ಮುಂಡರಗಿ ಟಿಎಪಿಸಿಎಂಎಸ್‌ಗೆ ಇಂಡೆಂಟ್ ನೀಡಿದ್ದರು. 14 ಚೀಲ ಪೊಟ್ಯಾಷ್ ಗೊಬ್ಬರ ತಂದು ಕಬ್ಬು ಬೆಳೆಗೆ ಮೇಲು ಗೊಬ್ಬರವಾಗಿ ನೀಡಿದರೂ ಬೆಳೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇದೇ ಗದ್ದೆಯ ಮತ್ತೊಂದು ಭಾಗದ ಬೆಳೆಗೆ ಬೇರೆಡೆಯಿಂದ ತಂದ ಪೊಟ್ಯಾಷ್ ನೀಡಿದ್ದೆವು. ಅದು ಉತ್ತಮ ಇಳುವರಿ ಬಂದಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಪೊಟ್ಯಾಷ್ ರೀತಿ ಕಾಣುವಂತೆ ಯೂರಿಯಾಕ್ಕೆ ರೆಡ್ ಆಕ್ಸೈಡ್ ಮಿಶ್ರಣ ಮಾಡಿ ಐಪಿಎಲ್ ಬ್ರಾಂಡ್ ಚೀಲಗಳಲ್ಲಿ ತುಂಬಿ ಪೂರೈಸಿದ್ದಾರೆ. ವಾಸ್ತವವಾಗಿ ಇದು ಪೊಟ್ಯಾಷ್ ಅಲ್ಲ. ಈ ಕುರಿತು ನಾವು ದೂರು ನೀಡಿದ್ದರಿಂದ ಕಾರ್ಖಾನೆಯವರು ಗೊಬ್ಬರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿ ‘ಎಲ್ಲವೂ ಸರಿ ಇದೆ’ ಎಂಬ ವರದಿ ತರಿಸಿದ್ದಾರೆ. ನಾವು ಕೂಡ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿದ್ದು, ಅದರಲ್ಲಿ ಅತೀ ಕಡಿಮೆ ಪೊಟ್ಯಾಷ್, ಹೆಚ್ಚು ಯೂರಿಯಾ ಇರುವ ವರದಿ ಬಂದಿದೆ’ ಎಂದು ಹೇಳಿದರು.

ತಾಲ್ಲೂಕಿನ ಬಹುತೇಕ ರೈತರಿಗೆ ಇದೇ ರೀತಿ ನಕಲಿ ಗೊಬ್ಬರ ನೀಡಿ ಮೋಸಗೊಳಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಹೂವಿನಹಡಗಲಿ ತಾಲ್ಲೂಕಿನ ರೈತರಿಗೆ 25 ಟನ್ ಪೊಟ್ಯಾಷ್ ಪೂರೈಸಿದ್ದೇವೆ. ರೈತರೊಬ್ಬರ ದೂರು ಆಧರಿಸಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿದ್ದು ವರದಿಯಲ್ಲಿ ಯಾವುದೇ ದೋಷವಿಲ್ಲ
-ಸಿದ್ದಣ್ಣ ತಳಕಲ್ ಟಿಎಪಿಸಿಎಂಎಸ್ ವ್ಯವಸ್ಥಾಪಕ ಮುಂಡರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.