ಬಳ್ಳಾರಿ: ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕೆನ್ನುವ ಜಿಲ್ಲೆಯ ಯುವಜನರಿಗೆ ಜಿಲ್ಲಾಡಳಿತ ಸ್ವಯಂಸ್ಫೂರ್ತಿಯಿಂದ “ಯುವಜನರ ನಡೆ ಸಾಧನೆಯ ಕಡೆ” ಎಂಬ ತರಬೇತಿ ಕಾರ್ಯಗಾರವನ್ನು ರೂಪಿಸಿದೆ.

ಜಿಲ್ಲಾಡಳಿತದ ನೇತೃತ್ವ ವಹಿಸಿರುವ ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್ ನೇತೃತ್ವದಲ್ಲಿ ಕಾರ್ಯಾಗಾರ ನಗರದ ಸೆ.2ರಂದು ಮಧ್ಯಾಹ್ನ 3ಕ್ಕೆ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯಲಿದೆ.

ಜಿಲ್ಲಾಧಿಕಾರಿ ಜೊತೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಪರೀಕ್ಷೆ ಸಿದ್ಧತೆ ಕುರಿಯು ತಮ್ಮ ಅನುಭವಗಳೊಂದಿಗೆ ಉಪನ್ಯಾಸ ನೀಡಲಿದ್ದಾರೆ.

ಅವರ ಜೊತೆಯಲ್ಲಿ ಐಪಿಎಸ್ ಅಧಿಕಾರಿ ನಿಶಾ ಜೇಮ್ಸ್ ಮತ್ತು ರವಿ.ಡಿ.ಚನ್ನಣ್ಣನವರ್ ಕೂಡ ಉಪನ್ಯಾಸ ನೀಡಲಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಯ ವಿವಿಧ ಹಂತಗಳು, ಅದಕ್ಕೆ ನಡೆಸಬೇಕಾದ ಸಿದ್ಧತೆ, ಸಂದರ್ಶನವನ್ನು ಎದುರಿಸಬೇಕಾದ ರೀತಿ, ತರಬೇತಿಗಳ ಅಗತ್ಯ, ಸ್ವಯಂ ಅಧ್ಯಯನ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಬೆಳಕು ಚೆಲ್ಲಲಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುತ್ತಿರುವವರು, ಅಂತಿಮ ಪದವಿ ತರಗತಿಗಳಲ್ಲಿರುವವರೆಲ್ಲರೂ ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಡಾ.ರಾಜೇಂದ್ರ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.