ಆನೇಕಲ್: ತಾಲ್ಲೂಕಿನ ಚಂದಾಪುರ ಪುರಸಭೆ ವ್ಯಾಪ್ತಿ ಇಗ್ಗಲೂರು ಬಳಿ ₹290ಕೋಟಿ ವೆಚ್ಚದಲ್ಲಿ 200 ಹಾಸಿಗೆ ಇಎಸ್ಐ ಆಸ್ಪತ್ರೆ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು. ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಕಾರ್ಮಿಕ ಸಚಿವ ಮನ್ಸೂಖ್ ಮಾಂಡವೀಯ ಇದ್ದರು.

ಇಗ್ಗಲೂರು ಬಳಿ ಆಯೋಜಿಸಿದ್ದ ಭೂಮಿ ಪೂಜೆ ಕಾರ್ಯಕ್ರಮ ಉದ್ದೇಶಿಸಿ ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಅವಶ್ಯ ಇದೆ. ಕಾರ್ಮಿಕರಿಗೆ ಉತ್ತಮ ಆರೋಗ್ಯ ಸೌಲಭ್ಯ ಸಿಗಲು ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು ಈ ಭಾಗಕ್ಕೆ ಉಪಯುಕ್ತವಾಗಿದೆ. ಆಯುಷ್ಮಾನ್ ಭಾರತ್ ಯೋಜನೆ ಖಾಸಗಿ ಆಸ್ಪತ್ರೆಯಲ್ಲೂ ಸಿಗಬೇಕು. ಇದಕ್ಕೆ ರಾಜ್ಯ ಸರ್ಕಾರ ಕೆಲವು ಬದಲಾವಣೆ ತಂದು ಸಹಕಾರ ನೀಡಬೇಕು. ಇದರಿಂದ ಜನರಿಗೆ ಅಗತ್ಯ ಆರೋಗ್ಯ ಸೌಲಭ್ಯ ಸಿಗಲಿದೆ ಎಂದರು.

ಆಸ್ಪತ್ರೆ ವಿಶೇಷತೆ: ಐದು ಎಕರೆ ಪ್ರದೇಶದಲ್ಲಿ ಏಳು ಮಹಡಿ ಆಸ್ಪತ್ರೆ, ಆಸ್ಪತ್ರೆ ಉದ್ಯೋಗಿಗಳಿಗೆ ವಸತಿ ಗೃಹ, ಕ್ಯಾಂಟೀನ್ ಸೇರಿದಂತೆ ಸುಸಜ್ಜಿತ ಹಲವು ಸೌಲಭ್ಯ ಒಳಗೊಳ್ಳಲಿದೆ.

ಇಎಸ್ಐ ಆಸ್ಪತ್ರೆ ವಿಶೇಷತೆ

ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಒದಗಿಸಲು ಇಎಸ್ಐ ಆಸ್ಪತ್ರೆ ತಾಲ್ಲೂಕಿನಲ್ಲಿ ಸ್ಥಾಪಿತವಾಗಿದ್ದು ಐದು ಎಕರೆ ಪ್ರದೇಶದಲ್ಲಿ ಏಳು ಮಹಡಿ ಆಸ್ಪತ್ರೆ ಆಸ್ಪತ್ರೆ ಉದ್ಯೋಗಿಗಳಿಗೆ ವಸತಿ ಗೃಹ ಕ್ಯಾಂಟೀನ್ ಸೇರಿದಂತೆ ಸುಸಜ್ಜಿತ ಸೌಲಭ್ಯವುಳ್ಳ ಆಸ್ಪತ್ರೆಗೆ ಭೂಮಿ ಪೂಜೆ ನೆರವೇರಿಸಲಾಯಿತು. ಬೊಮ್ಮಸಂದ್ರ ಜಿಗಣಿ ಅತ್ತಿಬೆಲೆ ವೀರಸಂದ್ರ ಎಲೆಕ್ಟ್ರಾನಿಕ್ಸಿಟಿ ಸೇರಿದಂತೆ ಐದು ಕೈಗಾರಿಕಾ ಪ್ರದೇಶಗಳಿವೆ. ಲಕ್ಷಾಂತರ ಮಂದಿ ಕಾರ್ಮಿಕರು ಈ ಭಾಗದಲ್ಲಿದ್ದಾರೆ. ವಾರ್ಷಿಕ ₹140ಕೋಟಿ ಹೆಚ್ಚು ಹಣ ಇಎಸ್ಐಗೆ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಿಂದಲೇ ಜಮೆಯಾಗುತ್ತಿದೆ. ಬಹುದಿನಗಳ ಕಾರ್ಮಿಕರ ಬೇಡಿಕೆ ಈಡೇರಿದಂತಾಗಿದ್ದು ಎರಡೂವರೆ ವರ್ಷಗಳಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಾಣವಾಗಲಿದೆ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.