ಜೆಜೆಎಂ ಕಾಮಗಾರಿ: ₹234 ಕೋಟಿ ವೆಚ್ಚದ ಯೋಜನೆಯಲ್ಲಿ ಖರ್ಚಾಗಿದ್ದು ₹47 ಕೋಟಿಯಷ್ಟೇ!
ವೆಂಕಟೇಶ್.ಡಿ.ಎನ್
Published : 17 ಜನವರಿ 2024, 5:34 IST
Last Updated : 17 ಜನವರಿ 2024, 5:34 IST
ಫಾಲೋ ಮಾಡಿ
Comments
ಹೊಸಕೋಟೆ ತಾಲ್ಲೂಕಿನ ಕಮ್ಮಸಂದ್ರದಲ್ಲಿ ಜೆಜೆಎಂ ಕಾಮಗಾರಿಗಾಗಿ ಹಗೆದಿರುವ ರಸ್ತೆ
ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರೇ ಅದನ್ನು ಒಂದು ವರ್ಷದ ಕಾಲ ನಿರ್ವಹಿಸಬೇಕಾಗುತ್ತದೆ. ಅಲ್ಲದೆ ಹಲವು ಷರತ್ತುಗಳಿಗೆ ಒಳಪಟ್ಟು ನಾವು ಗುತ್ತಿಗೆದಾರರಿಗೆ ಬಿಲ್ ನೀಡುತ್ತೇವೆ. ಮಾರ್ಚ್ ತಿಂಗಳ ವೇಳೆಗೆ ಕಾಮಗಾರಿ ಮುಕ್ತಾಯಗೊಳಿಸಬೇಕೆಂಬ ಗುರಿ ಇದೆ
-ಮಹದೇವಯ್ಯ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೊಸಕೋಟೆ
ಹಗೆದ ರಸ್ತೆಯನ್ನು ನಿರ್ಮಿಸಲು ಫಾರ್ಮಾನು ಹೊರಡಿಸಬೇಕು ಬಹುತೇಕ ಗ್ರಾಮಗಳಲ್ಲಿ ಚೆನ್ನಾಗಿದ್ದ ರಸ್ತೆ ಜೆಜೆಎಂ ಕಾಮಗಾರಿಯಿಂದ ಹಾಳಾಗಿದೆ. ಜತೆಗೆ ಅದನ್ನು ಕಾಟಾಚಾರಕ್ಕೆ ಮುಚ್ಚುತ್ತಿದ್ದಾರೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಜೆಜೆಎಂಗಾಗಿ ಹಗೆದ ರಸ್ತೆಯನ್ನು ಯಥಾ ಪ್ರಕಾರ ಗುಣಮಟ್ಟದಿಂದ ನಿರ್ಮಾಣ ಮಾಡುವಂತೆ ಗುತ್ತಿಗೆದಾರರರಿಗೆ ಫಾರ್ಮಾನು ಹೊರಡಿಸಬೇಕು. ಇಲ್ಲದಿದ್ದರೆ ಜೆಜೆಎಂ ಕಾರಣದಿಂದ ಮತ್ತೆ ಹಳ್ಳಿಗಳ ರಸ್ತೆಗಳು ಹಾಳಾಗಲಿವೆ.