ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಟು ಗ್ರಾಮಗಳಲ್ಲಿನ ರೈತರು ತಮ್ಮ ಕಂದಾಯ ದಾಖಲೆಗಳಿಗಾಗಿ ತಮಿಳುನಾಡಿಗೆ ಹೋಗಬೇಕಾಗಿದೆ. ಇಲ್ಲವಾದಲ್ಲಿ ಕರ್ನಾಟಕ ಕಂದಾಯ ನಿಯಮದಂತೆ ಮಾರಾಟ ಜಮೀನು ಹಕ್ಕು ಕಾನೂನು ರಿತ್ಯಾದಲ್ಲಿ ವ್ಯವಹರಿಸಲು ಆಗುವುದಿಲ್ಲ. ಈಗಲೂ ಸಹ ನಕ್ಷೆಯಲ್ಲಿ ಹೆಸರು ಮಾತ್ರ ಕನ್ನಡದಲ್ಲಿ ಬಂದರೆ ಉಳಿದ ಎಲ್ಲ ಅಕ್ಷರಗಳು ತಮಿಳು ಮತ್ತು ತೆಲುಗು ಭಾಷೆಯಲ್ಲಿದೆ ಎಂದು ಮರಸೂರು ಗ್ರಾಮದ ಮುಖಂಡ ಶ್ರೀನಿವಾಸರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು. ಹಲವು ಗ್ರಾಮ ಸಭೆಗಳಲ್ಲಿ ಈ ಬಗ್ಗೆ ಧ್ವನಿ ಎತ್ತಲಾಗಿದೆ. ಆದರೆ ಯಾವುದೇ ಉಪಯೋಗವಿಲ್ಲ. ಹಲವು ಭಾರಿ ಭೂದಾಖಲೆಗಳ ಆಯುಕ್ತರು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ದಾಖಲೆ ಪಡೆಯಲು ಪರದಾಡುವುದಕ್ಕಿಂತ ತಮಿಳುನಾಡಿಗಾದರೂ ಸೇರಿಸಿಬಿಡಿ ಎಂದು ನೋವು ತೋಡಿಕೊಂಡರು.