ವಿಜಯಪುರ(ದೇವನಹಳ್ಳಿ): ಕೋಲಾರ ಜಿಲ್ಲೆಯ ಮುಳಬಾಗಿಲು ಹಲವು ವೈಶಿಷ್ಟ್ಯಗಳಿಗೆ ಹೆಸರಾಗಿದೆ. ಹಾಗೆಯೇ ‘ಮುಳಬಾಗಿಲು’ ಎನ್ನುವ ಹೆಸರು ಬಿರಿಯಾನಿ ಕಾರಣಕ್ಕೆ ವಿಜಯಪುರದಲ್ಲೂ ಹೆಚ್ಚು ಪ್ರಸಿದ್ಧಿ ಪಡೆದಿದೆ.

ಕೋಲಾರ ಮುಖ್ಯ ರಸ್ತೆಯಲ್ಲಿರುವ ಈ ಮಾಂಸಹಾರಿ ಹೊಟೇಲ್ನಲ್ಲಿ ತಯಾರಾಗುವ ಬಿರಿಯಾನಿ ಮತ್ತು ಮಾಂಸಹಾರ ಖಾದ್ಯ ಆಹಾರ ಪ್ರಿಯರನ್ನು ಸೆಳೆಯುತ್ತಿದೆ. ಈ ಹೋಟೆಲ್ ಅನ್ನು ಸ್ಥಳೀಯರು ‘ಮುಳುಬಾಗಿಲು ಬಿರಿಯಾನಿ ಹೊಟೇಲ್’ ಎಂದೇ ಕರೆಯುತ್ತಾರೆ.

ಭಾನುವಾರ, ಮಂಗಳವಾರ, ಶುಕ್ರವಾರದಂದು ಮಾತ್ರ ಇಲ್ಲಿ ಕುರಿ ಮಾಂಸದ ಬಿರಿಯಾನಿ ತಯಾರಾಗುತ್ತದೆ. ಇದರ ಜತೆಗೆ ಪರೋಟ, ದಾಲ್, ಖುಷ್ಕ, ಅಮ್ಲೇಟ್, ಮೊಸರು–ಇರುಳ್ಳಿ ಸಲಾಡ್ ಇಲ್ಲಿನ ವಿಶೇಷ.

ಹೆಚ್ಚು ಮಸಾಲೆ ಪದಾರ್ಥ ಹಾಕದೆ ಸ್ವಾದಿಷ್ಟವಾಗಿ ತಯಾರಾಗುವ ಆಹಾರಕ್ಕೆ ಮನಸೋತು ಜನ ಇಲ್ಲಿಗೆ ಬರುತ್ತಾರೆ. ಸೌದೆ ಒಲೆಯಲ್ಲಿ ಬಿರಿಯಾನಿ ತಯಾರಿಸಲಾಗುತ್ತದೆ. ಬೆಳಿಗ್ಗೆ 11ಕ್ಕೆ ತಯಾರಾಗುವ ಬಿರಿಯಾನಿ ಕೇವಲ 2 ಗಂಟೆಯಲ್ಲಿ ಖಾಲಿಯಾಗುತ್ತದೆ. ದಿನಕ್ಕೆ 25 ಕೆ.ಜಿ.ಕುರಿ ಮಾಂಸದಿಂದ ಬಿರಿಯಾನಿ ತಯಾರಿಸಲಾಗುತ್ತದೆ.

‘ಉತ್ತಮ ಗುಣಮಟ್ಟದ ಮಾಂಸ ಅಡುಗೆಗೆ ಬಳಸಲಾಗುತ್ತದೆ. ಮಸಾಲೆ ಪದಾರ್ಥ ಜಾಸ್ತಿ ಹಾಕುವುದಿಲ್ಲ. ಕಡಿಮೆ ಎಣ್ಣೆ ಬಳಸಲಾಗುತ್ತದೆ. ಗರಂ ಮಸಾಲೆ ಹೆಚ್ಚು ಬಳಸಲ್ಲ. ಹಾಗಾಗಿ ಬಿರಿಯಾನಿ ರುಚಿಯಾಗಿರುತ್ತದೆ’ ಎನ್ನುತ್ತಾರೆ ಹೊಟೇಲ್ ಮಾಲೀಕ ಅಬ್ದುಲ್ ಹಫೀಜ್.

30 ವರ್ಷಗಳ ಹಿಂದೆ ಮುಳಬಾಗಿಲಿನಿಂದ ವಿಜಯಪುರಕ್ಕೆ ಬಂದಿರುವ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು. ಚಿಕ್ಕ ಗುಡಿಸಿಲಿನಲ್ಲಿ ಆರಂಭಿಸಿದ ಹೊಟೇಲ್ ಇದು. ಹೊರನೋಟಕ್ಕೆ ಆಕರ್ಷಣೆ ಇಲ್ಲದಿದ್ದರೂ ಇಲ್ಲಿ ತಯಾರಾಗುವ ಬಿರಿಯಾನಿಗೆ ಹೆಚ್ಚು ಬೇಡಿಕೆ ಇದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಮುಂತಾದ ಹಲವು ಭಾಗಗಳಿಂದ ಬಿರಿಯಾನಿ ಸವಿಯಲೆಂದು ವಾರದ ಮೂರು ದಿನಗಳಲ್ಲಿ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.

ಪಟ್ಟಣದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಕ್ರೀಡಾಪಟುಗಳನ್ನು ಹುರಿದುಂಬಿಸಲು ಚೆನ್ನಾಗಿ ಆಡಿದರೆ ಮುಳಬಾಗಿಲು ಹೊಟೇಲ್ನಲ್ಲಿ ಬಿರಿಯಾನಿ ಕೊಡಿಸ್ತೇವೆ ಎಂದು ಹುರಿದುಂಬಿಸುವ ವಾಡಿಕೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.