ಬೆಳಗಾವಿ: ‘ಈ ಬಾರಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಗೆ ಕರಾಳ ದಿನಾಚರಣೆಗಾಗಲೀ, ಪ್ರತಿಭಟನೆ ಅಥವಾ ಮೆರವಣಿಗೆ ಯಾವುದಕ್ಕೂ ಅನುಮತಿ ನೀಡಿಲ್ಲ. ಆದರೂ ಕಪ್ಪು ಬಟ್ಟೆ ಧರಿಸಿ ಬೈಕ್ ರ್ಯಾಲಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

‘ಎಂಇಎಸ್ ಉಪಟಳ ಈ ಹಿಂದೆ ಇದ್ದಷ್ಟು ಈಗ ಇಲ್ಲ. ಕನ್ನಡಿಗರ ಸಂಭ್ರಮದ ಮುಂದೆ ಅವರು ಮಂಕಾಗಿ ಹೋಗಿದ್ದಾರೆ. ಬೆರಳೆಣಿಕೆಯಷ್ಟು ಜನ ಮೆರವಣಿಗೆ ಮಾಡಿರಬಹುದು. ಅವರನ್ನು ನೇರವಾಗಿ ಬಂಧಿಸುವುದು ಸರಿಯಲ್ಲ. ರಾಜ್ಯೋತ್ಸವ ಸಂದರ್ಭದಲ್ಲಿ ಅದು ಗಲಾಟೆಗೆ ಎಡೆಮಾಡಿ ಕೊಡುತ್ತದೆ. ನಂತರ ಪೊಲೀಸರು ಸೂಕ್ತ ಕ್ರಮ ಜರುಗಿಸುತ್ತಾರೆ’ ಎಂದರು.

‘ಯಾರ್ಯಾರು ಮೆರವಣಿಗೆ ನಡೆಸಿದ್ದಾರೆ, ನಾಡ ವಿರೋಧಿ ಘೋಷಣೆ ಕೂಗಿದ್ದಾರೆ ಎಂಬುದನ್ನು ಪರಿಶೀಲಿಸಲಾಗುವುದು’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಜಿಲ್ಲಾಸ್ಪತ್ರೆಯಲ್ಲಿ ಆರು ತಿಂಗಳಲ್ಲಿ 111 ನವಜಾತ ಶಿಶುಗಳು ಮೃತಪಟ್ಟ ವಿಚಾರ, ಸಿಬ್ಬಂದಿ ನೇಮಕಾತಿ ಹಾಗೂ ಆಸ್ಪತ್ರೆಯ ಸಮಗ್ರ ಪರಿಶೀಲನೆ ಸಲುವಾಗಿ ನ.5ರಂದು ಸಭೆ ಕರೆಯಲಾಗಿದೆ’ ಎಂದರು.

‘ವಿಧಾನ ಮಂಡಲ ಚಳಿಗಾಲದ ಅಧಿವೇಶನಕ್ಕೆ ದಿನಗಣನೆ ಆರಂಭವಾಗಿದೆ. ಹೆಚ್ಚಿನ ಸಿದ್ಧತೆ ಮಾಡಿಕೊಳ್ಳಬಕಾದುದು ಏನೂ ಇಲ್ಲ. ಸುವರ್ಣ ಸೌಧದಲ್ಲಿ ಎಲ್ಲವೂ ಸಿದ್ಧ ಸ್ಥಿತಿಯಲ್ಲೇ ಇದೆ. ನಗರದ ರಸ್ತೆಗಳು ಹಾಳಾಗಿದ್ದು, ಅಲ್ಲಲ್ಲಿ ದುರಸ್ತಿ ಕಾರ್ಯ ಮಾಡಿಸಲಾಗುವುದು. ಮಳೆಯಿಂದಾಗಿ ತುಸು ವಿಳಂಬವಾಗಿದೆ. ಇದಲ್ಲದೇ ರಸ್ತೆಗಳ ದುರಸ್ತಿಗೆ ಮುಖ್ಯಮಂತ್ರಿ ಅವರು ರಾಜ್ಯಕ್ಕಾಗಿ ವಿಶೇಷ ಅನುದಾನ ನೀಡುವುದಾಗಿ ಹೇಳಿದ್ದಾರೆ’ ಎಂದೂ ಪ್ರತಿಕ್ರಿಯಿಸಿದರು.

‘ನಗರದಲ್ಲಿ ಇಎಸ್ಐ ಹಾಗೂ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗಳ ನಿರ್ಮಾಣಕ್ಕೆ ಜಾಗದ ಕೊರತೆ ಕಾಡುತ್ತಿದೆ. ಪರಿಶೀಲನೆ ಮುಂದುವರಿದಿದೆ’ ಎಂದೂ ಸಚಿವ ಹೇಳಿದರು.

ನಿಯಮ ಉಲ್ಲಂಘಿಸಿ ಎಂಇಎಸ್ ಬೈಕ್ ರ್ಯಾಲಿ

ರಾಜ್ಯೋತ್ಸವ ವಿರೋಧಿಸಿ ಇಲ್ಲಿನ ಎಂಇಎಸ್ ಕೆಲವು ಮುಖಂಡರು ಬೈಕ್ ರ್ಯಾಲಿ ನಡೆಸಿದರು. ನಗರದ ಮಾಧವ ರಸ್ತೆಯಲ್ಲಿನ ಸಂಭಾಜಿ ಉದ್ಯಾನದ ಮೈದಾನದಿಂದ ಆರಂಭಗೊಂಡು ಮಾಧವ್ ರಸ್ತೆ, ಎಸ್ಪಿಎಂ ರಸ್ತೆ, ಶಹಾಪುರ, ನಾಥಪೈ ಸರ್ಕಲ್, ಗೋವಾವೇಸ್ ಮಾರ್ಗವಾಗಿ ಮರಾಠಾ ಮಂದಿರ ತಲುಪಿತು.

‘ಬೆಳಗಾವಿ, ಬೀದರ್, ಭಾಲ್ಕಿ, ನಿಪ್ಪಾಣಿ, ಕಾರವಾರ ಸಂಯುಕ್ತ ಮಹಾರಾಷ್ಟ್ರ ಝಾಲಾಚ್ ಪಾಯಿಜೆ’ ಎಂದು ಕಿಡಿಗೇಡಿಗಳು ನಾಡವಿರೋಧಿ ಘೋಷಣೆ ಕೂಡ ಮೊಳಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.