ಬೆಳಗಾವಿ: ವಿಜಯಕಾಂತ ಡೇರಿ ಆದಿತ್ಯ ಮಿಲ್ಕ್ನ ಸಂಸ್ಥಾಪಕ, ಉದ್ಯಮಿ ಶಿವಕಾಂತ ಎಸ್. ಸಿದ್ನಾಳ (49) ಅವರು ಅನಾರೋಗ್ಯದ ಕಾರಣ ಶನಿವಾರ ನಿಧನರಾದರು.

ಬೈಲಹೊಂಗಲ ತಾಲ್ಲೂಕಿನ ಸಂಪಗಾಂವ ಮೂಲದವರಾದ ಅವರು, ನೇಗಿನಹಾಳ ಗ್ರಾಮದಲ್ಲಿ ವಿಜಯಕಾಂತ ಡೇರಿ ಆದಿತ್ಯ ಮಿಲ್ಕ್ ಉದ್ಯಮ ಆರಂಭಿಸಿದ್ದರು. ಇದರ ಮೂಲಕ ಉತ್ತರ ಕರ್ನಾಟಕದಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದ್ದರು.

ಶಿವಕಾಂತ ಅವರು ನಾಲ್ಕು ಬಾರಿ ಬೆಳಗಾವಿ ಸಂಸದರಾಗಿದ್ದ ದಿವಂಗತ ಎಸ್.ಬಿ. ಸಿದ್ನಾಳ ಅವರ ಪುತ್ರ. ವಿ.ಆರ್.ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ವಿಜಯ ಸಂಕೇಶ್ವರ ಅವರ ಅಳಿಯ. ಅವರ ಅಂತಿಮ ದರ್ಶನಕ್ಕೆ ಕುರಗುಂದ ಗ್ರಾಮದಲ್ಲಿ ವ್ಯವಸ್ಥೆ ಮಾಡಲಾಗಿದೆ. ಏ.7ರಂದು ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.