ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ಮರಾಠಿ ಮತದಾರರು ಇದ್ದಾರೆ. ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತರ ನಂತರ ಮರಾಠಾ ಮತದಾರರೇ ಹೆಚ್ಚು. ಅಂದಾಜು 51 ಸಾವಿರ ಮತದಾರರು ಇಲ್ಲಿದ್ದಾರೆ. ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 82 ಸಾವಿರ ಮತದಾರರು ಕಳೆದಬಾರಿ ಪಟ್ಟಿಯಲ್ಲಿದ್ದರು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ 90 ಸಾವಿರಕ್ಕೂ ಅಧಿಕ ಮತಗಳಿವೆ. ಜೋಯಿಡಾ ಹಳಿಯಾಳ ದಾಂಡೇಲಿ ಭಾಗದಲ್ಲೂ ಗಮನಾರ್ಹ ಸಂಖ್ಯೆ ಹೊಂದಿದ್ದಾರೆ. ಆದರೆ ಅಲ್ಲಿ ಇದೇ ಮೊದಲಬಾರಿಗೆ ಎಂಇಎಸ್ ಹೆಜ್ಜೆ ಇಟ್ಟಿದೆ. ಅಲ್ಲಿನ ಮತದಾರರನ್ನು ಎಷ್ಟರಮಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಳ್ಳಲಿದೆ ಎಂಬುದೂ ಮುಖ್ಯವಾಗುತ್ತದೆ.