ಬೆಳಗಾವಿ: ತಾಲ್ಲೂಕಿನ ಕಣಬರಗಿಯ ಮುಖ್ಯವೃತ್ತದಲ್ಲಿ ಎರಡು ದಿನಗಳ ಹಿಂದೆ ಪ್ರತಿಷ್ಠಾಪಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮನ ಅಶ್ವಾರೂಢ ಪ್ರತಿಮೆ ತೆರವು ಮಾಡುವ ವಿಚಾರಾಗಿ, ಶುಕ್ರವಾರ ತಡರಾತ್ರಿ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಶನಿವಾರ ನಸುಕಿನವರೆಗೂ ಗ್ರಾಮದಲ್ಲಿ ವಾತಾವರಣ ಬಿಗುವಿನಿಂದ ಕೂಡಿತ್ತು.

ಬೆಳಗಾವಿ ನಗರದಿಂದ ಕಣಬರಗಿಗೆ ಪ್ರವೇಶ ಮಾಡುವಾಗ ಸಿಗುವ ಮೊದಲ ವೃತ್ತದಲ್ಲಿ ಯಾವುದೇ ಪ್ರತಿಮೆ ಇರಲಿಲ್ಲ. ಆರಂಭದಿಂದಲೂ ಇದಕ್ಕೆ ರಾಣಿ ಚನ್ನಮ್ಮ ವೃತ್ತ ಎಂದೇ ಹೆಸರಿಡಲಾಗಿದೆ. ಇಲ್ಲಿ ಚನ್ನಮ್ಮನ ಪ್ರತಿಮೆ ಪ್ರತಿಷ್ಠಾಪನೆ ಮಾಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಆದರೂ ಪಾಲಿಕೆ ಅಧಿಕಾರಿಗಳು ಕಿವಿಗೊಟ್ಟಿಲ್ಲ.

ಇದರಿಂದ ಬೇಸತ್ತ ಗ್ರಾಮದ ಕನ್ನಡಿಗ ಯುವಕರು ಎರಡು ದಿನಗಳ ಹಿಂದೆ ಫೈಬರ್ನಿಂದ ಮಾಡಿದ ಪ್ರತಿಮೆಯನ್ನು ತಂದು ವೃತ್ತದಲ್ಲಿ ಪ್ರತಿಷ್ಠಾಪನೆ ಮಾಡಿದರು.

ಪ್ರತಿಮೆ ಪ್ರತಿಷ್ಠಾಪನೆಗೆ ಯಾರೂ ಪಾಲಿಕೆಯಿಂದ ಅನುಮತಿ ಪಡೆದಿಲ್ಲ. ಅದನ್ನು ಖುದ್ದಾಗಿ ತೆರವು ಮಾಡಬೇಕು ಎಂದು ಪಾಲಿಕೆ ಅಧಿಕಾರಿಗಳು ಎರಡು ದಿನ ಗಡವು ನೀಡಿದ್ದರು. ಶುಕ್ರವಾರ ತಡರಾತ್ರಿ ಪೊಲೀಸರ ನೇತೃತ್ವದಲ್ಲಿ ಪಾಲಿಕೆ ಸಿಬ್ಬಂದಿ ತೆರವು ಮಾಡಲು ಮುಂದಾದರು.

ಸ್ಥಳದಲ್ಲಿ ಗುಂಪಾಗಿ ಸೇರಿದ ಜನ ಯಾವುದೇ ಕಾರಣಕ್ಕೂ ಪ್ರತಿಮೆ ತೆರವು ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಪಾಲಿಕೆಯಿಂದ ಅನುಮತಿ ಪಡೆದ ಬಳಿಕ ಪ್ರತಿಷ್ಠಾಪನೆ ಮಾಡಲು ಅವಕಾಶ ನೀಡಲಾಗುವುದು. ಸದ್ಯ ತೆರವು ಮಾಡಿ ಎಂದು ಪೊಲೀಸರು ಮನವೊಲಿಸಲು ಯತ್ನಿಸಿದರು. ಆದರೂ ಗ್ರಾಮಸ್ಥರು ಒಪ್ಪಲಿಲ್ಲ. ಶನಿವಾರ ನಸುಕಿನ 5ರವರೆಗೂ ಸ್ಥಳದಲ್ಲಿ ಹೋರಾಟ ನಡೆದೇ ಇತ್ತು.

ಬೆಳಿಗ್ಗೆ ಜನರನ್ನು ಸ್ಥಳದಿಂದ ಚದುರಿಸಲಾಯಿತು. ಸದ್ಯ ಪ್ರತಿಮೆಗೆ ಪೊಲೀಸ್ ಕಾವಲು ನೀಡಲಾಗಿದ್ದು. ಭಾನುವಾರ ಬೆಳಿಗ್ಗೆ ಪೂಜೆ ಸಲ್ಲಿಸಿದ ಬಳಿಕ ತೆರವು ಮಾಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.