ಗೋಕಾಕ: ‘ನಗರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರನ್ನು ಮತ್ತೆ ಗೆಲ್ಲಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಮನವಿ ಮಾಡಿದರು.

ಇಲ್ಲಿನ ವಾರ್ಡ್ ಸಂಖ್ಯೆ 12, 13, 15 ಮತ್ತು 16ರಲ್ಲಿ ಭಾನುವಾರ ಮತಯಾಚಿಸಿ ಅವರು ಮಾತನಾಡಿದರು.

ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ಶಶಿಧರ ದೇಮಶೆಟ್ಟಿ ಮಾತನಾಡಿ, ‘ಈ ಕ್ಷೇತ್ರವನ್ನು ರಮೇಶ ಜಾರಕಿಹೊಳಿ ಅಭಿವೃದ್ಧಿಪಡಿಸುವ ಜತೆಗೆ, ಕೊರೊನಾ ಸಂಕಷ್ಟ ಸಮಯದಲ್ಲಿ ಜನರಿಗೆ ಸ್ಪಂದಿಸಿದ್ದಾರೆ. ಅವರನ್ನು ಪುನರಾಯ್ಕೆ ಮಾಡಬೇಕು’ ಎಂದರು.

ಬೆಮುಲ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಸದಸ್ಯರಾದ ಭಾರತಿ ಹತ್ತಿ, ವಿಜಯಲಕ್ಷ್ಮಿ ಜತ್ತಿ, ಮುಖಂಡರಾದ ಅರುಣ ಕರಣಿ, ರಮೇಶ ಮುರಗುಂಡಿ, ಶಿವಾಜಿ ಗಾಯಕವಾಡ, ರಾಮಚಂದ್ರ ಗಾಣಿಗೇರ, ವಿಶ್ವನಾಥ ಬೆಲ್ಲದ, ವಿ.ಜಿ.ಮಿರ್ಜಿ, ಎಚ್.ಡಿ. ಮುಲ್ಲಾ, ಮಹಾಲಿಂಗ ಮಂಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.