ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ವಿದ್ಯಾರ್ಥಿಗಳಿಗೆ ವಿತರಿಸುವ ಅಂಕಪಟ್ಟಿ ಮತ್ತು ಘಟಿಕೋತ್ಸವ ಪ್ರಮಾಣಪತ್ರಗಳು ನಕಲು ಆಗುವುದನ್ನು ತಡೆಯಲು ಕ್ಯುಆರ್ ಕೋಡ್ ಸಹಿತ 15 ಬಗೆಯ ಸುರಕ್ಷತಾ ಕ್ರಮ ಅಳವಡಿಸಿಕೊಂಡಿದೆ.

ಈ ಕ್ರಮಗಳಿಂದಾಗಿ ಪ್ರಮಾಣಪತ್ರಗಳನ್ನು ನಕಲು ಮಾಡುವ ಅಥವಾ ತಿದ್ದುವ ಪ್ರಕರಣಗಳ ಪ್ರಮಾಣ ತಗ್ಗಿದೆ.

ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾಲಯಗಳಲ್ಲಿ ಒಂದಾದ ವಿಟಿಯು ವ್ಯಾಪ್ತಿಯಲ್ಲಿ ಎಂಜಿನಿಯರಿಂಗ್ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರ ಸೇರಿ ಒಟ್ಟು 215 ಕಾಲೇಜುಗಳು ಇವೆ. ಪ್ರತಿ ವರ್ಷ ಘಟಿಕೋತ್ಸವದಲ್ಲಿ 80 ಸಾವಿರದಿಂದ 1 ಲಕ್ಷ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಗುತ್ತದೆ.

ವಿಟಿಯುನ ಕೆಲ ಪದವೀಧರರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವಾಗ, ಅವರ ಅಂಕಪಟ್ಟಿ ಮತ್ತು ಪ್ರಮಾಣಪತ್ರದ ಬಗ್ಗೆ ಆಯಾ ಸಂಸ್ಥೆಯವರು ಅನುಮಾನಗೊಂಡು ಅವುಗಳ ನೈಜತೆ ದೃಢಪಡಿಸಲು ವಿಟಿಯುಗೆ ಕಳುಹಿಸುತ್ತಿದ್ದರು. ಪ್ರಮಾಣಪತ್ರ ತಿದ್ದಿದ ಮತ್ತು ನಕಲಿ ಅಂಕಪಟ್ಟಿ ಸಲ್ಲಿಸಿದ್ದು ಪತ್ತೆಯಾಗುತ್ತಿತ್ತು.

‘ವಿವಿಧ ಸಂಸ್ಥೆಗಳಿಂದ ಬರುತ್ತಿದ್ದ ಕೆಲ ಅಂಕಪಟ್ಟಿ, ಪ್ರಮಾಣಪತ್ರಗಳು ನಕಲಿ ಆಗಿರುತ್ತಿದ್ದವು. ಅದಕ್ಕೆ ಅಂಕಪಟ್ಟಿಗೆ ಕ್ಯುಆರ್ ಕೋಡ್ ಮತ್ತು ಪ್ರಮಾಣಪತ್ರಗಳಿಗೆ 15 ಬಗೆಯ ಸುರಕ್ಷತಾ ಕ್ರಮ ಬಳಕೆ ಆರಂಭಿಸಿದ ಬಳಿಕ ನಕಲು ಚಟುವಟಿಕೆ ತಗ್ಗಿದೆ. ಇದರಿಂದ ವಿಟಿಯುಗೂ ಅನುಕೂಲವಾಗಿದೆ ಮತ್ತು ಸಂಕಷ್ಟವೂ ತಪ್ಪಿದೆ’ ಎಂದು ವಿಟಿಯು ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್.ಶ್ರೀನಿವಾಸ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ಮೂರು ಘಟಿಕೋತ್ಸವಗಳಲ್ಲಿ ವಿತರಿಸಲಾದ ಪ್ರಮಾಣಪತ್ರಗಳು ಕ್ಯುಆರ್ ಕೋಡ್ ಸಹಿತ ಸುರಕ್ಷತಾ ಕ್ರಮದಿಂದ ಕೂಡಿವೆ. ಇನ್ನಷ್ಟು ಸುರಕ್ಷಾ ಕ್ರಮ ಅನುಸರಿಸುತ್ತೇವೆ
ಪ್ರೊ.ಟಿ.ಎನ್.ಶ್ರೀನಿವಾಸ ಮೌಲ್ಯಮಾಪನ ಕುಲಸಚಿವ ವಿಟಿಯು ಬೆಳಗಾವಿ

ಯಾವ ಸ್ವರೂಪದ ಸುರಕ್ಷತೆ?

ಹೈ ರೆಸಲ್ಯೂಷನ್ ಬಾರ್ಡರ್ ಫೈಲ್ ಸ್ಟ್ಯಾಂಪಿಂಗ್ ವಿಸಿಬಲ್ ಫ್ಲೊರೋಸೆಂಟ್ ಇಂಕ್ ಪೆನೆಟ್ರೇಟಿಂಗ್ ನಂಬರಿಂಗ್ ಪ್ರಿಸ್ಮ್ಯಾಟಿಕ್ ಪ್ರಿಂಟಿಂಗ್ ಮ್ಯಾಜಿಕ್ ಟೆಕ್ಸ್ಟ್ ಮೈಕ್ರೋ ಲೈನ್ ಪ್ರಿಂಟಿಂಗ್ ವೈಡ್ ಪ್ಯಾಂಟೋಗ್ರಾಫ್ ಸಿಮ್ಯುಲೇಟೆಡ್ ವಾಟರ್ ಮಾರ್ಕ್ ಲಕ್ಷ್ಮಣ ರೇಖಾ ಇನ್‌ವಿಸಿಬಲ್ ಇಂಕ್ ಪ್ರಿಂಟಿಂಗ್ ಬ್ಲೈಂಡ್ ಎಂಬೋಸಿಂಗ್ ರಿಲೀಫ್ ಬ್ಯಾಕ್‌ಗ್ರೌಂಡ್ ಇನ್‌ವಿಸಿಬಲ್ ಯುವಿ ಫೈಬರ್ಸ್ ಹಾಗೂ ಮೈಕ್ರೊ ಡಾಟ್ ಬ್ಯಾಕ್‌ಗ್ರೌಂಡ್ ಎಂಬ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪ್ರಮಾಣಪತ್ರ ಸಿದ್ಧಪಡಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.