ಬೆಂಗಳೂರು: ಮದ್ಯ ಸೇವಿಸಿ ರಸ್ತೆಯಲ್ಲಿ ತೂರಾಡುತ್ತಿದ್ದ ವ್ಯಕ್ತಿಯ ಬಳಿ ಲಕ್ಷಗಟ್ಟಲೆ ಹಣ ಹಾಗೂ ಅಪಾರ ಚಿನ್ನ ಪತ್ತೆಯಾಗಿದೆ. ಹಣ ಹಾಗೂ ಚಿನ್ನವನ್ನು ಎಸ್‌ಜೆ ಪಾರ್ಕ್ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಚೆನ್ನೈನ ವಿನೋದ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತೂರಾಡುತ್ತಿದ್ದ ಹೋಗುತ್ತಿದ್ದ. ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಆತನ ಬಳಿಗೆ ತೆರಳುತ್ತಿದ್ದಂತೆ ಬ್ಯಾಗ್ ಎಸೆದು ಆತ ಪರಾರಿಯಾಗಲು ಯತ್ನಿಸಿದ್ದ. ಅನುಮಾನಗೊಂಡ ಪೊಲೀಸರು ಬ್ಯಾಗ್ ಪರಿಶೀಲನೆ ನಡೆಸಿದಾಗ ಬ್ಯಾಗ್‌ನಲ್ಲಿ ₹ 22 ಲಕ್ಷ ಹಣ ಹಾಗೂ 1 ಕೆ.ಜಿ. 750 ಗ್ರಾಂ ಚಿನ್ನ ಸಿಕ್ಕಿದೆ. ಚಿನ್ನ ಸರ, ಬಳೆಗಳು, ಗೋಲ್ಡ್ ಬಿಸ್ಕತ್‌ಗಳು ಇದ್ದವು. ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಹಣ ಹಾಗೂ ಚಿನ್ನಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ಇರಲಿಲ್ಲ. ಚೆನ್ನೈನ ಜ್ಯುವೆಲರಿ ಅಂಗಡಿಗೆ ಚಿನ್ನಾಭರಣ ಸೇರಿದ್ದು ಎನ್ನಲಾಗಿದೆ. ಅಲ್ಲಿನ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಬಂಧಿತ ಆರೋಪಿಯ ಕೈಗೆ ಚಿನ್ನ ಹಾಗೂ ಹಣ ಹೇಗೆ ಲಭಿಸಿತು? ಹಣದ ಮೂಲ ಪತ್ತೆ ಹಚ್ಚಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.