ಬೆಂಗಳೂರು: ನಗರದ ಕಲಾಕದಂಬ ಆರ್ಟ್ ಸೆಂಟರ್ ಯಕ್ಷಗಾನದಲ್ಲಿ ಡಿಪ್ಲೊಮಾ ಹಾಗೂ ಅಲ್ಪಾವಧಿ ಕೋರ್ಸ್‌ಗಳನ್ನು ನಡೆಸಲು ಮೈಸೂರಿನಲ್ಲಿರುವ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಜತೆಗೆ ಒಪ್ಪಂದ ಮಾಡಿಕೊಂಡಿದೆ.

2024ರ ಜನವರಿಯಿಂದ ಈ ಕೋರ್ಸ್‌ಗಳ ತರಗತಿ ಪ್ರಾರಂಭವಾಗಲಿದೆ. ಇದೇ ಮೊದಲ ಬಾರಿಗೆ ವಿಶ್ವವಿದ್ಯಾಲಯ ಮಾನ್ಯತೆಯೊಂದಿಗೆ ಯಕ್ಷಗಾನದಲ್ಲಿ ಡಿಪ್ಲೊಮಾ ಹಾಗೂ ಪ್ರಮಾಣ ಪತ್ರ ಆಧಾರಿತ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ.

‘ಯಕ್ಷಗಾನ ಕಲೆಯ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ದರಿಂದ ಆಸಕ್ತರಿಗೆ ತರಗತಿಗಳನ್ನು ನಡೆಸಿ, ಕಲಿಸಲು ವಿಶ್ವವಿದ್ಯಾಲಯದ ಜತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದರಿಂದಾಗಿ ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಮಾನ್ಯತೆ ಹೊಂದಿದ ಪ್ರಮಾಣ ಪತ್ರ ದೊರೆಯುತ್ತದೆ’ ಎಂದು ಸೆಂಟರ್‌ನ ರಾಧಾಕೃಷ್ಣ ಉರಾಳ ತಿಳಿಸಿದ್ದಾರೆ.

ಸಂಪರ್ಕಕ್ಕೆ: 9448510582 ಅಥವಾ 9886066732

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.