ಬೆಂಗಳೂರು: ‘ನಗ್ನ ಫೋಟೊ ಕಳುಹಿಸುವಂತೆ ಪೀಡಿಸುತ್ತಿದ್ದರು’ ಎಂದು ಆರೋಪಿಸಿ, ಖಾಸಗಿ ಆಸ್ಪತ್ರೆ ವೈದ್ಯೆಯ ಸಹೋದರರೊಬ್ಬರು, ಬಸವನಗುಡಿ ಠಾಣೆಯ ಪಿಎಸ್ಐಯೊಬ್ಬರ ವಿರುದ್ಧ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರಿಗೆ ದೂರು ಸಲ್ಲಿಸಿದ್ದಾರೆ.

‘2021ರಲ್ಲಿ ಫೇಸ್ಬುಕ್ ಮೂಲಕ ಪಿಎಸ್ಐಗೆ ಯುವತಿ ಪರಿಚಯ ಆಗಿದ್ದರು. ಆಗ ಯುವತಿ ಮೈಸೂರಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು. ಅದೇ ವರ್ಷ ಪೊಲೀಸ್ ಅಕಾಡೆಮಿಯಲ್ಲಿ ಪಿಎಸ್ಐ ತರಬೇತಿಯಲ್ಲಿ ಇದ್ದರು. ಆಗ ಸ್ನೇಹ ಬೆಳೆದಿತ್ತು. ಜತೆಗೆ ಯುವತಿ ಪಿಎಸ್ಐ ಅವರಿಂದ ₹80 ಸಾವಿರ ಸಾಲ ಪಡೆದು ವಾಪಸ್ ನೀಡಿದ್ದರು. ನಂತರ, ಪಿಎಸ್ಐ ಸಹ ವೈದ್ಯೆಯಿಂದ ಹಂತ ಹಂತವಾಗಿ ₹1.71 ಲಕ್ಷವನ್ನು ಆನ್ಲೈನ್ ಮೂಲಕ ಪಡೆದಿದ್ದರು. ಯುವತಿ ಆ ಹಣವನ್ನು ವಾಪಸ್ ಕೇಳಿದಾಗ ನಿಂದಿಸಿದ್ದರು. ಅದರಿಂದ ಮನನೊಂದ ಯುವತಿ ಆತ್ಮಹತ್ಯೆಗೂ ಯತ್ನಿಸಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಇತ್ತೀಚೆಗೆ ಪಿಎಸ್ಐ ನಗ್ನ ಫೋಟೊ ಕಳಿಸುವಂತೆ ವೈದ್ಯಗೆ ಕಿರುಕುಳ ನೀಡಿದ್ದು, ಇದನ್ನು ನಿರಾಕರಿಸಿದ ವೈದ್ಯೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಕಿರುಕುಳ ಸಹ ನೀಡುತ್ತಿದ್ದರು’ ಎಂದು ಆರೋಪಿಸಿ ವೈದ್ಯೆ ಸಹೋದರ ದೂರು ನೀಡಿದ್ದಾರೆ.

ಕಮಿಷನರ್ ಕಚೇರಿಯಿಂದ ಹನುಮಂತನಗರ ಠಾಣೆ ಪೊಲೀಸರಿಗೆ ದೂರನ್ನು ವರ್ಗಾವಣೆ ಮಾಡಲಾಗಿದ್ದು, ಸಂತ್ರಸ್ತೆ ಸಹೋದರನನ್ನು ಠಾಣೆಗೆ ಕರೆಸಿ ಹೇಳಿಕೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.