ರಾಜರಾಜೇಶ್ವರಿನಗರ: ‘ಕನ್ನಡಿಗರು ಹಾಗೂ ತಮಿಳರು ಅಣ್ಣ ತಮ್ಮಂದಿರು– ಅಕ್ಕತಂಗಿಯರಂತೆ ಜೀವನ ಸಾಗಿಸುತ್ತಿದ್ದೇವೆ. ಅಧಿಕಾರ ಮತ್ತು ಸ್ವಾರ್ಥಕ್ಕೆ ಬಿಜೆಪಿಗರು ನಮ್ಮ ನಮ್ಮಲ್ಲಿಯೇ ಭಾಷೆ, ಧರ್ಮ, ಜಾತಿಯ ಹೆಸರಿನಲ್ಲಿ ಒಡಕನ್ನು ಮೂಡಿಸಿ, ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಇವರ ವಿರುದ್ಧ ಎಚ್ಚರಿಕೆಯಿಂದ ಇರಬೇಕು’ ಎಂದು ತಮಿಳುನಾಡು ಸಂಸದ ತೊಲ್ತಿರುಮಾವಳವನ್ ಸಲಹೆ ನೀಡಿದರು.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮಿದೇವಿನಗರ ವಾರ್ಡ್ನ ಜೈಭುವನೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಕುಸುಮಾ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.

‘ಹಿಂದುಳಿದ, ಅಲ್ಪಸಂಖ್ಯಾತರು, ದಲಿತರು, ಶೋಷಿತರ ಏಳಿಗೆ, ಅಭಿವೃದ್ಧಿ, ನೆಮ್ಮದಿ ಕಾಣಬೇಕಾದರೆ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಬಿಜೆಪಿ ಬಹಳ ಅಪಾಯಕಾರಿ ಪಕ್ಷ’ ಎಂದು ಹೇಳಿದರು.

‘ಬಿಜೆಪಿಗೆ ಮತ ನೀಡಿದ್ದರೆ ಅಂಬೇಡ್ಕರ್ ಅವರ ಸಂವಿಧಾನ ಕಿತ್ತು ಹಾಕುತ್ತಾರೆ. ಮೀಸಲಾತಿಯೇ ಇರುವುದಿಲ್ಲ. ಹೆಣ್ಣುಮಕ್ಕಳಿಗೆ, ರೈತರಿಗೆ, ದಲಿತರಿಗೆ, ಹಿಂದುಳಿದ, ಅಲ್ಪಸಂಖ್ಯಾತರ ಹಕ್ಕುಗಳನ್ನೇ, ಇಲ್ಲದಂತೆ ಮಾಡುತ್ತಾರೆ. ಈ ಚುನಾವಣೆ ಮಹತ್ವದಾಗಿದ್ದು. ದೇಶದ ಸಂಪತ್ತನ್ನು ಲೂಟಿ ಮಾಡುವ ಬಿಜೆಪಿಗೆ ಲಗಾಮು ಹಾಕಿ ದೇಶ ಉಳಿಸಿ’ ಎಂದರು.

ರಾಜರಾಜೇಶ್ವರಿನಗರ ಸಭೆ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ, ತಮಿಳುನಾಡು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ವಿಚ್ಚುಲೆನಿನ್ ಪ್ರಸಾದ್, ಪಾಲಿಕೆ ಮಾಜಿ ಸದಸ್ಯೆ ಮಂಜುಳ ನಾರಾಯಣಸ್ವಾಮಿ, ದಲಿತ ಮುಖಂಡ ಮದುರೈ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.