ಬೆಂಗಳೂರು: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು (ಕೆಎಸ್ಎಂಡಿಎಂಸಿ)ಅಂಚೆ ಇಲಾಖೆ ಸಹಯೋಗದಲ್ಲಿ ಇದೇ 26ರಿಂದಮಾವುಪ್ರಿಯರ ಮನೆ ಬಾಗಿಲಿಗೆ ವಿವಿಧ ತಳಿಯ ಮಾವು ತಲುಪಿಸಲಿದೆ.

ಗ್ರಾಹಕರಿಗಾಗಿ ಈಗಾಗಲೇ ಆನ್ ಲೈನ್ ಸೇವೆ ಆರಂಭಿಸಿರುವ ನಿಗಮವು ನೆಚ್ಚಿನ ಮಾವು ಖರೀದಿಸಲು ಆನ್ಲೈನ್ ಬುಕಿಂಗ್ ಸೇವೆಗೂ ಅವಕಾಶ ಕಲ್ಪಿಸಿದೆ.

ಮಾವು ಮಾರಾಟ ಪೋರ್ಟಲ್ https://karsirimangoes.karnataka.gov.inಗೆ ಲಾಗಿನ್ ಆಗಿ ತಮಗೆ ಬೇಕಾದ ಮಾವಿನ ಹಣ್ಣಿನ ತಳಿ ಹಾಗೂ ಖರೀದಿಸುವ ಪ್ರಮಾಣವನ್ನು ತಿಳಿಸಬಹುದು. ತಮ್ಮ ವಿಳಾಸ, ಗ್ರಾಹಕರ ಮೊಬೈಲ್ ಸಂಖ್ಯೆ ನಮೂದಿಸಬೇಕು.

‘ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ಮಾವು ತಲುಪಿಸಲು ಈ ಸಲವೂ ಸೇವೆ ಆರಂಭಿಸಿದ್ದೇವೆ. ಇದೇ 26ರಿಂದ ಮಾವು ಗ್ರಾಹಕರ ಕೈಸೇರಲಿದೆ’ ಎಂದು ಕೆಎಸ್ಎಂಡಿಎಂಸಿ ಅಧ್ಯಕ್ಷ ಕೆ.ವಿ.ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.