ಬೆಂಗಳೂರು: ‘ಬುದ್ಧ ಹಾಗೂ ಮಹಾವೀರರು ಮೊದಲಿಗೆ ಹಿಂದೂಗಳಾಗಿದ್ದು, ಬಳಿಕ ಪ್ರತ್ಯೇಕ ಧರ್ಮ ರಚಿಸಿಕೊಂಡರು. ಆಗ ಧರ್ಮ ಒಡೆಯಲಿಲ್ಲವೇ? ಆಗ ಯಾಕೆ ಪ್ರಶ್ನೆ ಮಾಡಲಿಲ್ಲ?’ ಎಂದು ಕರ್ನಾಟಕ ಹೈಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಪ್ರಶ್ನೆ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸಾಧಕರೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು.

ಪ್ರೊ. ಆರಾಧ್ಯ ಅವರು ‘ನ್ಯಾಯಾಂಗ ವೀರಶೈವ–ಲಿಂಗಾಯತ ಧರ್ಮವನ್ನು ಪ್ರತ್ಯೇಕ ಮಾಡಿತು’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಗರಂ ಆದ ನಾಗಮೋಹನ್ ದಾಸ್ ಅವರು, ‘ಮುಸಲ್ಮಾನರು, ಪಾರ್ಸಿ, ಕ್ರೈಸ್ತ ಧರ್ಮಗಳಿಗೆ ಹಲವು ಹಿಂದೂಗಳು ಮತಾಂತರಗೊಂಡಿದ್ದಾರೆ. ಇದರಿಂದ ಧರ್ಮಗಳು ಪ್ರತ್ಯೇಕ ಆಗಲಿಲ್ಲವೇ? ಆಗ ಏಕೆ ಸುಮ್ಮನಿದ್ದಿರಿ?’ ಎಂದು ಪ್ರಶ್ನೆ ಮಾಡಿದರು.

‘ಲಿಂಗಾಯತರನ್ನು ಧಾರ್ಮಿಕ ಅಲ್ಪಸಂಖ್ಯಾತರೆಂದು ಪರಿಗಣಿಸಿ ಎಂಬ ಪ್ರಸ್ತಾಪವಿತ್ತು. ಆದರೆ, ನ್ಯಾಯಾಲಯದ ವರದಿಯನ್ನು ಯಾರೂ ಓದುವುದಿಲ್ಲ. ವರದಿ ಓದಿದ್ದರೆ ನಿಮಗೆ ಇಂತಹ ಪ್ರಶ್ನೆಗಳು ಉದ್ಭವಿಸುವುದಿಲ್ಲ. ಪೂರ್ವಾಗ್ರಹಪೀಡಿತರಾಗಿ ಪ್ರಶ್ನೆ ಮಾಡಬಾರದು’ ಎಂದು ಕಿವಿ ಮಾತು ಹೇಳಿದರು.

ನ್ಯಾಯಾಲಯದಲ್ಲಿ ಹಲವು ಪ್ರಕರಣಗಳು ಯಾಕೆ ಇತ್ಯರ್ಥವಾಗದೆ ಹಾಗೆಯೇ ಉಳಿದಿದೆ? ಎಂಬ ಪ್ರಶ್ನೆಗೆ ‘ ವಿವಾದಗಳು ಕೋರ್ಟ್ ಮೆಟ್ಟಿಲೇರುವ ಮುನ್ನ ಸಂಬಂಧಪಟ್ಟವರುಚರ್ಚಿಸಿ ತೀರ್ಮಾನ ಕೈಗೊಂಡರೆ ಪ್ರಕರಣಗಳು ಹೆಚ್ಚಾಗುವುದಿಲ್ಲ’ ಎಂದು ಉತ್ತರಿಸಿದರು.

ಸಂವಾದದಲ್ಲಿ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್, ಕಾರ್ಯದರ್ಶಿ ರಾಜಶೇಖರ ಹತಗುಂದಿ, ಕೋಶಾಧ್ಯಕ್ಷ ಮಲ್ಲಿಕಾರ್ಜುನಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.