ಬೆಂಗಳೂರು: ನಗರದ ರಸ್ತೆ ಬದಿಯಲ್ಲಿ ಗಿಡಗಳನ್ನು ಮೂರು ವರ್ಷ ಪೋಷಿಸಲು 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ತಮ್ಮ ಹೆಸರಿನ ಗಿಡಗಳ ಬೆಳವಣಿಗೆ ಬಗ್ಗೆ ಪೋಷಕರ ಮೊಬೈಲ್ನಲ್ಲಿಯೇ ಮಾಹಿತಿಯನ್ನೂ ದಾಖಲಿಸಬಹುದು.

‘ಹಸಿರು ಬೆಂಗಳೂರು’ ಯೋಜನೆಯಡಿ ಈ ವರ್ಷ ಒಂದು ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ಬಿಬಿಎಂಪಿ ಅರಣ್ಯ ವಿಭಾಗ ಹೊಂದಿದೆ. ಇದರಲ್ಲಿ ಶೇ 90ರಷ್ಟು ಸಸಿಗಳನ್ನು ನೆಡಲಾಗಿದ್ದು, ಅರ್ಧಕ್ಕೂ ಹೆಚ್ಚಿನ ಸಸಿಗಳ ಜವಾಬ್ದಾರಿಯನ್ನು ‘ಹಸಿರು ರಕ್ಷಕ’ ಯೋಜನೆಯಂತೆ ವಿದ್ಯಾರ್ಥಿಗಳು ವಹಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳ ಹೆಸರನ್ನು ಗಿಡಗಳ ರಕ್ಷಣಾ ಕವಚದ ಮೇಲೆ ಹಾಕಲಾಗಿದೆ. ಮಕ್ಕಳು ಅದರ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಬಿಬಿಎಂಪಿ, ಸರ್ಕಾರಿ ಶಾಲೆಗಳು ಸೇರಿದಂತೆ ಖಾಸಗಿ ಶಾಲೆಗಳ ಮಕ್ಕಳೂ ಗಿಡಗಳನ್ನು ಪೋಷಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅವರಿಗೆ ಅದರ ಮಾಹಿತಿ ದಾಖಲಿಸಲು ಅನುವಾಗುವಂತೆ ‘ಹಸಿರು ರಕ್ಷಕ’ ಆ್ಯಪ್ ಅನ್ನೂ ಬಿಬಿಎಂಪಿ ಸಿದ್ಧಪಡಿಸಿದೆ.

‘ವಿದ್ಯಾರ್ಥಿಗಳು ತಮ್ಮ ಪೋಷಕರ ಮೊಬೈಲ್ನಲ್ಲಿ ‘ಹಸಿರು ರಕ್ಷಕ’ ಆ್ಯಪ್ ಡೌನ್ಲೋಡ್ ಮಾಡಿಕೊಂಡು, ಅವರಿಗೆ ಟ್ಯಾಗ್ ಮಾಡಲಾಗಿರುವ ಗಿಡದ ಮಾಹಿತಿ, ಚಿತ್ರ ಹಾಗೂ ಅದರ ನಿರ್ವಹಣೆ ಸಮಸ್ಯೆಗಳಿಗೆ ದೂರುಗಳನ್ನೂ ದಾಖಲಿಸಬಹುದು. ಇದರೊಂದಿಗೆ ಮಕ್ಕಳೊಂದಿಗೆ ಕುಟುಂಬಸ್ಥರೂ ಸಸಿ ಪೋಷಣೆಯಲ್ಲಿ ಭಾಗವಹಿಸಿದಂತಾಗುತ್ತದೆ’ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಸ್ವಾಮಿ ತಿಳಿಸಿದರು.

‘ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಮಕ್ಕಳು ‘ಹಸಿರು ರಕ್ಷಕ’ ಯೋಜನೆಯಲ್ಲಿದ್ದಾರೆ. ಬೊಮ್ಮನಹಳ್ಳಿ ವಲಯದಲ್ಲಿ ಅತಿ ಹೆಚ್ಚು ಶಾಲೆಗಳು ಈ ಯೋಜನೆಯಲ್ಲಿ ಭಾಗಿಯಾಗಿದ್ದಾರೆ. ಪರಿಸರ ದಿನದಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಲಹೆಯಂತೆ ಈ ಯೋಜನೆ ಆರಂಭವಾಗಿದೆ. ಮುಂದಿನ ವರ್ಷದಲ್ಲಿ ಇನ್ನೂ ಹೆಚ್ಚಿನ ಮಕ್ಕಳನ್ನು ‘ಹಸಿರು ರಕ್ಷಕ’ರನ್ನಾಗಿ ನೋಂದಾಯಿಸಿಕೊಳ್ಳುವ ಗುರಿ ಇದೆ’ ಎಂದರು.

ಕುಟುಂಬಕ್ಕೂ ಜವಾಬ್ದಾರಿ: ಸ್ವಾಮಿ

‘ಗಿಡ–ಮರಗಳ ಪೋಷಣೆ ರಕ್ಷಣೆ ಬಗ್ಗೆ ನಗರದ ನಾಗರಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಉದ್ದೇಶದ ಪ್ರಥಮ ಹಂತವಾಗಿ ವಿದ್ಯಾರ್ಥಿಗಳಿಗೆ ಅವರ ಹೆಸರಿನ ಗಿಡಗಳ ಮಾಹಿತಿಯನ್ನು ‘ಹಸಿರು ರಕ್ಷಕ’ ಆ್ಯಪ್ನಲ್ಲಿ ದಾಖಲಿಸಲು ಅವಕಾಶ ನೀಡಲಾಗಿದೆ. ಪೋಷಕರ ಮೊಬೈಲ್ನಲ್ಲಿ ಈ ಪ್ರಕ್ರಿಯೆ ನಡೆಸಬಹುದಾಗಿದ್ದು ಇದರಿಂದ ಕುಟುಂಬಸ್ಥರಿಗೂ ಗಿಡದ ಬೆಳವಣಿಗೆ ನೋಡಬಹುದಾಗಿದೆ’ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಸ್ವಾಮಿ ತಿಳಿಸಿದರು. ‘ಆ್ಯಪ್ ಜೊತೆಗೆ ವೆಬ್ಸೈಟ್ನಲ್ಲೂ ಈ ವಿವರ ಅಪ್ಲೋಡ್ ಆಗಲಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿರುವ ಗಿಡ–ಮರಗಳ ವಿವರ ಸೇರಿದಂತೆ ಗಿಡ ನೆಟ್ಟು ಪೋಷಿಸುತ್ತಿರುವವರ ಮಾಹಿತಿಯನ್ನೂ ಒದಗಿಸಲಾಗುತ್ತದೆ. ‘ಹಸಿರು ರಕ್ಷಕ’ರಾಗಲು ವೈಯಕ್ತಿಕ ಮತ್ತು ಕುಟುಂಬಕ್ಕೆ ಅವಕಾಶ ನೀಡಲಾಗುತ್ತದೆ. ಗಿಡ ನೆಟ್ಟು ಪೋಷಿಸುತ್ತಿರುವ ಮಾಹಿತಿಯನ್ನು ವೆಬ್ಸೈಟ್ ಹಾಗೂ ಆ್ಯಪ್ನಲ್ಲಿ ಹಂಚಿಕೊಳ್ಳಬಹುದು’ ಎಂದರು.

ಮರಗಣತಿಗೆ ಮತ್ತೆ ಟೆಂಡರ್

‘ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಗಿಡ–ಮರಗಳ ಗಣತಿ ಮಾಡಲು ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ ಅದಕ್ಕೆ ಅಗತ್ಯವಾದ ಆರ್ಥಿಕ ವಹಿವಾಟಿನ ಮೊತ್ತ ಅಧಿಕವಾಗಿದ್ದು ಅಧ್ಯಯನ ನಡೆಸುವ ಸಂಸ್ಥೆಗಳ ವ್ಯಾವಹಾರಿಕ ಮೌಲ್ಯ ಅಷ್ಟು ದೊಡ್ಡದಾಗಿಲ್ಲ. ಹಲವು ಸಂಶೋಧನೆ ಸಂಸ್ಥೆಗಳನ್ನು ಈ ವಿಚಾರವನ್ನು ನಮ್ಮ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಟೆಂಡರ್ ಷರತ್ತುಗಳನ್ನು ಸಡಿಲಗೊಳಿಸಲು ನಿರ್ಧರಿಸಲಾಗಿದ್ದು ಶೀಘ್ರವೇ ಮರು ಟೆಂಡರ್ ಕರೆಯಲಾಗುತ್ತದೆ’ ಎಂದು ಡಿಸಿಎಫ್ ಸ್ವಾಮಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.