ಬೆಂಗಳೂರು: ‘ದೇಶದಲ್ಲಿ ಡಿಜಿಟಲ್ ನವೋದ್ಯಮದ ಸುವರ್ಣಯುಗ ಆರಂಭವಾಗಿದೆ’ ಎಂದುಪೊರ್ಟಿಯಾ ಮೆಡಿಕಲ್ನ ಸಹ–ಸ್ಥಾಪಕ ಗಣೇಶ್ ಕೃಷ್ಣನ್ ಅಭಿಪ್ರಾಯಪಟ್ಟರು.

ಡಿಜಿಟಲ್ ನವೋದ್ಯಮ ಹಾಗೂ ತಂತ್ರಜ್ಞಾನದ ಕುರಿತು ಪ್ರೆಸಿಡೆನ್ಸಿ ಯೂನಿವರ್ಸಿಟಿಯ ಸ್ಕೂಲ್ ಆಫ್ ಮ್ಯಾನೇಜ್
ಮೆಂಟ್ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಬಹುತೇಕರು ತಂತ್ರಜ್ಞಾನ ಬಳಸಿಕೊಂಡು ನವೋದ್ಯಮಗಳನ್ನು ಶುರು ಮಾಡುತ್ತಿದ್ದಾರೆ. ಇದರಿಂದ ಡಿಜಿಟಲ್ ಕ್ರಾಂತಿ ಆರಂಭವಾಗಿದೆ. ಇದನ್ನು ನಾವೆಲ್ಲ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನೋಟು ರದ್ದತಿಯಿಂದ ದೇಶಕ್ಕೆ ಒಳಿತಾಗಿದೆ. ಆ ಬಳಿಕ ಡಿಜಿಟಲ್ ಪೇಮೆಂಟ್ಗೆ ಎಲ್ಲರೂ ಒಗ್ಗಿಕೊಳ್ಳುತ್ತಿ
ದ್ದಾರೆ. ರಸ್ತೆ ಬದಿಯ ಎಳನೀರು ವ್ಯಾಪಾರಿಗೂ ಇ–ಪೇಮೆಂಟ್ ಮಾಡುವ ಕಾಲ ಬಂದಿದೆ. ಕಡಿಮೆ ಬೆಲೆಗೆ ಡೇಟಾ ಸೌಲಭ್ಯ ಸಿಗುತ್ತಿರುವುದರಿಂದ ಡಿಜಿಟಲ್ ಕ್ಷೇತ್ರಕ್ಕೆ ಸಾಕಷ್ಟು ಅನುಕೂಲವಾಗಿದೆ’ ಎಂದರು.

ಕುಲಪತಿ ನಿಸಾರ್ ಅಹಮದ್, ‘ಡಿಜಿಟಲ್ ನವೋದ್ಯಮವನ್ನು ಪಠ್ಯಕ್ರಮದಲ್ಲಿ ಕಲಿಯಲಾಗದು. ಅದು ವೃತ್ತಿ ಕೌಶಲ, ಮೈಗೂಡಿಸಿಕೊಳ್ಳಬೇಕು. ಇದಕ್ಕಾಗಿ ನಮ್ಮ ವಿ.ವಿ.ಯಲ್ಲಿ ವಿಶೇಷ ಕೇಂದ್ರ ಸ್ಥಾಪಿಸುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.