ಬೆಂಗಳೂರು: ಮಾದಕವಸ್ತು ಸೇವನೆ ವಿರುದ್ಧ ಜಾಗೃತಿ ಮೂಡಿಸುವುದಕ್ಕಾಗಿ ಅಬಕಾರಿ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಗಳ ಜಂಟಿ ಸಹಭಾಗಿತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಡಿಗೆಯಲ್ಲಿ ಚಿತ್ರನಟರು, ಸರ್ಕಾರಿ ನೌಕರರು, ಯುವಜನರು ಸೇರಿದಂತೆ ನೂರಾರು ಮಂದಿ ಹೆಜ್ಜೆ ಹಾಕಿದರು.

ಕಂಠೀರವ ಕ್ರೀಡಾಂಗಣದಲ್ಲಿ ಆರಂಭವಾದ ಜಾಗೃತಿ ನಡಿಗೆ ಕಬ್ಬನ್ ಉದ್ಯಾನದ ಮಾರ್ಗವಾಗಿ ಮಹಾತ್ಮ ಗಾಂಧಿ ರಸ್ತೆ ಮೂಲಕ ಟ್ರಿನಿಟಿ ವೃತ್ತ ತಲುಪಿತು. ಅಲ್ಲಿ ತಿರುಗಿ ಮಹಾತ್ಮ ಗಾಂಧಿ ರಸ್ತೆಯಲ್ಲಿ ಸಾಗಿದ ನಡಿಗೆ ಕಸ್ತೂರಬಾ ರಸ್ತೆಯ ಮಾರ್ಗವಾಗಿ ಪುನಃ ಕಂಠೀರವ ಕ್ರೀಡಾಂಗಣಕ್ಕೆ ತಲುಪಿ, ಕೊನೆಗೊಂಡಿತು. ಇದೇ ಕಾರ್ಯಕ್ರಮದ ಭಾಗವಾಗಿ ಬೈಕ್ ರ್ಯಾಲಿಯೂ ನಡೆಯಿತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ಹಾಗೂ ಅಬಕಾರಿ ಸಚಿವ ಕೆ. ಗೋಪಾಲಯ್ಯ, ಜಾಗೃತಿ ನಡಿಗೆಗೆ ಚಾಲನೆ ನೀಡಿದರು. ಚಿತ್ರನಟ ನೀನಾಸಂ ಸತೀಶ್, ಚಿತ್ರನಟಿ ಭಾವನಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.

ನಡಿಗೆಗೆ ಚಾಲನೆ ನೀಡಿ ಮಾತನಾಡಿದ ನಾರಾಯಣ ಗೌಡ, ‘ಮಾದಕವಸ್ತು ಸೇವನೆಯ ದುಶ್ಚಟಕ್ಕೆ ಯುವ ಸಮೂಹ ಬಲಿಯಾಗುತ್ತಿದೆ. ಒಮ್ಮೆ ಮಾದಕವಸ್ತು ಸೇವನೆಯ ವ್ಯಸನ ಅಂಟಿಸಿಕೊಂಡವರು ಅದರಿಂದ ಹೊರ ಬರಲಾಗದೇ ನರಳುತ್ತಾರೆ. ಮಾನಸಿಕ, ದೈಹಿಕ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಈ ಕುರಿತು ಯುವ ಜನರಲ್ಲಿ ಜಾಗೃತಿ ಮೂಡಿಸುವುದು ನಾಗರಿಕ ಸಮಾಜದ ಹೊಣೆ. ಈ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

‘ಮಾದಕ ವ್ಯಸನದ ವಿರುದ್ಧ ಅಭಿಯಾನ’
‘ಮಾದಕ ವ್ಯಸನಕ್ಕೆ ಗಾಂಜಾ ಪ್ರವೇಶ ಕಲ್ಪಿಸುತ್ತದೆ. ಯೌವ್ವನದಲ್ಲಿ ಆರಂಭವಾಗುವ ಈ ವ್ಯಸನಗಳು, ಜೀವನದ ಉದ್ದಕ್ಕೂ ಮುಂದುವರಿಯುತ್ತವೆ. ಆದ್ದರಿಂದ ಮಾದಕ ವ್ಯಸನದ ವಿರುದ್ಧ ಅಭಿಯಾನ ಕೈಗೊಳ್ಳಲಾಗುತ್ತಿದೆ’ ಎಂದು ಕ್ಯಾನ್ಸರ್ ತಜ್ಞ ಡಾ.ವಿಶಾಲ್ ರಾವ್ ತಿಳಿಸಿದ್ದಾರೆ.

‘ಯುವ ಸಬಲೀಕರಣ ಇಲಾಖೆ ನೇತೃತ್ವದಲ್ಲಿ ಈ ಅಭಿಯಾನ ನಡೆಯಲಿದೆ.ಬಿಬಿಎಂಪಿ ಮತ್ತು ರೋಟರಿ ಕ್ಲಬ್ ಜೊತೆಗೆ ಎನ್ಎಸ್ಎಸ್, ಎನ್ಸಿಸಿ ಮತ್ತು ಸ್ಕೌಟ್ಸ್ ಸ್ವಯಂ ಸೇವಕರೂ ಪಾಲ್ಗೊಳ್ಳುತ್ತಾರೆ. ಶಾಲೆಗಳಲ್ಲಿಯೂ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿಯಾನದಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.

‘ಗಾಂಜಾಸೇವನೆವ್ಯಸನಕ್ಕೆ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಒಳಪಡುತ್ತಿದ್ದಾರೆ. ಖುಷಿ, ಮನರಂಜನೆಗಾಗಿ ಹೆಚ್ಚಿನವರು ಇದನ್ನು ತೆಗೆದುಕೊಳ್ಳುತ್ತಾರೆ. ಇದು ದೇಹ ಹಾಗೂ ಮಿದುಳಿನ ಮೇಲೆ ಬಲವಾದ ಪರಿಣಾಮ ಬೀರುತ್ತದೆ.ಗಾಂಜಾ ಸೇದಿದಾಗ ಅದರಲ್ಲಿರುವ ಟಿ.ಎಚ್.ಸಿ. ರಾಸಾಯನಿಕ, ಶ್ವಾಸಕೋಶಗಳಿಂದ ರಕ್ತ ಸೇರುತ್ತದೆ. ರಕ್ತ ಮಿದುಳಿಗೆ ಹಾಗೂ ದೇಹದ ಇತರ ಭಾಗಗಳಿಗೆ ರಾಸಾಯನಿಕವನ್ನು ಒಯ್ಯುತ್ತದೆ. ಇದರಿಂದ ಮಿದುಳು ದುರ್ಬಲವಾಗುತ್ತದೆ. ಹೆಚ್ಚಿನವರಿಗೆ ಇದರ ಸೇವನೆಯಿಂದ ನರ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವ್ಯಕ್ತಿ ಮಾನಸಿಕವಾಗಿಯೂ ಕುಗ್ಗುತ್ತಾ ಹೋಗುತ್ತಾನೆ’ ಎಂದು ತಿಳಿಸಿದ್ದಾರೆ.

‘ತಂಬಾಕುಉತ್ಪನ್ನಗಳ ಸೇವೆಯನ್ನು ದೇಶದಲ್ಲಿ ಕಾನೂನುಬದ್ಧಗೊಳಿಸಲಾಗಿದೆ. ಇದರ ಪರಿಣಾಮ ದೇಶದಲ್ಲಿ ಶೇ 80ಕ್ಕಿಂತ ಅಧಿಕ ಮಂದಿ ಮಾದಕ ವ್ಯಸನವನ್ನು ತಂಬಾಕಿನಿಂದಲೇ ಪ್ರಾರಂಭಿಸುತ್ತಾರೆ.ಯುವಜನರಿಗೆ ಗಾಂಜಾದಿಂದ ಉಂಟಾಗುವ ಅಪಾಯಗಳ ಬಗ್ಗೆ ಅರಿವು ನೀಡಬೇಕು. ತಂಬಾಕು ಉತ್ಪನ್ನಗಳ ಸೇವನೆಗೆ ಕಡಿವಾಣ ಹಾಕಿದರೆ, ಗಾಂಜಾ ಸೇವನೆಗೂ ತಡೆ ಒಡ್ಡಲು ಸಾಧ್ಯ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.