ಬೆಂಗಳೂರು: ಐಸಿಐಸಿಐ ಲೊಂಬಾರ್ಡ್ ವಿಮಾ ಕಂಪನಿ ಸಹಯೋಗದಲ್ಲಿ ಮಾಕಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಲಾಯಿತು.

ನೆಲಮಂಗಲ ಸಂಚಾರ ಪೊಲೀಸ್ ವಿಭಾಗದ ಇನ್ಸ್ಪೆಕ್ಟರ್ ನರಸಿಂಹಮೂರ್ತಿ ಅವರು, ‘ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವುದು ಅತ್ಯಂತ ಅಪಾಯಕಾರಿ. ಅಪಘಾತಗಳಲ್ಲಿ ಇಂಥ ಚಾಲಕರು ಬದುಕಿ ಉಳಿಯುವ ಸಾಧ್ಯತೆ ಬಹಳ ಕಡಿಮೆ’ ಎಂದು ಎಚ್ಚರಿಸಿದರು.

ಪೋಷಕರು ಮಕ್ಕಳನ್ನು ಅಪಾಯಕಾರಿ ರೀತಿಯಲ್ಲಿ ದ್ವಿಚಕ್ರವಾಹನಗಳಲ್ಲಿ ಕರೆದುಕೊಂಡು ಹೋಗುತ್ತಾರೆ. ಕಾನೂನಿನ ಭಯದಿಂದ ತಾವು ಹೆಲ್ಮೆಟ್ ಧರಿಸಿದ್ದರೂ ಮಕ್ಕಳ ಸುರಕ್ಷತೆಯ ಬಗ್ಗೆ ಕುರುಡಾಗುತ್ತಾರೆ. ಮಕ್ಕಳಿಗೂ ಹೆಲ್ಮೆಟ್ ತೊಡಿಸಬೇಕು ಎಂದು ಎಚ್ಚರಿಸಿದರು.

300 ಮಂದಿ ಮಕ್ಕಳು ಪಾಲ್ಗೊಂಡಿದ್ದರು. ಕಂಪನಿಯ ಉಪಾಧ್ಯಕ್ಷ ವಿನಾಯಕ ನಾಯಕ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.