ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಅಕ್ರಮ ಕಟ್ಟಡ ಗುರುತಿಸಲು ಹಿಂದೇಟು!

ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆಯನ್ನೂ ಪಾಲಿಸದ ಎಂಜಿನಿಯರ್‌ಗಳು
Published : 7 ನವೆಂಬರ್ 2024, 1:00 IST
Last Updated : 7 ನವೆಂಬರ್ 2024, 1:00 IST
ಫಾಲೋ ಮಾಡಿ
Comments
ಸಿಎಂ, ಡಿಸಿಎಂ ಮಾತಿಗೂ ಮನ್ನಣೆ ಇಲ್ಲ
ಬಾಬುಸಾ ಪಾಳ್ಯದಲ್ಲಿ ಕಟ್ಟಡ ಕುಸಿದ ಸ್ಥಳಕ್ಕೆ ಅಕ್ಟೋಬರ್‌ 24ರಂದು ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಯಾವುದೇ ಅಕ್ರಮ ಅಥವಾ ಅನಧಿಕೃತ ಕಟ್ಟಡ ನಿರ್ಮಾಣ ಮುಂದುವರಿದರೆ ವಲಯ ಆಯುಕ್ತ ಸೇರಿದಂತೆ ಸಂಬಂಧಪಟ್ಟ ಎಂಜಿನಿಯರ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಯಾವ ಪ್ರಭಾವಕ್ಕೂ ಒಳಗಾಗಬಾರದು’ ಎಂದು ಹೇಳಿದ್ದರು. ಅಕ್ರಮ ಕಟ್ಟಡಗಳ ನಿರ್ಮಾಣದ ಬಗ್ಗೆ ಸಮೀಕ್ಷೆ ನಡೆಸಿ ಒಂದು ವಾರದಲ್ಲಿ ವರದಿ ನೀಡುವಂತೆ ಶಿವಕುಮಾರ್‌ ಅವರು ಸೂಚನೆಯನ್ನೂ ನೀಡಿದ್ದರು. ಅದೇ ರೀತಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರೂ ಆದೇಶಿಸಿದ್ದರು. ಆದರೆ, ಯಾವ ಸೂಚನೆಗೂ ಸ್ಥಳೀಯ ಮಟ್ಟದಲ್ಲಿ ಮನ್ನಣೆ ನೀಡಲಾಗಿಲ್ಲ. ಅಕ್ರಮ ಕಟ್ಟಡಗಳ ಸಮೀಕ್ಷೆ ಹಾಗೂ ವರದಿ ಇನ್ನೂ ಆರಂಭಿಕ ಹಂತದಲ್ಲೇ ಇದೆ.
‘ಮಾಹಿತಿ ಬಂದಿಲ್ಲ’
‘ಅನಧಿಕೃತ ಮತ್ತು ಅಕ್ರಮ ಕಟ್ಟಡಗಳ ಮಾಹಿತಿಯನ್ನು ಸ್ಥಳೀಯ ಎಂಜಿನಿಯರ್‌ಗಳು ಗುರುತಿಸಿ, ಮುಖ್ಯ ಎಂಜಿನಿಯರ್‌, ಜಂಟಿ ಆಯುಕ್ತ ಹಾಗೂ ವಲಯ ಆಯುಕ್ತರ ಮೂಲಕ ಕೇಂದ್ರ ಕಚೇರಿಗೆ ರವಾನಿಸಬೇಕು. ಅವುಗಳೆಲ್ಲವನ್ನೂ ಒಟ್ಟುಗೂಡಿಸಿ ವರದಿ ತಯಾರಿಸಲಾಗುತ್ತದೆ’ ಎಂದು ಅಕ್ರಮ ಕಟ್ಟಡಗಳ ವರದಿ ಸಿದ್ಧಪಡಿಸಲು ನೋಡಲ್‌ ಅಧಿಕಾರಿಯಾಗಿ ನೇಮಕವಾಗಿರುವ ನಗರ ಯೋಜನೆ ವಿಭಾಗದ ಹೆಚ್ಚುವರಿ ನಿರ್ದೇಶಕ ಗಿರೀಶ್‌ ತಿಳಿಸಿದರು. ‘ನೋಡಲ್‌ ಅಧಿಕಾರಿಯಾಗಲು ಮಂಗಳವಾರವಷ್ಟೇ ಸೂಚಿಸಿದ್ದಾರೆ. ಕೆಲಸ ಇನ್ನೂ ಪ್ರಾರಂಭವಾಗಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT