ನಗರದ ಮರಿಯಪ್ಪನ ಪಾಳ್ಯದಲ್ಲಿ ಜನರು ಎಳನೀರು ಖರೀದಿಸುತ್ತಿರುವುದು –ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಜನ ಏನಂತಾರೆ?
ತುಂಬಾ ಬಿಸಿಲು ಇರುವುದರಿಂದ ಊಟ ತಿಂಡಿ ಹೆಚ್ಚು ತಿನ್ನಲು ಆಗುತ್ತಿಲ್ಲ. ಕರ್ಬೂಜ ಮತ್ತು ಕಲ್ಲಂಗಡಿ ಹಣ್ಣು ಜಾಸ್ತಿ ಬಳಕೆ ಮಾಡುತ್ತಿದ್ದೇವೆ. ಹೊರಗೆ ಹೋದರೆ ಕಬ್ಬಿನ ಜ್ಯೂಸ್ ಎಳನೀರು ಕುಡಿಯುತ್ತಿದ್ದೇವೆ. ಇದರಿಂದ ದೇಹ ನಿರ್ಜಲೀಕರಣವಾಗುವುದು ತಪ್ಪುತ್ತದೆ.
–ಶುಭಾ ಬಿ.ಎಸ್. ನಾಯಂಡಹಳ್ಳಿ ಇನ್ಫೊಸಿಸ್ ಉದ್ಯೋಗಿ
ಸೆಕೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿತ್ಯ ಮನೆಯಲ್ಲಿ ಮತ್ತು ಕಚೇರಿಯಲ್ಲಿ ಐದು ಲೀಟರ್ ನೀರು ಕುಡಿಯುತ್ತೇನೆ ಆದರೂ ಸಾಕಾಗುತ್ತಿಲ್ಲ. ಹೊರಗೆ ಹೋದರೆ ಕಲ್ಲಂಗಡಿ ಹಣ್ಣಿನ ಜ್ಯೂಸು ಎಳನೀರು ಕಬ್ಬಿನ ಹಾಲು ಕುಡಿಯುತ್ತೇನೆ. ಮನೆಯಲ್ಲಿ ಬಾರ್ಲಿ ನೀರು ಮಜ್ಜಿಗೆ ಸೇವಿಸುತ್ತೇನೆ. ಬಿಸಿಲು ಹೀಗೇ ಮುಂದುವರಿದರೆ ಬಹಳ ಕಷ್ಟವಾಗಲಿದೆ.
–ಪುರುಷೋತ್ತಮ ಸಿ.ಡಿ. ಡೆಂಟಲ್ ಕ್ಲಿನಕ್ ಆರೋಗ್ಯ ಸಿಬ್ಬಂದಿ ಜಯನಗರ