ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೆರೆಗಳು ಹಾಗೂ ಉದ್ಯಾನಗಳ ನಿರ್ವಹಣೆ ಮೇಲ್ವಿಚಾರಣೆಗೆ ‘ಕೆರೆ ಮಿತ್ರ’ ಮತ್ತು ‘ಹಸಿರು ಮಿತ್ರ’ರಾಗಲು ನಾಗರಿಕರು ಹೆಚ್ಚಿನ ಆಸಕ್ತಿ ತೋರಿಲ್ಲ.

‘ಕೆರೆ ಮಿತ್ರ’ ಮತ್ತು ‘ಹಸಿರು ಮಿತ್ರ’ರಾಗಲು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ನೋಂದಣಿ ಮಾಡಲು ಪ್ರಯತ್ನಿಸಿದ್ದರು. ಆದರೆ, ತಾಂತ್ರಿಕ ಸಮಸ್ಯೆ ಎದುರಾಗಿ ಅವರಿಗೆ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಅಂತಿಮ ದಿನವಾಗಿದ್ದ ಅ.30ರೊಳಗೆ 1,158 ಮಾತ್ರ ನೋಂದಣಿಯಾಗಿದೆ.

ಹೆಸರು ನೋಂದಾಯಿಸಿದವರಲ್ಲಿ ಯಾದ್ರಚ್ಛಿಕವಾಗಿ(ರ್ಯಾಂಡಮ್) 10 ಜನರನ್ನು ಆಯ್ಕೆ ಮಾಡಿ, ‘ಕೆರೆ ಮಿತ್ರ’ ಹಾಗೂ ‘ಹಸಿರು ಮಿತ್ರ’ರಾಗಿ ಒಂದು ತಿಂಗಳು ಕೆರೆ ಅಥವಾ ಉದ್ಯಾನದ ಮೇಲ್ವಿಚಾರಣೆಯನ್ನು ನಿರ್ವಹಿಸುವ ಅವಕಾಶ ನೀಡುವುದಾಗಿ ಬಿಬಿಎಂಪಿ ತಿಳಿಸಿತ್ತು.

ಪಟ್ಟಿಯಲ್ಲೇ ಗೊಂದಲ: ಬಿಬಿಎಂಪಿ ವ್ಯಾಪ್ತಿಯಲ್ಲಿ 202 ಕೆರೆಗಳಿವೆ ಎಂದು ಅಧಿಕೃತವಾಗಿ ಹೇಳಲಾಗಿದೆ. ಆದರೆ, ‘ಕೆರೆ ಮಿತ್ರ’ರಾಗಲು ನೋಂದಣಿ ಪ್ರಕ್ರಿಯೆಯಲ್ಲಿದ್ದುದು 198 ವಾರ್ಡ್ಗಳ 168 ಕೆರೆಗಳು ಮಾತ್ರ. ₹35 ಕೋಟಿಯನ್ನು 174 ಕೆರೆಗಳಿಗೆ ನಿರ್ವಹಣೆಗೆ ವೆಚ್ಚ ಮಾಡಲಾಗುತ್ತಿದೆ. ಅಷ್ಟಾದರೂ ಕೆರೆಗಳಿಗೆ ‘ಮಿತ್ರರಾಗಲು’ ಇಲ್ಲಿ ಅವಕಾಶ ಇರಲಿಲ್ಲ.

ನಗರದಲ್ಲಿರುವ 202 ಕೆರೆಗಳಿಗೆ ತಲಾ 10 ‘ಕೆರೆ ಮಿತ್ರ’ರಾಗಬೇಕಾದರೆ ಕನಿಷ್ಠ 2,020 ನಾಗರಿಕರಾದರೂ ನೋಂದಣಿಯಾಗಬೇಕು. ಆದರೆ, ಇದರಲ್ಲಿ ಕಾಲು ಭಾಗದಷ್ಟು ಮಾತ್ರ ನೋಂದಣಿಯಾಗಿದೆ. ಇನ್ನು, 198 ವಾರ್ಡ್ಗಳಲ್ಲಿ 1,030 ಉದ್ಯಾನಗಳಿವೆ. ಇವುಗಳ ಮೇಲ್ವಿಚಾರಣೆಗೆ ತಲಾ ‘ಹಸಿರು ಮಿತ್ರ’ರಾಗಲು 10,300 ನಾಗರಿಕರ ಅಗತ್ಯವಿದೆ. ಶೇ 5ರಷ್ಟು ಸಾರ್ವಜನಿಕರು ನೋಂದಣಿಯಾಗಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾಗರಿಕರಿಗೆ ಕೆರೆ, ಉದ್ಯಾನಗಳ ನಿರ್ವಹಣೆ ನೀಡುವ ಬಗ್ಗೆ ‘ಬ್ರ್ಯಾಂಡ್ ಬೆಂಗಳೂರು ಸಮ್ಮೇಳನ’ದಲ್ಲಿ ಭರವಸೆ ನೀಡಿದ್ದರು. ಅದರಂತೆ ‘ಕೆರೆ ಮಿತ್ರ’ ಹಾಗೂ ‘ಹಸಿರು ಮಿತ್ರ’ ಯೋಜನೆ ಆರಂಭಿಸಲಾಗಿತ್ತು. ಆದರೆ, ಅದಕ್ಕೆ ಅಗತ್ಯವಾದ ತಂತ್ರಜ್ಞಾನವನ್ನು ರೂಪಿಸಿಕೊಳ್ಳುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ನಾಗರಿಕರು ದೂರುತ್ತಿದ್ದಾರೆ.

‘ಪ್ರಚಾರಕ್ಕಾಗಿ ನೋಂದಣಿ ಬೇಡ’

‘ಕೆರೆಗಳು ಹಾಗೂ ಉದ್ಯಾನಗಳನ್ನು ಸಿವಿಲ್ ಕಾಮಗಾರಿಗಷ್ಟೇ ಮೀಸಲಿಟ್ಟು ಅದಕ್ಕೆ ನಾಗರಿಕರ ಮೊಹರು ಪಡೆದುಕೊಂಡು ಪ್ರಚಾರ ಪಡೆಯಲು ‘ಕೆರೆ ಮಿತ್ರ’ ಮತ್ತು ‘ಹಸಿರು ಮಿತ್ರ’ರನ್ನಾಗಿಸುತ್ತಿದ್ದರೆ ಇದನ್ನು ಇಲ್ಲಿಗೇ ನಿಲ್ಲಿಸುವುದು ಉತ್ತಮ. ಕೆರೆ ನಿರ್ವಹಣೆ ಎಂದರೆ ಅಲ್ಲಿ ಗುಣಮಟ್ಟದ ನೀರು ಇರಬೇಕು ಸ್ವಚ್ಛ ಪರಿಸರ ಇರಬೇಕು ಉತ್ತಮ ಪ್ರಮಾಣದಲ್ಲಿ ಶುದ್ಧ ನೀರು ಇರಬೇಕು. ಈ ಕಾಮಗಾರಿಗಳಿಗೆ ಒತ್ತು ನೀಡದೆ ಅವರೇ ನಿರ್ಧರಿಸಿರುವ ಕೆಲಸಗಳನ್ನು ನಾವು ನೋಡುವುದು ಸರಿಯಲ್ಲ. ‘ಕೆರೆ ಮಿತ್ರ’ರಾಗಲು ಬಹಳಷ್ಟು ಮಂದಿಗೆ ಆಸಕ್ತಿ ಇದೆ. ಆದರೆ ತಾಂತ್ರಿಕವಾಗಿ ಇದು ಸಾಧ್ಯವಾಗುತ್ತಿಲ್ಲ. ಸಮಸ್ಯೆ ಪರಿಹರಿಸಲು ಯಾರಿಗೂ ಉತ್ಸಾಹ ಇಲ್ಲ’ ಎಂದು ಫ್ರೆಂಡ್ಸ್ ಆಫ್ ಲೇಕ್ಸ್ನ ರಾಮಪ್ರಸಾದ್ ದೂರಿದರು.

‘ಪಾಲಿಕೆ ಸಿಬ್ಬಂದಿಗೆ ಇಷ್ಟವಿಲ್ಲ’ ‘ಸಾರ್ವಜನಿಕರು ‘ಕೆರೆ ಮಿತ್ರ’ ಮತ್ತು ‘ಹಸಿರು ಮಿತ್ರ’ರಾಗುವುದು ಬಿಬಿಎಂಪಿ ಸಿಬ್ಬಂದಿಗೆ ಇಷ್ಟವಿಲ್ಲ. ಹೀಗಾಗಿಯೇ ಈ ಯೋಜನೆ ಬಗ್ಗೆ ಹೆಚ್ಚಿನ ಪ್ರಚಾರ ನೀಡಲಿಲ್ಲ. ನೋಂದಣಿಗೆ ಅವಕಾಶವಿದ್ದ ಅ.19ರಿಂದಲೂ ವೆಬ್ಸೈಟ್ನಲ್ಲಿ ಮೊದಲು ಲಿಂಕ್ ಇರಲಿಲ್ಲ ನಂತರ ಅದು ತೆರೆದುಕೊಳ್ಳುತ್ತಿರಲಿಲ್ಲ. ಆಮೇಲೆ ಕೆರೆಗಳ ಪಟ್ಟಿಯೇ ಇರಲಿಲ್ಲ. ನೋಂದಣಿ ಪುಟ ಮುಚ್ಚಿಕೊಂಡರೂ ನೋಂದಣಿ ಆಯಿತೇ ಇಲ್ಲವೇ ಎಂಬ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಕನಿಷ್ಠ ಮೊಬೈಲ್ ಅಥವಾ ಇಮೇಲ್ಗೆ ಒಂದು ಸಂದೇಶವೂ ಬಂದಿಲ್ಲ. ಕೆರೆಗಳು ಹಾಗೂ ತೋಟಗಾರಿಕೆ ವಿಭಾಗದ ವಿಶೇಷ ಆಯುಕ್ತರಿಂದ ಹಿಡಿದು ಮುಖ್ಯ ಎಂಜಿನಿಯರ್ ಕಾರ್ಯಪಾಲಕ ಎಂಜಿನಿಯರ್ವರೆಗೂ ಮಾಹಿತಿ ನೀಡಲು ಸಮಯ ಇಲ್ಲ. ಒಬ್ಬರು ಮತ್ತೊಬ್ಬರ ಮೇಲೆ ಜವಾಬ್ದಾರಿ ಹೊರಿಸುತ್ತಾರೆ’ ಎಂದು ಪರಿಸರ ಕಾರ್ಯಕರ್ತ ಟಿ.ಇ. ಶ್ರೀನಿವಾಸ್ ಆರೋಪಿಸಿದರು.

‘ನೋಂದಣಿಗೆ ಮತ್ತೆ ಅವಕಾಶ’

‘ಕೆರೆ ಮಿತ್ರ’ ಮತ್ತು ‘ಹಸಿರು ಮಿತ್ರ’ರಾಗಲು ನೋಂದಣಿ ಮಾಡಿಕೊಳ್ಳಬೇಕಿತ್ತು. ಆದರೆ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾಗಿಲ್ಲ. ಇನ್ನೂ ಹೆಚ್ಚಿನ ಸಮಯಾವಕಾಶ ನೀಡಲಾಗುತ್ತದೆ. ನೋಂದಣಿ ಅವಧಿಯನ್ನು ವಿಸ್ತರಿಸಲಾಗುತ್ತದೆ. ನಾಗರಿಕರಿಗೆ ಈ ಬಗ್ಗೆ ಶೀಘ್ರವೇ ಮಾಹಿತಿ ನೀಡಲಾಗುತ್ತದೆ’ ಎಂದು ಬಿಬಿಎಂಪಿ ಕೆರೆ ತೋಟಗಾರಿಕೆ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋತ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.