ಬೆಂಗಳೂರು: ಬೆಲ್ಜಿಯಂನಲ್ಲಿರುವ ಕನ್ನಡಿಗರು ಬೆಲ್ಜಿಯಂ ಕನ್ನಡ ಸಂಘದ ನೇತೃತ್ವದಲ್ಲಿ ಅಲ್ಲಿನ ಬ್ರಸ್ಸೆಲ್ಸ್ನಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಆಚರಿಸಿ ಸಂಭ್ರಮಿಸಿದರು.

ಇದೇ 10ರಂದು ನಡೆದ ಈ ಸಂಭ್ರಮದಲ್ಲಿ ನೂರಕ್ಕೂ ಅಧಿಕ ಕನ್ನಡಿಗರು ಪಾಲ್ಗೊಂಡಿದ್ದರು. ಸಮಾರಂಭಕ್ಕೆ ಬಂದವರಿಗೆ ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳು ಮತ್ತು ಮಕ್ಕಳಿಗೆ ಕನ್ನಡದ ‘ಬಾಲಕಥಾ’ ಪುಸ್ತಕವನ್ನು ಉಡುಗೊರೆಯಾಗಿ ನೀಡಲಾಯಿತು. ಬೆಲ್ಜಿಯಂನ ಮೊದಲ ಕನ್ನಡ ಸಂಗೀತ ಬ್ಯಾಂಡ್ ಆದ ‘ನಿನಾದ’ ತಂಡವು ನಾಡಗೀತೆ ಸೇರಿ ಕನ್ನಡದ ಗೀತಗಳನ್ನು ಸಂಗೀತ ವಾದ್ಯಗಳೊಂದಿಗೆ ಪ್ರಸ್ತುತಪಡಿಸಿತು.

ಗಾಯನ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು. ಪ್ರಶ್ನೋತ್ತರ ಸ್ಪರ್ಧೆಗಳು, ಮಕ್ಕಳಿಗೆ ವಿವಿಧ ಆಟಗಳನ್ನು ಆಯೋಜಿಸಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.