ಬೆಂಗಳೂರು: ‘ಕುವೆಂಪು ಮತ್ತು ರಾಜ್‌ಕುಮಾರ್ ಅವರು ಕನ್ನಡದ ಅಸ್ಮಿತೆ’ ಎಂದು ವಿಮರ್ಶಕ ಎನ್. ವಿದ್ಯಾಶಂಕರ್ ಹೇಳಿದರು.

ಪ್ರೀತಿ ಪುಸ್ತಕ ಪ್ರಕಾಶನ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿ.ವಿ. ಆನಂದಮೂರ್ತಿ ಅವರು ಸಂಪಾದಿಸಿದ ‘ಡಾ.ರಾಜ್‌ಕುಮಾರ್ ನಾಡು ನುಡಿಯ ಅಸ್ಮಿತೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಥೆ, ಕಾದಂಬರಿ, ಕಾವ್ಯಗಳ ಮೂಲಕ ಕುವೆಂಪು ಅವರು ವಿಶ್ವಮಾನವ ಸಂದೇಶ ಸಾರಿದರೆ, ವರನಟ ರಾಜ್‌ಕುಮಾರ್ ಅವರು ಪೌರಾಣಿಕ, ಸಾಮಾಜಿಕ, ಐತಿಹಾಸಿಕ, ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟನೆ ಮಾಡುವುದರ ಮೂಲಕ ಕನ್ನಡದ ಅಸ್ಮಿತೆಯನ್ನು ಪರದೆಯ ಮೂಲಕ ಸಾರ್ವಜನಿಕರ ಮುಂದೆ ಪ್ರಸ್ತುತಪಡಿಸಿದ್ದಾರೆ. ಆದ್ದರಿಂದ, ರಾಜ್‌ಕುಮಾರ್ ಅವರ ಕನ್ನಡ ಅಸ್ಮಿತೆಯ ಬಗ್ಗೆ ಚರ್ಚೆಗಳು ನಡೆಯಬೇಕು’ ಎಂದರು.

‘ಕನ್ನಡ ಮಣ್ಣಿಗೆ ಒಂದು ಉಪನಾಗರಿಕತೆ ಇದ್ದು, ಅದನ್ನು ರಾಜ್‌ಕುಮಾರ್ ಅವರು ಸಿನಿಮಾಗಳ ಮೂಲಕ ಪ್ರಸ್ತುತಪಡಿಸಿದ್ದಾರೆ. ವೈವಿಧ್ಯಮಯ ಸಿನಿಮಾಗಳಲ್ಲಿ ನಟಿಸುವ ಮೂಲಕ ರಾಜ್‌ಕುಮಾರ್ ಅವರು ಇಡೀ ಕನ್ನಡ ನಾಡಿನ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾರೆ. ರಣಧೀರ ಕಂಠೀರವ, ಬಬ್ರುವಾಹನ, ಭಕ್ತಕುಂಬಾರ, ಮಯೂರ ಸೇರಿದಂತೆ ಹಲವಾರು ಪೌರಾಣಿಕ ಮತ್ತು ಭಕ್ತಿ ಪಾತ್ರಗಳಲ್ಲಿ ನಟಿಸಿದ್ದಾರೆ. ಜಾತಿಭೇದವಿಲ್ಲದೇ ಎಲ್ಲ ವರ್ಗ ಜನರ ಮನಸ್ಸನ್ನು ಗೆದ್ದಿದ್ದಾರೆ’ ಎಂದರು.

ಪ್ರೀತಿ ಪ್ರಕಾಶನದ ಬಿ.ಎಸ್. ಮಧುಮತಿ, ಚಿತ್ರ ನಿರ್ಮಾಪಕಿಯರು ಹಾಗೂ ರಾಜ್‌ಕುಮಾರ್ ಅವರ ಪುತ್ರಿಯರಾದ ಪೂರ್ಣಿಮಾ ರಾಮ್‌ಕುಮಾರ್, ಲಕ್ಷ್ಮೀ ಗೋವಿಂದರಾಜು, ಭಾಷಾ ವಿಜ್ಞಾನಿ ಕೆ.ವಿ. ನಾರಾಯಣ, ಪುಸ್ತಕದ ಸಂಪಾದಕ ಜಿ.ವಿ. ಆನಂದಮೂರ್ತಿ ಭಾಗವಹಿಸಿದ್ದರು.

Cut-off box - ಪುಸ್ತಕ ಪರಿಚಯ ಪುಸ್ತಕ;ಡಾ.ರಾಜ್‌ಕುಮಾರ್ ನಾಡು ನುಡಿಯ ಅಸ್ಮಿತೆ ಸಂಪಾದಕ;ಜಿ.ವಿ. ಆನಂದಮೂರ್ತಿ ಪ್ರಕಾಶನ;ಪ್ರೀತಿ ಪುಸ್ತಕ ಪ್ರಕಾಶನ ಪುಟಗಳು;348 ಬೆಲೆ;₹400

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.