ಕೆಂಗೇರಿ: ಇಲ್ಲಿನ ಕೆರೆಯಂಗಳದಲ್ಲಿ ಸೋಮವಾರ ನಾಪತ್ತೆಯಾಗಿದ್ದ ಇಬ್ಬರು ಮಕ್ಕಳು ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ.

ಕೆಂಗೇರಿ ಬಳಿಯ ಹರ್ಷ ಲೇಔಟ್ ನಿವಾಸಿ ಜಯಮ್ಮ ಅವರ ಮಕ್ಕಳಾದ ಜಾನ್ಸನ್ ಅಲಿಯಾಸ್ ಶ್ರೀನಿವಾಸ್(13) ಹಾಗೂ ಮಹಾಲಕ್ಚ್ಮಿ(11) ಎಂಬುವರು ಮೃತರು. ಕೆಲ ವರ್ಷಗಳ ಕಾಲ ಸನ್ ಸಿಟಿ ಬಡಾವಣೆಯಲ್ಲಿ ವಾಸವಾಗಿದ್ದ ತಮಿಳುನಾಡು ಮೂಲದ ಜಯಮ್ಮ ಹದಿನೈದು ದಿನಗಳ ಹಿಂದೆಯಷ್ಟೇ ಹರ್ಷ ಲೇಔಟ್ನಲ್ಲಿ ಬಾಡಿಗೆ ಮನೆಗೆ ಬಂದಿದ್ದರು. ಇವರಿಗೆ ಮೂವರು ಮಕ್ಕಳು.

ಪೌರಕಾರ್ಮಿಕರಾಗಿದ್ದ ಜಯಮ್ಮ ಎಂದಿನಂತೆ ಸೋಮವಾರ ಮುಂಜಾನೆ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಮನೆಯಲ್ಲಿದ್ದ ಮಕ್ಕಳು ಕೊಳಾಯಿ ನೀರಿನಲ್ಲಿ ಆಟವಾಡುತ್ತಿದ್ದರು. ನೀರು ಪೋಲು ಮಾಡದಂತೆ ನೆರೆ ಮನೆಯವರು ಸೂಚಿಸಿದ್ದಾರೆ. ಹೀಗಾಗಿ ಮಹಾಲಕ್ಷ್ಮಿ ಹಾಗೂ ಶ್ರೀನಿವಾಸ್ ನೀರು ತರಲೆಂದು ಬಿಂದಿಗೆ ಹಿಡಿದು ಕೂಗಳತೆಯ ದೂರದಲ್ಲಿರುವ ಕೆರೆಗೆ ಹೋಗಿದ್ದಾರೆ. ಈ ವೇಳೆ ಮಹಾಲಕ್ಷ್ಮಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾಳೆ. ತಂಗಿಯನ್ನು ಕಾಪಾಡಲು ಹೋದ ಅಣ್ಣನೂ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಸ್ಥಳೀಯ ನಿವಾಸಿಗಳ ದೂರಿನ ಮೇರೆಗೆ ಸೋಮವಾರ ಸಂಜೆ ಸ್ಥಳಕ್ಕೆ ಬಂದ ಪೊಲೀಸ್ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಮಕ್ಕಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದರು. ಆದರೂ ಅವರು ಪತ್ತೆಯಾಗಿರಲಿಲ್ಲ. ಜೋರು ಮಳೆಯ ಕಾರಣ ರಾತ್ರಿಯ ವೇಳಗೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.

ಮಂಗಳವಾರ ಮುಂಜಾನೆ ಯಿಂದಲೇ ಮತ್ತೆ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿ, ಬೋರ್ವೆಲ್ ಕ್ಯಾಮೆರಾ ನೆರವು ಪಡೆದರು. ಬೆಳಿಗ್ಗೆ 11ರ ಹೊತ್ತಿಗೆ ಜಾನ್ಸನ್ ಶವ ಪತ್ತೆಯಾಯಿತು. ಕಾರ್ಯಾಚರಣೆ ಮುಂದುವರಿಯಿತು. ಸಂಜೆ 4ರ ವೇಳೆಗೆ ಸಹೋದರಿ ಮಹಾಲಕ್ಷ್ಮಿ ಶವ ಕೂಡ ಕೆರೆಯ ಮತ್ತೊಂದು ಅಂಚಿನಲ್ಲಿ ಪತ್ತೆಯಾಯಿತು.

ಕಟ್ಟೆಯೊಡೆದ ದುಃಖ :

ಅವಘಡದ ಸುದ್ದಿ ಅರಿತ ನೂರಾರು ಸ್ಥಳೀಯ ನಿವಾಸಿಗಳು ಕೆರೆ ಬಳಿ ಜಮಾಯಿಸಿದ್ದರು. ಬಾಲಕ, ಬಾಲಕಿಯರ ಶವ ಕಂಡು ಮರುಗಿದರು. ಸೋಮವಾರದಿಂದಲೂ ಮಕ್ಕಳಿಗಾಗಿ ರೋದಿಸುತ್ತಿದ್ದ ಜಯಮ್ಮ, ಮಗನ ಶವ ನೋಡಿ ಗದ್ಗದಿತರಾದರು. ಸಂಸಾರದ ನೊಗ ಹೊರಬೇಕಿದ್ದ ಮಗ ಬಾಲ್ಯದಲ್ಲೇ ಅಸುನೀಗಿದ್ದನ್ನು ಕಂಡು ಕಣ್ಣೀರಾದರು. ಅಗ್ನಿಶಾಮಕ ದಳದ ಅಧಿಕಾರಿ ಸಿದ್ದರಾಜು, ಕೆಂಗೇರಿ ಸಿಪಿಐ ಸಂಜೀವ್ ಗೌಡ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

ಕೆರೆಗಿಲ್ಲ ತಡೆಗೋಡೆ

ಕೆರೆಗೆ ಮುಂಭಾಗದಲ್ಲಿ ಬಾಗಿಲು ಅಳವಡಿಸಲಾಗಿದೆ. ಆದರೆ, ಕೆರೆಯ ಸುತ್ತ ಬೇಲಿಯ ವ್ಯವಸ್ಥೆಯಿಲ್ಲ. ಕೆರೆಯನ್ನು ಪ್ರವೇಶಿಸಲು ಅನೇಕ ದಾರಿಗಳಿವೆ. ಕೆರೆ ಕಾವಲಿಗಾಗಿ ನೇಮಕ ಮಾಡಲಾಗಿರುವ ಮಹಿಳಾ ಸಿಬ್ಬಂದಿಗೆ ಸಂಪೂರ್ಣ ನಿಗಾ ಇಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಂಥ ಅವಘಡ ಸಂಭವಿಸುತ್ತಿದೆ. ಕೆಲ ತಿಂಗಳ ಹಿಂದೆಯೂ ವ್ಯಕ್ತಿಯೊಬ್ಬ ಕೆರೆಯ ಅಂಗಳದಲ್ಲಿನ ಮರಕ್ಕೆ ನೇಣು ಹಾಕಿಕೊಂಡ ಘಟನೆ ನಡೆದಿತ್ತು ಎಂದು ಸ್ಥಳೀಯರೊಬ್ಬರು ದೂರಿದರು.

ಈ ಸಂಬಂಧ ಪ್ರತಿಕ್ರಿಯೆಗಾಗಿ ಕೆರೆ ನಿರ್ವಹಣಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಗೀತಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು, ಅವರು ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.