ಬೆಂಗಳೂರು: ಅತ್ತಿಗುಪ್ಪೆ ಮೆಟ್ರೊ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಳಿಗೆ ಹಾರಿದ ಪರಿಣಾಮ, ಈ ಮಾರ್ಗದ ಮೆಟ್ರೊ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಗುರುವಾರ ಮಧ್ಯಾಹ್ನ 2.10ರ ಸುಮಾರಿಗೆ ನಿಲ್ದಾಣದಲ್ಲಿ ರೈಲಿಗೆ ಕಾಯುತ್ತಿದ್ದ ವ್ಯಕ್ತಿ, ಹಳಿಗೆ ಹಾರಿದ್ಧಾರೆ. ವ್ಯಕ್ತಿ ಮೇಲೆ ರೈಲು ಹರಿದ ಪರಿಣಾಮ ದೇಹ ಛಿದ್ರಗೊಂಡಿದೆ. ಹೀಗಾಗಿ ರೈಲು ಅಲ್ಲಿಯೇ ನಿಂತಿದೆ.

ಸದ್ಯ ನೇರಳೆ ಮಾರ್ಗದಲ್ಲಿ ವೈಟ್ಫೀಲ್ಡ್ನಿಂದ ಮಾಗಡಿ ರಸ್ತೆ ನಿಲ್ದಾಣ ಹೊಸಹಳ್ಳಿವರೆಗೆ ಮಾತ್ರ ರೈಲು ಕಾರ್ಯಾಚರಣೆ ನಡೆಸುತ್ತಿದೆ. ಚಲ್ಲಘಟ್ಟದಿಂದ ಮಾಗಡಿ ರಸ್ತೆವರೆಗಿನ ರೈಲು ಸಂಚಾರ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.

‘ಮೆಟ್ರೊ ಹಳಿ ಮೇಲೆ ಬಿದ್ದರೆ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ’ ಎಂದು ಮೆಟ್ರೊ ಸಿಬ್ಬಂದಿ ಹೇಳಿದ್ದಾರೆ.

ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.