ಬೆಂಗಳೂರು: ಸಿನಿಮಾ ನಿರ್ಮಾಪಕ ಮಹಾದೇವ್ ಅವರಿಗೆ ಯುವತಿ ಹೆಸರಿನಲ್ಲಿ ಹುಚ್ಚಾಟಕ್ಕಾಗಿ ಕರೆ (ಫ್ರಾಂಕ್ ಕಾಲ್) ಮಾಡಿದ್ದ ನಿರ್ದೇಶಕ ರವೀಂದ್ರ ಅವರನ್ನು ವಶಕ್ಕೆ ಪಡೆದಿದ್ದ ಅನ್ನಪೂರ್ಣೆಶ್ವರಿನಗರ ಠಾಣೆ ಪೊಲೀಸರು, ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ.

‘ನಟ ದರ್ಶನ್ ಅಭಿನಯದ ಚಿಂಗಾರಿ ಸಿನಿಮಾ ನಿರ್ಮಾಪಕ ಮಹಾದೇವ್ ಅವರು ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡು, ರವೀಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು’ ಎಂದು ಪೊಲೀಸರು ಹೇಳಿದರು.

‘ಆರೋಪಿ ರವೀಂದ್ರ, ಯೂಟ್ಯೂಬ್ ಚಾನೆಲ್ ಹೊಂದಿರುವುದಾಗಿ ಗೊತ್ತಾಗಿದೆ. ಪ್ರಸಿದ್ಧ ವ್ಯಕ್ತಿಗಳಿಗೆ ಹುಚ್ಚಾಟಕ್ಕಾಗಿ ಕರೆ ಮಾಡಿ ರವೀಂದ್ರ ಹಾಗೂ ಇತರರು, ಅದರ ಧ್ವನಿಮುದ್ರಣವನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಅ. 28ರಂದು ಮಹಾದೇವ್ ಅವರಿಗೆ ಕರೆ ಮಾಡಿದ್ದ ರವೀಂದ್ರ ಕಡೆಯ ಯುವತಿ, ‘ನನಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ₹ 50 ಸಾವಿರ ಪಡೆದುಕೊಂಡಿದ್ದಿರಾ. ಈಗ ಅವಕಾಶ ಕೊಟ್ಟಿಲ್ಲ. ಹಣವನ್ನು ವಾಪಸು ಕೊಡಿ’ ಎಂದಿದ್ದರು.’

‘ಯಾರಿಂದಲೂ ಹಣ ಪಡೆದಿಲ್ಲವೆಂದು ಹೇಳಿ ಮಹಾದೇವ್ ಕರೆ ಕಡಿತಗೊಳಿಸಿದ್ದರು. ಇದಾದ ನಂತರವೂ ಯುವತಿ, ಹಲವು ಬಾರಿ ಕರೆ ಮಾಡಿದ್ದರು. ವಿಷಯ ತಿಳಿದ ಮಹಾದೇವ್ ಅವರ ಮಗ, ದೂರವಾಣಿ ಸಂಖ್ಯೆ ಪರಿಶೀಲಿಸಿದ್ದ. ಅದು ನಿರ್ದೇಶಕ ರವೀಂದ್ರ ಕಚೇರಿಯದ್ದೆಂದು ಗೊತ್ತಾಗಿತ್ತು. ಅವಾಗಲೇ ಠಾಣೆಗೆ ಬಂದು ದೂರು ನೀಡಿದ್ದರು’ ಎಂದು ಹೇಳಿದರು.

‘ಹುಚ್ಚಾಟಕ್ಕಾಗಿ ವಿಡಿಯೊ ಮಾಡುವ ಉದ್ದೇಶದಿಂದ ಕರೆ ಮಾಡಿದ್ದಾಗಿ ನಿರ್ದೇಶಕ ಹೇಳಿಕೊಂಡಿದ್ದಾನೆ. ಮಹಾದೇವ್ ಅವರಿಗೂ ಈ ವಿಷಯ ಗೊತ್ತಾಗಿದೆ. ಹೀಗಾಗಿ, ಆರೋಪಿಯಿಂದ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.