ಬೆಂಗಳೂರು: ಹೊಸ ವರ್ಷದ ಪಾರ್ಟಿಗಳಿಗೆ ಪೂರೈಸಲು ಹೊರ ರಾಜ್ಯದಿಂದ ರೈಲುಗಳ ಮೂಲಕ ತರುತ್ತಿದ್ದ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ರೈಲ್ವೆ ಪೊಲೀಸರು ಜಪ್ತಿ ಮಾಡಿ, ಏಳು ಮಂದಿಯನ್ನು ಬಂಧಿಸಿದ್ದಾರೆ.

ಉತ್ತರ ತ್ರಿಪುರದ ರಾಜೇಶ್ ದಾಸ್, ಬಿಹಾರದ ಅಮರ್ಜಿತ್ ಕುಮಾರ್, ಒಡಿಶಾದ ನಿತ್ಯಾನಾನದ್ ದಾಸ್, ನಿಕೇಶ್ ರಾಣ, ಜಲಂಧರ್ ಕನ್ಹರ್, ಬೋರೆಬೆಟ್ಟದ ಬೈಕುಂಟಾ ಕನ್ಹರ್ ಹಾಗೂ ಸಾಗರ್ ಕನ್ಹರ್ ಬಂಧಿತರು.

ಬಂಧಿತರಿಂದ ₹60ಲಕ್ಷ ಮೌಲ್ಯದ 60 ಕೆ.ಜಿ 965 ಗ್ರಾಂ ಮಾದಕ ವಸ್ತು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

‘ಆರೋಪಿಗಳು ಪ್ರಶಾಂತಿ ಎಕ್ಸ್ಪ್ರೆಸ್, ಶೇಷಾದ್ರಿ ಎಕ್ಸ್ಪ್ರೆಸ್, ಶಾಲಿಮರ್ ವಾಸ್ಕೊ ಎಕ್ಸ್ಪ್ರೆಸ್ಗಳ ಮೂಲಕ ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಜಿಲ್ಲೆಗಳ ಗ್ರಾಹಕರಿಗೆ ಪೂರೈಸಲು ಮಾದಕ ವಸ್ತುಗಳನ್ನು ತರುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ರೈಲುಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳ ವಿರುದ್ಧ ಬೆಂಗಳೂರು ನಗರ ಪೊಲೀಸ್ ಠಾಣೆ, ಬೈಯಪನಹಳ್ಳಿ ಪೊಲೀಸ್ ಠಾಣೆ ಹಾಗೂ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.