ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರಿಗೆ ಪಾವತಿಸಿರುವ ಬಿಲ್ ಮೊತ್ತದಲ್ಲಿ ಬಾಕಿ ಉಳಿದಿರುವ ಶೇಕಡ 25ರಷ್ಟನ್ನು ಬಿಡುಗಡೆ ಮಾಡಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ವಿಚಾರಣಾ ಆಯೋಗದ ಅಂತಿಮ ವರದಿಯ ತೀರ್ಮಾನಕ್ಕೆ ಒಳಪಟ್ಟು, ಶೇ 100ರಷ್ಟು ಬಿಲ್ ಪಾವತಿಸಲು ಬಿಬಿಎಂಪಿ ಮುಖ್ಯ ಆಯುಕ್ತರು ಸಲ್ಲಿಸಿದ್ದ ಪ್ರಸ್ತಾವಕ್ಕೆ ಸಮ್ಮತಿ ನೀಡಲಾಗಿದೆ.

ಲೋಕೋಪಯೋಗಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಇತರೆ ಮಹಾನಗರ ಪಾಲಿಕೆಗಳೂ ಸೇರಿದಂತೆ ಇತರೆ ಇಲಾಖೆಗಳಲ್ಲಿಯೂ ಕಾಮಗಾರಿಗಳ ತನಿಖೆಯನ್ನು ಆಯೋಗ ನಡೆಸುತ್ತಿದ್ದರೂ, ಶೇ 100ರಷ್ಟು ಬಿಲ್ ಪಾವತಿ ಮಾಡಲಾಗಿದೆ. ಎಲ್ಲ ಇಲಾಖೆಗಳಲ್ಲಿ ಬಿಲ್ ಪಾವತಿಯಲ್ಲಿ ಏಕರೂಪತೆ ಕಾಯ್ದುಕೊಳ್ಳಲು ಹಾಗೂ ಬಿಬಿಎಂಪಿ ಗುತ್ತಿಗೆದಾರರ ಸಂಘದ ಮನವಿಯಂತೆ ಬಿಬಿಎಂಪಿಯಲ್ಲೂ ಶೇ 100ರಷ್ಟು ಬಿಲ್ ಪಾವತಿಸಲು ಸರ್ಕಾರ ತೀರ್ಮಾನಿಸಿ ಆದೇಶಿಸಿದೆ.

ಕಾಮಗಾರಿ ಮುಗಿದ ನಂತರದ ಒಂದು ವರ್ಷ ಕಾರ್ಯದಕ್ಷತೆ ಖಾತರಿಗಾಗಿ ಶೇ 5ರಷ್ಟು ಮೊತ್ತವನ್ನು ಠೇವಣಿಯಾಗಿರಿಸಿಕೊಳ್ಳಲಾಗುತ್ತದೆ. ಈ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸಿದ್ದರೆ ಅದರ ಜೊತೆಗೆ, ಆಯೋಗದ ಅಂತಿಮ ವರದಿಯಲ್ಲಿ ಯಾವುದಾದರೂ ದೋಷ ಕಂಡುಬಂದರೆ ಕ್ರಮ ಕೈಗೊಳ್ಳಲು ಶೇ 5ರಷ್ಟನ್ನು ಉಳಿಸಿಕೊಳ್ಳಬೇಕು. ಹೀಗಾಗಿ, ಕಾಮಗಾರಿ ಮೊತ್ತದಲ್ಲಿ ಶೇ 10ರಷ್ಟನ್ನು ‘ಬ್ಯಾಂಕ್ ಗ್ಯಾರಂಟಿ’ ಪಡೆದುಕೊಂಡು ಸಂಪೂರ್ಣ ಬಿಲ್ ಪಾವತಿಸಲು ಸೂಚಿಸಲಾಗಿದೆ.

2021ರ ಏಪ್ರಿಲ್ನಿಂದ ಪಾವತಿಸಲಾಗಿರುವ ಬಿಲ್ಗಳಲ್ಲಿ ಶೇ 25ರಷ್ಟನ್ನು ತಡೆಹಿಡಿಯಲಾಗಿದೆ. ಈ ಬಾಬ್ತಿನಲ್ಲಿ, ಸರ್ಕಾರದ ಅನುದಾನದಿಂದ ಪೂರ್ಣಗೊಳಿಸಲಾಗಿರುವ ಕಾಮಗಾರಿಗಳ ಬಿಲ್ಗಳಲ್ಲಿ ಸುಮಾರು ₹1 ಸಾವಿರ ಕೋಟಿ ಬಾಕಿ ಉಳಿದಿದೆ. ಬಿಬಿಎಂಪಿ ಅನುದಾನದ ಕಾಮಗಾರಿಗಳ ಬಿಲ್ಗಳಿಗೆ ₹650 ಕೋಟಿ ಪಾವತಿಸಬೇಕಾಗಿದೆ.

ಮನ್ನಣೆ: ‘ಬಿಲ್ ಮೊತ್ತದಲ್ಲಿ ಬಾಕಿ ಉಳಿದಿರುವ ಶೇ 25ರಷ್ಟನ್ನು ಪಾವತಿಸಬೇಕು ಎಂದು ಕಾಮಗಾರಿ ಸ್ಥಗಿತಗೊಳಿಸಿ ಸೆಪ್ಟೆಂಬರ್ 2ರಂದು ಪ್ರತಿಭಟನೆ, ಸತ್ಯಾಗ್ರಹ ನಡೆಸಿದ್ದೆವು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶೀಘ್ರ ಬಿಡುಗಡೆಯ ಭರವಸೆ ನೀಡಿದ್ದರು. ಇದೀಗ ಸರ್ಕಾರದಿಂದ ಆದೇಶವಾಗಿದ್ದು, ಸಂಘದ ಎಲ್ಲ ಗುತ್ತಿಗೆದಾರರ ಪರವಾಗಿ ಡಿ.ಕೆ. ಶಿವಕುಮಾರ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ’ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್ ತಿಳಿಸಿದರು.

‘ಇತರೆ ಇಲಾಖೆಗಳಲ್ಲಿ ಶೇ 100ರಷ್ಟು ಬಿಲ್ ಪಾವತಿ ಮಾಡಿರುವುದನ್ನು ಸರ್ಕಾರದ ಗಮನಕ್ಕೆ ತಂದು, ಹೋರಾಟ ಮಾಡಲಾಗಿತ್ತು. ಇದನ್ನು ಸರ್ಕಾರ ಮನ್ನಿಸಿರುವುದು, ಆರ್ಥಿಕ ಸಂಕಷ್ಟದಲ್ಲಿದ್ದ ಗುತ್ತಿಗೆದಾರರಿಗೆ ಸಮಾಧಾನ ತಂದಿದೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಚೇತನ್ಕುಮಾರ್ ಹಾಗೂ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.