ಬೆಂಗಳೂರು: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಬೀದಿ ನಾಯಿಗೆ ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ವಿದ್ಯಾರ್ಥಿಗಳು ಚಿಕಿತ್ಸೆ ಕೊಡಿಸಿದ್ದಾರೆ. ಇದರಿಂದ ನಾಯಿ ಚೇತರಿಸಿಕೊಂಡಿದೆ.

ಆರು ತಿಂಗಳ ಹಿಂದೆ ವಾಹನವೊಂದು ನಾಯಿಗೆ ಗುದ್ದಿದ ಪರಿಣಾಮ ಅದರ ಬೆನ್ನುಮೂಳೆ ಮತ್ತು ಬೆನ್ನುಹುರಿಗೆ ಹಾನಿಯಾಗಿತ್ತು. ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ನಾಯಿಗೆ ಸಂಸ್ಥೆಯ ವಿಜ್ಞಾನಿ ಅನುಪಮಾ ನೇತೃತ್ವದಲ್ಲಿ ವಿದ್ಯಾರ್ಥಿಗಳ ತಂಡ ಚಿಕಿತ್ಸೆ ನೀಡಲು ನಿರ್ಧರಿಸಿ, ಆರ್ಎಂವಿ ಮಲ್ಟಿ ಸ್ಪೆಷಾಲಿಟಿ ವೆಟರ್ನರಿ ಕ್ಲಿನಿಕ್ಗೆ ಕರೆದೊಯ್ದಿತ್ತು. ಅಲ್ಲಿನ ಡಾ. ಅನಿರುದ್ಧ ಅವರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ನಾಯಿಗೆ ಶಸ್ತ್ರಚಿಕಿತ್ಸೆಯ ಬಳಿಕ ಎರಡು ತಿಂಗಳು ಕ್ಲಿನಿಕ್ನಲ್ಲಿಯೇ ಚಿಕಿತ್ಸೆ ಒದಗಿಸಲಾಗಿದೆ. ಲೇಸರ್ ಥೆರಪಿ, ಹೈಡ್ರೊ ಥೆರಪಿ ಮತ್ತು ಫಿಸಿಯೊ ಥೆರಪಿ ನೀಡಲಾಗಿತ್ತು. ಆರು ತಿಂಗಳ ಅವಧಿಯಲ್ಲಿ ನಾಯಿ ಚೇತರಿಸಿಕೊಂಡಿದ್ದು, ಮೊದಲಿನಂತೆ ಓಡಾಡಲು ಪ್ರಾರಂಭಿಸಿದೆ.

‘ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ. ನಾಯಿಯ ಬೆನ್ನುಮೂಳೆಗೆ ಗಂಭೀರ ಹಾನಿಯಾಗಿದ್ದರಿಂದ ತುರ್ತಾಗಿ ಶಸ್ತ್ರಚಿಕಿತ್ಸೆ ನಡೆಸಬೇಕಾಗಿತ್ತು. ಇಲ್ಲವಾದಲ್ಲಿ ಅದು ಬದುಕುಳಿಯುವ ಸಾಧ್ಯತೆ ಕಡಿಮೆಯಿತ್ತು’ ಎಂದು ಡಾ. ಅನಿರುದ್ಧ ತಿಳಿಸಿದ್ದಾರೆ.

ನಾಯಿಯ ಶಸ್ತ್ರಚಿಕಿತ್ಸೆ ಹಾಗೂ ಚಿಕಿತ್ಸೆಗೆ ಅಗತ್ಯ ಇದ್ದ ಹಣವನ್ನು ವಿದ್ಯಾರ್ಥಿಗಳು ದಾನಿಗಳಿಂದ ಸಂಗ್ರಹಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿಯೂ ಅಭಿಯಾನ ನಡೆಸಿ, ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.