ಬೆಂಗಳೂರು: ‘ದಿ ಮಲ್ಲೇಶ್ವರಂ ಕೋ–ಆಪರೇಟಿವ್ ಬ್ಯಾಂಕ್ 103 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಇದೇ 10ರಂದು ಅರಮನೆ ಮೈದಾನದ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ’ ಎಂದು ಬ್ಯಾಂಕ್ನ ಅಧ್ಯಕ್ಷ ರಮೇಶ್ ಬಿ., ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಿ ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್ ನೂರು ವರ್ಷಗಳಿಂದ ಗ್ರಾಹಕರ ನಂಬಿಕೆಗಳಿಸಿ ಲಾಭದಾಯಕ ಹಾದಿಯಲ್ಲಿ ಸಾಗುತ್ತಿದೆ. 1920ರ ಜೂನ್ 20ರಂದು ಮಲ್ಲೇಶ್ವರದ 7ನೇ ಅಡ್ಡ ರಸ್ತೆಯಲ್ಲಿ ಚಿಕ್ಕ ಕೊಠಡಿಯಲ್ಲಿ ಬ್ಯಾಂಕ್ ವ್ಯವಹಾರ ಪ್ರಾರಂಭಿಸಲಾಗಿತ್ತು. ಹೀಗೆ ಆರಂಭವಾದ ಬ್ಯಾಂಕ್ ವ್ಯವಹಾರ ದಿನದಿಂದ ದಿನಕ್ಕೆ ಪ್ರವರ್ಧಮಾನಗೊಳ್ಳಲಾರಂಭಿಸಿತು. ಕೊಠಡಿಯಿಂದ ಚಿಕ್ಕ ಮನೆಗೆ ಅಲ್ಲಿಂದ ವಿಶಾಲ ಕಟ್ಟಡಕ್ಕೆ ಬದಲಾಗುತ್ತಾ ಬ್ಯಾಂಕ್ ಸದೃಢವಾಗಿ ತಲೆ ಎತ್ತಿ ನಿಂತಿದೆ‘ ಎಂದರು.

‘ಹೆಚ್ಚು ಬಡ್ಡಿ, ಸುಲಿಗೆ ಮಾಡುವ ಲೇವಾದೇವಿದಾರರಿಂದ ಬಡ, ಮಧ್ಯಮ ವರ್ಗದ ಜನರನ್ನ ರಕ್ಷಿಸಬೇಕು. ಅವರ ಕೈಗೆಟಕುವ ದರದಲ್ಲಿ ಅಗತ್ಯವಿದ್ದಾಗ ಸುಲಭವಾಗಿ ಸಾಲ ಸೌಲಭ್ಯ ದೊರೆಯುವಂತೆ ಮಾಡಬೇಕೆಂಬುದು ಬ್ಯಾಂಕ್ನ ಸದಾಶಯವಾಗಿತ್ತು. ಅದರಂತೆಯೇ ಬ್ಯಾಂಕ್ನ ಆಡಳಿತ ಮಂಡಳಿ ಕೆಲಸ ಮಾಡುತ್ತಿದೆ’ ಎಂದರು.

‘ದಿ ಮಲ್ಲೇಶ್ವರಂ ಕೋ–ಆಪರೇಟಿವ್ ಬ್ಯಾಂಕ್ ಕೇಂದ್ರ ಕಚೇರಿ ಸೇರಿದಂತೆ ರಾಜಾಜಿನಗರ, ವೈಯ್ಯಾಲಿಕಾವಲ್, ಯಶವಂತಪುರ, ಗಂಗಾನಗರ ಮತ್ತು ಆರ್.ಪಿ.ಸಿ ಲೇಔಟ್ಗಳಲ್ಲಿ ಶಾಖೆಗಳನ್ನು ತೆರೆಯುವ ಮೂಲಕ ವ್ಯವಹಾರವನ್ನು ವೃದ್ಧಿಸಿಕೊಂಡಿದೆ. ಬ್ಯಾಂಕಿನಲ್ಲಿ ಒಟ್ಟು 19,161 ಸದಸ್ಯರು ಇದ್ದಾರೆ. 96,285 ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ’ ಎಂದರು

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಚಿವರಾದ ಕೆ.ಎನ್. ರಾಜಣ್ಣ, ಎಚ್.ಕೆ. ಪಾಟೀಲ, ಸಂಸದ ಡಿ.ವಿ. ಸದಾನಂದಗೌಡ, ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಅತಿಥಿಗಳಾಗಿ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಬ್ಯಾಂಕ್ನ ಉಪಾಧ್ಯಕ್ಷ ಶಂಕರ್ ವಿ., ಅನಂತನ್ ಎ.ಆರ್., ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್. ಎಂ ಸುರೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.