ಬೆಂಗಳೂರು: ಯಲಹಂಕದ ಹಳೇ ಟೌನ್‌ನ ಪ್ರಾಥಮಿಕ ಶಾಲೆಯ ಗ್ರಂಥಾಲಯಕ್ಕೆ ಹಾಕಿದ್ದ ಬೀಗವನ್ನು ಕಳ್ಳರು ಒಡೆದು ಅಪರೂಪದ ಕೃತಿಗಳನ್ನು ಕಳವು ಮಾಡಿದ್ದಾರೆ. ಶಾಲಾ ಮುಖ್ಯ ಶಿಕ್ಷಕ ಎಸ್.ಚಂದ್ರನಾಯ್ಕ ಅವರು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶಾಲೆಯ ಹಳೆಯ ಕಟ್ಟಡದ 2ನೇ ಮಹಡಿಯಲ್ಲಿ ಗ್ರಂಥಾಲಯ ಇತ್ತು. ಗ್ರಂಥಾಲಯದ ಗ್ಲಾಸ್ ರಾಕ್‌ನಲ್ಲಿ ವಿವಿಧ ಲೇಖಕರ ಕೃತಿ ಹಾಗೂ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದ ಕೃತಿಗಳನ್ನು ಇಡಲಾಗಿತ್ತು. ಕಳವು ಮಾಡಿದ ಕೃತಿಗಳ ಬೆಲೆ ₹ 18 ಸಾವಿರದಿಂದ ₹ 20 ಸಾವಿರ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಶಾಲೆಯ ಕಟ್ಟಡ ಶಿಥಿಲವಾಗಿತ್ತು. ಶಿಕ್ಷಣ ಇಲಾಖೆ ಹೊಸ ಕಟ್ಟಡ ನಿರ್ಮಿಸಿತ್ತು. ಆ ಕಟ್ಟಡ ಪಕ್ಕದಲ್ಲೇ ನಿರ್ಮಿಸಿದ್ದ ಹೊಸ ಕಟ್ಟಡಕ್ಕೆ ಕಳೆದ ಸೆ.12ರಂದು ಎಲ್ಲ ತರಗತಿ ಹಾಗೂ ಶಾಲೆಯಲ್ಲಿದ್ದ ವಸ್ತುಗಳನ್ನು ಸ್ಥಳಾಂತರ ಮಾಡಿದ್ದೆವು. ಆದರೆ, ಗ್ರಂಥಾಲಯ ಮಾತ್ರ ಹಳೇ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿತ್ತು. ಅಲ್ಲಿಂದ ಕೃತಿಗಳನ್ನು ಕಳವು ಮಾಡಲಾಗಿದೆ’ ಎಂದು ಶಿಕ್ಷಕರು ತಿಳಿಸಿದ್ದಾರೆ.

‘ಫೆ.20ರಂದು ಪುಸ್ತಕಗಳು ಕಾರಿಡಾರ್‌ನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ವಿದ್ಯಾರ್ಥಿಯೊಬ್ಬ ಗಮನಿಸಿ ಮಾಹಿತಿ ನೀಡಿದ್ದ. ನಾನು ಸ್ಥಳಕ್ಕೆ ತೆರಳಿ ನೋಡಿದಾಗ ಕೆಲವು ಪುಸ್ತಕಗಳು ಕಳವು ಮಾಡಿರುವುದು ಗೊತ್ತಾಯಿತು’ ಎಂದು ಚಂದ್ರನಾಯ್ಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.