ಬೆಂಗಳೂರು: ರಷ್ಯಾ ಮತ್ತು ಭಾರತೀಯ ಸಾಂಸ್ಕೃತಿಕ ಸಂಪ್ರದಾಯಗಳನ್ನು ಬೆಸೆದ ಕಲಾವಿದ ನಿಕೋಲಸ್ ರೋರಿಚ್ ಅವರ 150ನೇ ಜನ್ಮ ದಿನಾಚರಣೆಯ ಪ್ರಯುಕ್ತ ‘ಸ್ಟೊಮಿನಾಯಾ ರೋರಿಚ್’ ಹೆಸರಿನಲ್ಲಿ ಅವರ ಕಲಾಕೃತಿಗಳ ಪ್ರದರ್ಶನವನ್ನು ನವೆಂಬರ್ 8ರಿಂದ 18ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ಏರ್ಪಡಿಸಲಾಗಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್, ‘ಸೇಂಟ್ ಪೀಟರ್ಸ್ಬರ್ಗ್ನಲ್ಲಿ 1874ರ ಅ.8ರಂದು ಜನಿಸಿದ್ದ ನಿಕೋಲಸ್ ಅವರು 1920ರಲ್ಲಿ ಭಾರತಕ್ಕೆ ಬಂದು ಹಿಮಾಚಲ ಪ್ರದೇಶದ ಕುಲು ಕಣಿವೆಯ ನಗ್ಗರ್ ಎಂಬ ಹಳ್ಳಿಯಲ್ಲಿ ವಾಸವಾಗಿದ್ದರು. 7,000ಕ್ಕೂ ಅಧಿಕ ವರ್ಣಚಿತ್ರಗಳನ್ನು, 29 ಪುಸ್ತಕಗಳನ್ನು ಅವರು ರಚಿಸಿದ್ದರು. ಹಿಮದಿಂದ ಆವೃತವಾದ ಪರ್ವತಗಳು, ನದಿಗಳು, ಬೌದ್ಧ ಮಂದಿರಗಳು ಅವರ ಚಿತ್ರದಲ್ಲಿ ಮೂಡಿವೆ’ ಎಂದು ತಿಳಿಸಿದರು.

ಹಿಮಾಲಯ, ಜನರು, ಅಧ್ಯಾತ್ಮ, ಪರಂಪರೆಯ ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಅಧ್ಯಯನಕ್ಕೆ ಮೀಸಲಾಗಿರುವ ‘ಉರುಸ್ವತಿ ಹಿಮಾಲಯನ್’ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅವರ ಮಗ ಸ್ವೆಟೋಸ್ಲೋವ್ ರೋರಿಚ್ ಅವರು ಬೆಂಗಳೂರಿಗೆ ಬಂದು ವಾಸವಾಗಿದ್ದರು. ತಂದೆ ನಿಕೋಲಸ್ ಅವರು ರಚಿಸಿದ್ದ ಪ್ರಸಿದ್ಧ 36 ಚಿತ್ರಗಳ ಜೊತೆಗೆ ಸ್ವೆಟೋಸ್ಲೋವ್ ರಚಿಸಿದ್ದ 63 ಕಲಾಕೃತಿಗಳನ್ನು ಚಿತ್ರಕಲಾ ಪರಿಷತ್ಗೆ ನೀಡಿದ್ದರು. ಕರ್ನಾಟಕ ಚಿತ್ರಕಲಾ ಪರಿಷತ್ ಆರಂಭವಾಗಲು ಕಾರಣಕರ್ತರಲ್ಲಿ ಸ್ವೆಟೋಸ್ಲೋವ್ ಕೂಡ ಒಬ್ಬರಾಗಿದ್ದರು ಎಂದು ಮಾಹಿತಿ ನೀಡಿದರು.

ಭಾರತದ ಕಲಾ ನವರತ್ನಗಳು ಎಂದು ಒಂಬತ್ತು ಶ್ರೇಷ್ಠ ಕಲಾವಿದರನ್ನು ಗುರುತಿಸಲಾಗಿದೆ. ಅದರಲ್ಲಿ ನಿಕೋಲಸ್ ರೋರಿಚ್ ಕೂಡ ಒಬ್ಬರು ಮತ್ತು ಅವರೊಬ್ಬರೇ ವಿದೇಶಿ ಕಲಾವಿದರಾಗಿದ್ದಾರೆ. ರಷ್ಯಾದಲ್ಲಿ ಪ್ರದರ್ಶಿಸಲು ಸಾಧ್ಯವಾಗದ ಕಲಾಕೃತಿಗಳೆಲ್ಲವನ್ನೂ ಭಾರತದಲ್ಲಿ ಅವರು ಪ್ರದರ್ಶಿಸಿದ್ದರು. ರಷ್ಯಾ ಕಮ್ಯುನಿಸ್ಟ್ ದೇಶವಾಗಿರುವುದರಿಂದ ಅಲ್ಲಿ ಅಧ್ಯಾತ್ಮ, ದೇವರಿಗೆ ಸಂಬಂಧಿಸಿದ ಚಿತ್ರ ಪ್ರದರ್ಶನಕ್ಕೆ ಅವಕಾಶಗಳಿರಲಿಲ್ಲ. ಯೇಸು ಸಹಿತ ಅನೇಕರ ಬಗ್ಗೆ ಅವರು ಚಿತ್ರ ರಚಿಸಿದ್ದರು ಎಂದು ವಿವರಿಸಿದರು.

ನ.8ರಿಂದ ಪ್ರದರ್ಶನ ಆರಂಭಗೊಳ್ಳಲಿದ್ದು, ಅದರಲ್ಲಿ ರೋರಿಚ್ ಆರ್ಕೈವ್ನಿಂದ ಹಿಂದೆ ಪ್ರದರ್ಶನವಾಗದೇ ಇರುವ ವಸ್ತುಗಳನ್ನೂ ಪ್ರದರ್ಶಿಸಲಾಗುವುದು. ಈ ಕಾರ್ಯಕ್ರಮವನ್ನು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಲಿದ್ದಾರೆ. ಚೆನ್ನೈನಲ್ಲಿ ರಷ್ಯಾದ ಕಾನ್ಸಲ್ ಜನರಲ್ ವಲೇರಿ ಖೋಡ್ಜೇವ್, ಭರೂಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್.ಎನ್. ಅಗರವಾಲ್ ಅತಿಥಿಗಳಾಗಿರುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಚಿತ್ರಕಲಾ ಪರಿಷತ್ತಿನ ಪದಾಧಿಕಾರಿಗಳಾದ ಟಿ. ಪ್ರಭಾಕರ್, ಲಕ್ಷ್ಮೀಪತಿ ಬಾಬು, ಅಪ್ಪಾಜಯ್ಯ, ರಾಮಕೃಷ್ಣಪ್ಪ, ಶಶಿಧರ ರಾವ್, ಚಂದ್ರಶೇಖರ್, ಸತ್ಯನಾರಾಯಣ ವಿಜಯಶ್ರೀ, ಆರ್.ಜಿ. ಭಂಡಾರಿ, ಉಷಾ, ವಿನೋದಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.